(೧)
ನಿನ್ನ ಭಾವಚಿತ್ರದ ಮೇಲೆ
ಕಣ್ಣೀರ ಹನಿಗಳೀಗ ಇಲ್ಲ ನಿಜ,
ಆದರೆ ಹನಿಗಳ ಕಲೆಗಳು
ಖಾಯಂಮ್ಮಾಗಿ ಉಳಿದಿವೆಯಲ್ಲ.
ಯಾರೋ ನೋವು ಕೊಟ್ಟರು
ಯಾಕೆ ಹೇಳಲಿ ಅವರ ಹೆಸರು?
ಯಾರೋ ಪ್ರೀತಿಯಲಿ ವಿಷಬೆರೆಸಿದರು
ಯಾಕೆ ಹೇಳಲಿ ಅವರ ಹೆಸರು?
ಆದರೂ ಅವರ ಹೆಸರೇ
ನನಗೆ ಪ್ರೀಯವಾಗುತ್ತಿದೆಯಲ್ಲ?
(೨)
ಕಿಸೆಯಲ್ಲಿ ಒಂದು ಕವಡೆಯೂ ಇಲ್ಲ
ಅರಸರ ಸ್ನೇಹ ಮಾಡಿದೆನಲ್ಲ
ಜನರಿಗಾಗಿ ಶತಮಾನಗಳೇ
ಅವನಿಂದ ಕಸಿದು ತಂದಿರುವೆ
ನನಗಾಗಿ ಒಂದು ಕ್ಷಣವೂ ಇಲ್ಲವಲ್ಲ!
ಯಾರಿಗಾಗಿ ಪ್ರಾರ್ಥಿಸಲಿ
ಎರಡೂ ಕೈಗಳ ಮೇಲೆತ್ತಿ
ಶ್ರೀಮಂತ ನಗರಗಳಿಂದ
ಪಕೀರರೇ ಮಾಯವಾದರಲ್ಲ!
ನೀಡುವ ಕೈಗಳ ಹಿಂದಿರುವ
ಆತ್ಮವೇ ಮಾಯಾವಾಗಿದೆಯಲ್ಲ!
ಯಾರಲ್ಲಿ ಬೇಡಲಿ ನಾನು
ಕೈಗಳ ಮೇಲೆತ್ತಿ ಹೇಳಿ
ನಾನು ಯಾರಲ್ಲಿ ಬೇಡಲಿ?
*****