ಹನಿಗವನ ಚುಂಬನ ಪಟ್ಟಾಭಿ ಎ ಕೆ April 27, 2017March 29, 2017 ಇನಿಯಳ ತನುವೆಲ್ಲವೂ ಇನಿಯನಿಗೆ ಚುಂಬನದ ಬನ! ***** Read More
ಹನಿಗವನ ರಜ ಪಟ್ಟಾಭಿ ಎ ಕೆ April 20, 2017March 29, 2017 ಕೆಲವೊಮ್ಮೆ ರಜೆಗಳು ಒಂಟೊಂಟಿಯಾಗಿ ಅಲ್ಲ; ಹಿಂಡು ಹಿಂಡಾಗಿ ಬರುತ್ತವೆ ಕಷ್ಟ ಪರಂಪರೆಗಳಂತೆ! ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ April 13, 2017March 29, 2017 ಗಂಡನಿಗೆ ತೆರಿಗೆ ಭಾರ ಹೆಂಡತಿಗೆ ಹೆರಿಗೆ ಭಾರ ಮಕ್ಕಳಿಗೆ ಪುಸ್ತಕ ಭಾರ ಇದೇ ಸಂಸಾರ! ***** Read More
ಹನಿಗವನ ಅತಿ ಸಂತಾನ ಪಟ್ಟಾಭಿ ಎ ಕೆ April 6, 2017March 29, 2017 ‘ಅತಿ ಸಂತಾನ’ ಎಂದರೆ ಬೆಂಕಿಯೊಡನೆ ಸರಸ; ಅದಕ್ಕಾಗಿಯೇ ಬೇಕು ವಂಕಿಯ ಸಹವಾಸ! ***** Read More
ಹನಿಗವನ ಅಧರ ಪಟ್ಟಾಭಿ ಎ ಕೆ March 30, 2017March 29, 2017 ಅಧರ ಮಧುರ; ಉದರಕ್ಕಲ್ಲ ಮತ್ತೊಂದು ಅಧರಕ್ಕೆ! ***** Read More
ಹನಿಗವನ ಖಾಲಿ ಶೀಷೆ ಪಟ್ಟಾಭಿ ಎ ಕೆ March 23, 2017March 29, 2017 ಹಳೆ ಪೇಪರ್ ಖಾಲಿ ಶೀಷೆಯವ ಬೀದಿಯಲ್ಲಾ ಅಲೆದು ಸುಸ್ತಾಗಿ ಸೇಂದಿ ಅಂಗಡಿ ಸೇರಿದ; ಸೇಂದಿ ಶೀಷೆ ಖಾಲಿ ಮಾಡಿ ‘ಕೊನೆಗೂ ಖಾಲಿ ಶೀಷೆ ಒಂದಾದರೂ ದಕ್ಕಿತಲ್ಲಾ’ ಎಂದು ಸಾಂತ್ವನಗೊಂಡ! ***** Read More
ಹನಿಗವನ ಡೈರಿ ಪಟ್ಟಾಭಿ ಎ ಕೆ March 16, 2017March 29, 2017 ಜನವರಿ ಒಂದರಂದು ಗಿರಾಕಿ ಮ್ಯಾನೇಜರ್ಗೆ ಹಾಕುತ್ತಲೇ ಇದ್ದ ಬೈರಿಗೆ; ಕೇವಲ ಒಂದು ‘ಡೈರಿ’ಗೆ! ***** Read More
ಹನಿಗವನ ಸೂರ್ಯ – ಚಂದ್ರ ಪಟ್ಟಾಭಿ ಎ ಕೆ March 9, 2017March 29, 2017 ‘ಭುವಿ’ ಎಂಬ ತಿಜೋರಿಗೆ ಸೂರ್ಯ ಹಗಲು ಕಾವಲುಗಾರ; ಚಂದ್ರ ರಾತ್ರಿ ಪಾಳಿಯವ! ***** Read More
ಹನಿಗವನ ಹಬ್ಬ ಪಟ್ಟಾಭಿ ಎ ಕೆ March 2, 2017March 29, 2017 ಹಬ್ಬ ಬರುತ್ತಿದೆ ಹಣದ ಗಂಟು ಕರಗಿಸಲು, ಹುಬ್ಬು ಗಂಟು ಇಕ್ಕಿಸಲು! ***** Read More
ಹನಿಗವನ ತುತ್ತು ಮತ್ತು ಮುತ್ತು ಪಟ್ಟಾಭಿ ಎ ಕೆ February 23, 2017July 18, 2018 ‘ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯಬೇಡ’ ಹೀಗೊಂದು ಬರಹ ಲಾರಿಯ ಹಿಂಭಾಗದಲ್ಲಿ; ತುತ್ತು ಕೊಟ್ಟವಳು ಮುತ್ತು ಕೊಟ್ಟಿಲ್ಲವೆ? ಮುತ್ತು ಕೊಡುವವಳು ತುತ್ತು ಕೊಡುವುದಿಲ್ಲವೆ?! ***** Read More