ಮುನಿಯನ್ ಬೋಣಿ

ಮನ್ಸ ಎಲ್ಲಿಂದ ಎಲ್ಗೋದ್ರೂನೆ ಬಾಯ್ ಇತ್ತಂದ್ರೆ ಬದಕ್ದ; ಮೆತ್ಗಿತ್ತಂದ್ರೆ-ಆಳ್ಗೊಂದ್ ಕಲ್ಲು! ತಕ್ಕೊ! ಇಡದಿ ತದಕ್ದ! ೧ ಯಿಡಿದ್ ದಬಾಯ್ಸಿ ಗಸೀಟೇಂದ್ರೆ ಬತ್ತು ತುಂಬಿದ್ ದೊನ್ನೆ! ಒಳ್ಳೆ ಮಾತ್ನಾಗ್ ತತ್ತಾಂತಂದ್ರೆ ಮೊಕ್ಕ್ ಮೂರ್‍ನಾಮ! ಸೊನ್ನೆ! ೨...

ಕವಿಶಿಷ್ಯ

ಕವಿಗಳಿಗೆ ಗುರುವು ತಾನೆಂಬ ಗರುವಿಕೆಯ ಮರು- ಭೂಮಿಯ ಮರೀಚಿಕಾಜಲಪಾನಲೋಲನಾ- ಗುವನು ಅರೆಗಳಿಗೆ, ಬಿಡಿಕರಡುಗವಿತೆಯ ಮೊದಲ ಒಂದೆರಡು ಸಾಲುಗಳ ಲೀಲೆಯಲಿ ಬರೆದ ಬಡ- ಗಬ್ಬಿಗನು ಕೂಡ; ಸ್ವಕಪೋಲಕಲ್ಪಿತದ ಕೀ- ರ್‍ತಿಯ ಪ್ರತಿಧ್ವನಿಯು ತುಂಬುವದು ಕಿವಿಗವಿಯನ್ನು, ತನ್ನ...

ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ, ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ, ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ, ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧|| ಯಾಜುಷ ಶಾಖೆಯ ಪ್ರಚುರ ವಿಪ್ರರ ವಂಶದಿ ಜನ್ಮಮಂತೆ, ಬೌ...

ಆಪ್ತ ಜೀವಕ್ಕೆ

ಈಗ ಹೊರಬಂತೆಲ್ಲ ಸತ್ಯ, ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ; ಯಾರೇನೆ ಆಡಲಿ ಅಪಥ್ಯ ಭಂಡನುಡಿಗಳ ಕೊಂಚ ಸಹಿಸಿಕೊ ಸುಳ್ಳನೆಂಬುದು ಸಿದ್ಧವಾದರೂ, ತನ್ನೊಳಗೆ ಅಥವ ನೆರೆಹೊರೆಗೆ ನಾಚದಂಥವರ ಜೊತೆ ಸ್ಪರ್‍ಧೆ ಹಿರಿಜೀವ ನಡೆಸೀತು ಹೇಗೆ? ಹುಚ್ಚು ಬೆರಳಾಡಿದರು...

ಇದರಾಗ್ ಐತೆ ಮರ್‍ಮ

ಬೆನ್ನಿನ್ ಮೇಗಿನ್ ಸರಟ್ ಓದ್ರೋಯ್ತು ಬೆನ್ ಮ್ಯಾಗ್ ಐತೆ ಚಮ್ಡ! ಯೆಂಡ ತತ್ತ! ಚಮ್ಡ ಓದ್ಮೇಲ್ ಉಟ್ತೈತಾ ಒಂದ್ ದಮ್ಡಿ? ೧ ಬಡವೊರ್ ಬದಕೋ ದಾರೀಂತಂದ್ರೆ- ಈ ಮಾತ್ನಾಗ್ ಐತ್ ಮರ್‍ಮ! ಕುಡಕನ್ ಮಾತ್...

ಮುಡಿಪಿದ ಹೂ

ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ,...

ಮರೆತೆ

ಬಾಳುವೆಯ ಗೂಡೊಳಗೆ ತತ್ತಿಯಿದನೆಂದು ಮೃತ್ಯು ತಾನಿಕ್ಕಿ ಮೆಯ್ಗರೆಯಿತೆನಗರಿವೆ? ಆಸೆಯಾ ಗರಿಗೆದರಿ ಬಯಲಲಲೆವಂದು ನಿನ್ನನಾಂ ಮರೆತೆ, ಮರೆತೆನ್ನ ತಿರಿತಿರಿವೆ! ೪ ಬಾಸೆಯಂ ಬೇಡಿ ನಾನರಚುವಂದೆನ್ನ ಕಯ್ಯೊಳಾರ್ಮರಸಿಟ್ಟರೀ ಗಿರಿಕೆಯನ್ನ? ನಾನರಿಯೆ, ಗುಲ್ಲನಿದನಾಡಿಸುತ ನಿನ್ನ ಮರೆತೆನೊಯ್ಯನೆ ಮರೆತೆ ಮನವಿಯನ್ನೆನ್ನ!...

ಇತ್ತೆಲ್ಲಿ ಮತ್ತೊಂದು ಟ್ರಾಯ್ ?

ಯಾಕೆ ದೂಷಿಸಬೇಕು ನಾನು ಅವಳನ್ನು ನನ್ನ ಬಾಳನ್ನು ವ್ಯಥೆಯಿಂದ ತುಂಬಿದಳೆಂದು? ಅರಿಯದವರಿಗೆ ಬೋಧಿಸಿದಳೆಂದು ಇತ್ತೀಚೆ ಸಲ್ಲದ ಅತ್ಯುಗ್ರ ಮಾರ್‍ಗಗಳನ್ನು, ಇಲ್ಲವೇ ಹಿರಿಜೀವಗಳಿಗೆ ಕಿರುದಾರಿ ಒಡ್ಡಿದಳೆಂದು? ಕಾಮನೆಗೆ ತಕ್ಕಂಥ ಕೆಚ್ಚು ಅವರಲ್ಲಿತ್ತೆ? ಘನತೆ ಕಡೆದಿಟ್ಟ ಉರಿಯಂಥ...

ಬಿಕ್ಸೆ

ನನ್ ಎಡ್ತಿ ನುಗ್ಗಿದ್ಲು ಜೋಬಿಗ್ ಕೈ ಆಕಿದ್ಲು ಮುನಿಯಣ್ಣ ಯೆಂಡಕ್‌ ಕಾಸಿಲ್ಲ- ಸಿರಿಕಿಸ್ನ ನಿಂತೌನೆ! ಕುಚೇಲ ಬಂದೌನೆ! ಏನಾರ ಕೊಡಲೇಬೇಕಲ್ಲ! ೧ ನಿನ್ ಯೆಂಡ ಬೇಡ್ತೀನಿ ಕೊಡದಿದ್ರೆ ಆಡ್ತೀನಿ ಮುನಿಯ ನಿನ್ ಮೇಲೊಂದು ಮಟ್ಟು!...

ನಾನು-ನೀನು

ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು ನನ್ನ ಜೀವದ...