
ನಿನ್ನ ನಲಿವಿನ ನೆರಳಲ್ಲಿ ಮಲಗಿದ್ದ ನನ್ನ ನೋವುಗಳು ಸಮಾಧಿ ಸೇರಿದ್ದೇ ತಿಳಿಯಲಿಲ್ಲ *****...
ನೀ ಎಷ್ಟು ಬೈದರೂ ನನಗೆ ನೋವಿಲ್ಲ. ಮಾತು ದಹಿಸಿ ಮೌನ ಸ್ರವಿಸುವ ನಿನ್ನ ಮುನಿಸು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. *****...
ಎದೆಯಲ್ಲಿ ಅದುಮಿಟ್ಟುಕೊಂಡ ಪ್ರೀತಿಯ ಹೇಗೆ ಹಾರಿ ಬಿಡಬೇಕೋ ತಿಳಿದಿಲ್ಲ *****...
ಎದೆಯೊಳಗೆ ಒಲವಿನ ಹೂ ಮುಡಿಸಿದ ಹುಡುಗಿ ದೂರ ನಿಂತು ಕಣ್ಣರಳಿಸಿದ್ದಾಳೆ. ನನ್ನ ಕಣ್ಣಂಚು ಒದ್ದೆಯಾಗಿದೆ. *****...
ನೀನೆಂದರೆ ಮುನಿಸಿನ ಸಹವಾಸ ಅಚ್ಚಿಕೊಂಡಷ್ಟೂ ದೂರ ಸರಿಯುವ ಆಗಸ *****...
ಮನದಲ್ಲಿ ತೆರೆ ಕಾಣದ ಕನಸಿನ ಚಿತ್ರದ ಹೆಸರು ಅವಳ ಒಡಲು *****...
ನಿನ್ನ ಹುಸಿ ಮುನಿಸಿನೆದುರು ಮಂಡಿಯೂರಿ ಕುಳಿತ ನನ್ನ ಅಹಂ ಮೂಳೆ ಮುರಿದುಕೊಂಡು ಮೂಲೆ ಸೇರಿದೆ *****...
ಸಾವಿರ ಮುನಿಸುಗಳು ಸುಳಿದರೂ ಸರಿಯದಿರಲಿ ಒಲವು ಕರಗದಿರಲಿ ನಲಿವು *****...
ದಿಕ್ಕು ತಪ್ಪುವುದೇ ಬದುಕೆಂದು ನಂಬಿದವನಿಗೆ ನಿನ್ನ ಪ್ರೀತಿಯೇ ದಿಕ್ಕು *****...
ರಾತ್ರಿ ಸುರಿದ ಮಂಜಿನ ಮಳೆಯಲ್ಲಿ ನಡುಗುತ್ತ ನಾನೊಬ್ಬನೇ ನೆನೆದೆ ಅವಳು ಬೆಚ್ಚಗೆ ಮಲಗಿದ್ದಳು… ಹಸಿ ಕನಸುಗಳ ಮಡಿಲಲ್ಲಿ *****...













