Home / ಏಕತಾರಿ

Browsing Tag: ಏಕತಾರಿ

ಸ್ವಾಮಿ ಬಾರೊ ನಿಸ್ಸೀಮ ಬಾರೊ ಶಿವ ಕಂದ ಬಾರೊ ಬಾರೊ ಜಗದ ಕೀರ್ತಿ ಕಾರ್ತೀಕ ಬಾರೊ ಜಗದಂಬೆ ಕುವರ ಬಾರೊ || ೧ || ಕೊರಡು ಚಿಗುರಿ ಕವಲಾಗಿ ಜೀವಸೆಲೆ | ಎಲೆ ಹೂವು ಹಣ್ಣು ಬರಲಿ ಬರಡು ಭೂಮಿ ಹಸಿರಾಗಿ ಉಸಿರಿಸಲಿ | ಕುಸುರುಕಾಳು ತರಲಿ || ೨ || ಶವದಿ ...

ಹೋಗೋಣ ಬಾರೆ ಸಖೀ ತೀರಕೆ ಕಲಕಲ ಹರಿಯುವ ನದಿಯಾ ತೀರಕೆ || ಪ|| ಮಧುರ ರಸಾಮೃತ ನಾದವ ಹರಿಸುತ ಮೋಹನ ಮುರಳೀ ಲೋಲನು ಇರುವ ಹಸಿರೆಳೆ ಹುಲ್ಲನು ಮೇಯದೆ ಆಲಿಸಿ ಗೋವುಗಳೆಲ್ಲಾ ನಿಂತಿಹ ತೀರಕೆ || ೧ || ತಳಿರಿನ ಸೊಗಸಿನ ಹಾಸಿಗೆ ಹಾಸಿ ವಿಧ ವಿಧ ಹೂಗಳ ಮಾ...

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ ಜ್ಞಾನ ಸಾಗರದಲೀಜಿ ಹರವ ನೋಡಲ...

ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ ಪಾವನಗೊಳಿಸೇ ಅದರಲಿ ಕುಳಿತು || ೧ || ಎದೆಯ ಬಟ್ಟಲು ಭಕ್ತಿ ತೀರ್ಥದಿ ತುಂಬಿ ...

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ || ಗರ್ಭದಿಂದ ಹೊರಬಂದು ಕೂಸು ತ...

ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ ಕೋಟಿ ಜನುಮಗಳ ಸಮುದ್ರ ಮಥನದಿ ಅಮ್ಮತವನ್ನೆ ತಂದ || ೨ || ವಿಷಯಸಾಗರದಿ ವಿಷದ ಭೋಗದಲಿ ಜೀವ ಕೊಡ...

ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ || ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ || ನಾದವೇ ಅನಾದವೇನೊ | ಆದಿಯೇ ಆನಾದಿಯೇನೊ ವೇದಗಳೇ ಗೆಜ್ಜೆಯಾಗಿ | ಪಾದದಲ್ಲ...

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು ನನ್ನ ಪುಣ್ಯ ಪುಣ್ಯ ಎಂಥ ಸುಕೃತುವೋ ಇದನು ಸವಿಯುವುದು ನಾನೆ ಧನ್ಯ ಧನ್ಯ || ೧ || ಎತ್ತ ನೋಡಿದರು ಪ್ರಕೃತಿ ಮಾತೆಯ ಭವ್ಯ ದಿವ್ಯ ರೂಪಾ ಅವಳ ಮಡಿಲಿನಲಿ ನಲ್ಮೆವಡೆಯುವಾ ಮಗುವಿನಾ ಕಲಾಪ || ೨ || ಕಣ್ಣು ಹಾಯಿಸುಲ...

ಬಾರಯ್ಯಾ ಎನ್ನ ಎದೆಗೆ ಎದೆ ಗುಡಿಯ ಪೀಠಕ್ಕೆ ಬಾರಯ್ಯಾ ಎನ್ನ ಎದೆಗೆ || ಪ || ಕತ್ತಲು ಬೆಳಕಾಟ ಇನ್ನೆಷ್ಟು ದಿನವಯ್ಯಾ ಚಿತ್ತವೂ ಮಸಕೂ ಮಸಕಾಗಿದೆ ಏಳಂತೆ ಬೀಳಂತೆ ಅಳುವಂತೆ ನಗುವಂತೆ ಅಂತಿಂತು ನೀನಂತೂ ದೂರವಾದೆ || ೧ || ಹಸಿವಾಗಿ ಬಾಯಾರಿ ತಪನಂತೆ...

ನೆಲದ ಮೇಲೆ ಬಾಳುತಿಹನು ಹಾರಲೊಲ್ಲ | ನರನು ಹಾರುವಾಸೆ ಬಿಟ್ಟು ಅವನು ಬಾಳಲಿಲ್ಲ || ೧ || ಮೇಲೆ ಮೇಲೆ ಹಾರಲೆಂದು ಏಣಿ ಹಾಕಿ | ಅಲ್ಲಿ ಕಾಲಹಾದಿ ಇಲ್ಲವೆಂದು ಎಣಿಕೆ ಹಾಕಿ || ೨ || ಮಂಜುಗಡ್ಡೆ ಮುಚ್ಚಿಬಿಟ್ಟು ಕಾಣದಂತೆ | ಶಿಖರ ತಲೆಯನತ್ತ ಮುಗಿಲಿ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...