ಹನಿಗವನ ನಿನ್ನ ನೀ ನಂಬು ಪರಿಮಳ ರಾವ್ ಜಿ ಆರ್ November 16, 2016February 3, 2016 ಸಂಬಂಧಿಕರನ್ನು ನಂಬಿದರೆ ಆದೀತು ದಿಗ್ಬಂಧ ಸ್ನೇಹಿತರನ್ನು ನಂಬಿದರೆ ಆದೀತು ಅನಾಹುತ ನಿನ್ನನೇ ನೀ ನಂಬು ಜಡಭರತ ಎದ್ದೇಳು ಅನವರತ. ***** Read More
ಹನಿಗವನ ಸುವ್ವಾಲೆ ಪರಿಮಳ ರಾವ್ ಜಿ ಆರ್ November 9, 2016February 3, 2016 ಏರಿದರೆ ಜಾರಬೇಕು ಜಾರಿದರೆ ಏರಬೇಕು ಕೂದಲೆಳೆಯಲಿ ಉಯ್ಯಾಲೆ ಸುಖ ದುಃಖದ ಸುವ್ವಾಲೆ ***** Read More
ಹನಿಗವನ ಉತ್ಸವ ಪರಿಮಳ ರಾವ್ ಜಿ ಆರ್ November 2, 2016February 3, 2016 ಸಂಬಳ ಬರುವುದು ಮಾಸೋತ್ಸವ, ಬಡತನ ಸವೆಯುವುದು ನಿತ್ಯೋತ್ಸವ! ***** Read More
ಹನಿಗವನ ಅನಿಶ್ಚಯತೆ ಪರಿಮಳ ರಾವ್ ಜಿ ಆರ್ October 26, 2016February 3, 2016 ಇವತ್ತು ಇದ್ದು ನಾಳೆ ಇಲ್ಲ ಮಳೆ, ಬೆಳೆ, ಕಳೆ ಇವತ್ತು ಇದ್ದು ನಾಳೆ ಇಲ್ಲ ಸ್ಥಾನ, ಮಾನ, ಪ್ರಾಣ! ***** Read More
ಹನಿಗವನ ಬೇಡಿಕೆ ಪರಿಮಳ ರಾವ್ ಜಿ ಆರ್ October 19, 2016February 3, 2016 ಕಲಿಯುಗದ ಕಸದ ಬುಟ್ಟಿ ಬರಿದು ಮಾಡೋ ಬಕಾಸುರ! ಧೂಮಪರಿಸರ ಮಾಲಿನ್ಯ ದೂರಮಾಡೋ ಭಸ್ಮಾಸುರ! ***** Read More
ಹನಿಗವನ ಎಳೆತ ಪರಿಮಳ ರಾವ್ ಜಿ ಆರ್ October 12, 2016February 3, 2016 ಹೆಣ್ಣೆಂಬ ಪ್ರಶ್ನೆಯಲಿ ಗಂಡಿನ ಕೊರಳೆಳತ ಗಂಡೆಂಬ ಗೂಟಕ್ಕೆ ಹೆಣ್ಣೆತ್ತಿನ ಗಾಣದೆಳೆತ! ***** Read More
ಹನಿಗವನ ಪಂಚಾಮೃತ ಪರಿಮಳ ರಾವ್ ಜಿ ಆರ್ October 5, 2016February 3, 2016 ಮಗುವು ಅಮ್ಮನ ಕೇಳಿತು - ಹಾಲು, ಬೆಲ್ಲ, ಜೇನು, ತುಪ್ಪ, ಮೊಸರು ನೆಕ್ಕಿ ಚಪ್ಪರಿಸದೆ ನಿಂತನೇಕೆ? ದೇವ ಬೆಪ್ಪ, ನಮ್ಮ ತಿರುಪತಿ ತಿಮ್ಮಪ್ಪ! ***** Read More
ಹನಿಗವನ ಕರೆ ಪರಿಮಳ ರಾವ್ ಜಿ ಆರ್ September 28, 2016February 3, 2016 ಕೈ - ಬಿಸಿ ಮಾಡಿದರೆ ಕೈ ಬೀಸಿ ಕರೆಯುವರು ಜೇಬು ತುಂಬಿಸಿದರೆ ಜವಾಬು ಹೇಳಿ ಕೆಲಸ ಮುಗಿಸಿ ಕರೆಯುವರು ಇವರು ನಮ್ಮ ಸರ್ಕಾರಿ ನೌಕರರು! ***** Read More
ಹನಿಗವನ ಏನು ಮಾಡಬೇಕು ಪರಿಮಳ ರಾವ್ ಜಿ ಆರ್ September 21, 2016February 3, 2016 ಹುಡುಗಿ ಬಂದರೆ ತಲೆ ಎತ್ತಬೇಕು ಅಮ್ಮ ನೋಡಿದ್ರೆ ಬೆನ್ನು ತಿರುಗಿಸಬೇಕು ಅಪ್ಪ ನೋಡಿದ್ರೆ ಆಕಾಶ ನೋಡಬೇಕು ಅಜ್ಜ ಅಜ್ಜಿ ಕಂಡರೆ ತಲೆತಗ್ಗಿಸಬೇಕು ಮಾವ ಬಂದರೆ ಮದುವೆಗೆ ಹೂ ಅಂತ ಕತ್ತ ಕುಣಿಸಬೇಕು! ***** Read More
ಹನಿಗವನ ಸಂಬೋಧನೆ ಪರಿಮಳ ರಾವ್ ಜಿ ಆರ್ September 14, 2016February 3, 2016 ಅಯ್ಯೋ! ಅಂದರೆ ಸ್ವರ್ಗ ಎಲವೋ! ಎಂದರೆ ನರಕ ಸಾರ್! ಎಂದರೆ ಮರ್ತ್ಯ ಮ್ಯಾಡಮ್! ಎಂದರೆ ಪಾತಾಳ ದೇವರೇ! ಅಂದರೆ ಆಕಾಶ ರಾಜ! ಅಂದರೆ ಭೂಲೋಕ ಡಾರ್ಲಿಂಗ್! ಅಂದರೆ ಕೈಗೆ ಸ್ಲಿಂಗ್ ಮಾಯಾಲೋಕ!! ***** Read More