ಹನಿಗವನ ಕಾಲನ ಮಹಿಮೆ ಪರಿಮಳ ರಾವ್ ಜಿ ಆರ್ February 18, 2020November 24, 2019 ಕಪ್ಪಗಿದ್ದ ಕೂದಲು ಬೆಳ್ಳಗಾಯಿತು ಕಾಲನ ಕೈ ಷೇಕಿನಲ್ಲಿ! ಗಟ್ಟಿಗಿದ್ದ ದೇಹ ಮೆತ್ತಗಾಯಿತು ಕಾಲನ ಕೈ ಕುಸ್ತಿ ಆಟದಲ್ಲಿ! ***** Read More
ಹನಿಗವನ ಬೊಂಬೆಯಾಟ ಪರಿಮಳ ರಾವ್ ಜಿ ಆರ್ February 11, 2020November 24, 2019 ಬಾಳೊಂದು ಬೊಂಬೆಯಾಟವಯ್ಯ! ಬಾಲ್ಯಾವಸ್ಥೆ ಮೇಣದ ಬೊಂಬೆ ಯೌವ್ವನವು ಗಾಜಿನಾಬೊಂಬೆ ಮಧ್ಯವಯೋಮಾನ ಲೋಹದಾ ಬೊಂಬೆ ವೃದ್ಧಾಪ್ಯ ಮತ್ತೆ ಮಣ್ಣಿನಾ ಬೊಂಬೆ! ***** Read More
ಹನಿಗವನ ಬದುಕು ಪರಿಮಳ ರಾವ್ ಜಿ ಆರ್ February 4, 2020November 24, 2019 ಈ ಬದುಕು ಹೀಗೆ ಪಾಕೆಟಿನ ಹಣದಂತೆ ಖರ್ಚು ಆದುದು ಕಳುವು ಆದುದು ತಿಳಿವುದು ಬದುಕು ಸವೆದು ಮುಗಿದ ಮೇಲೆ! ***** Read More
ಹನಿಗವನ ಗಾಳಿಪಟ ಪರಿಮಳ ರಾವ್ ಜಿ ಆರ್ January 28, 2020November 24, 2019 ಬಾಳೊಂದು ಗಾಳಿಪಟ ಸೂತ್ರ ಆಡಿಸಿ ಬಾನ ಮುಟ್ಟಿದರು ಕಂಭ, ಗಿಡ ಗಾಳಿ ಬಡಿತಕ್ಕೆ ನೆಲವ ಅಪ್ಪಲೇಬೇಕು! ***** Read More
ಹನಿಗವನ ಅಭಂಗ ಪರಿಮಳ ರಾವ್ ಜಿ ಆರ್ January 21, 2020November 24, 2019 ಬಾಲ್ಯದಲ್ಲಿ ತುಂಟುತನದ ಮಂಗ ಯೌವ್ವನದಲ್ಲಿ ಯಾರಿಗಂಜದ ಸಿಂಗ ವೃದ್ಧಾಪ್ಯದಲ್ಲಿ ಕುಂಟುತನದ ಸಂಗ ಇದು ಜೀವನ ಅಭಂಗ! ***** Read More
ಹನಿಗವನ ಪ್ರತಿಕ್ರಿಯೆ ಪರಿಮಳ ರಾವ್ ಜಿ ಆರ್ January 14, 2020November 24, 2019 ಹುಟ್ಟನ್ನು ಮಂಗಳದ ಬೊಟ್ಟಿಟ್ಟು ಬರಮಾಡುವಿರಿ ಸಾವನ್ನು ಸುಟ್ಟು ಬೂದಿ ಹಿಡಿಮಾಡಿ ಗೋರಿ ತೋಡುವಿರಿ ***** Read More
ಹನಿಗವನ ಜಾರು ಬಂಡೆ ಪರಿಮಳ ರಾವ್ ಜಿ ಆರ್ January 7, 2020November 24, 2019 ಬಾಳೊಂದು ಜಾರು ಬಂಡೆ ಹತ್ತಿ ಇಳಿವುದು ತಡವರಿಸಿದರೆ ಜೋಕೆ! ತಲೆಮಂಡೆ! ***** Read More
ಹನಿಗವನ ನೆರಳು ಪರಿಮಳ ರಾವ್ ಜಿ ಆರ್ December 10, 2019June 5, 2019 ನನ್ನೊಡನೆ ಹುಟ್ಟಿ ನನ್ನೊಡನೆ ಸಾಯುವೆ ಹೇ! ನನ್ನ ಒಡನಾಡಿ! ನನ್ನ ಒಳನಾಡಿ ಬಡಿತವನು ನೀ ಕೇಳಲಾರೆ ಏನು? ***** Read More
ಹನಿಗವನ ಗಾಜಿನ ಗೋಡೆ ಪರಿಮಳ ರಾವ್ ಜಿ ಆರ್ December 3, 2019June 5, 2019 ನನ್ನ ನಿನ್ನ ಮಧ್ಯೆ ಗಾಜಿನ ಗೋಡೆ ನೀ ಕಣ್ಣ ತುಂಬಿದರು ತೋಳು ಬರಿದು ನೀ ಭಾವ ತುಂಬಿದರು ಹೃದಯ ಬರಿದು ***** Read More
ಹನಿಗವನ ಗಾಜಿನ ಹೃದಯ ಪರಿಮಳ ರಾವ್ ಜಿ ಆರ್ November 26, 2019June 5, 2019 ನನ್ನ ಜೀವದ ಹಾವಭಾವಗಳು ಬಡಿತ ಬಿರುಕಿನಲಿ ಹೋಳು ಹೋಳಾಗುವುದು ನನ್ನದೊಂದು ಗಾಜಿನ ಹೃದಯ ***** Read More