ಗೋಪುರ ಗೃಹ

ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ - ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು - ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ?...

ನಂ ಮುನಿಯಂದು ಜರ್‍ಬು

ಯಿಂದೆ ಲೋಟ್ದಾಗ್ ನೀರ್ ಇಟ್ಕೊಂಡಿ ‘ಚೂ ಮಂತ್ರಾ’ಂದ ಏಸು! ಇಟ್ ನೀರೆಲ್ಲ ಯೆಂಡ್ ಆಗೋಯ್ತು! ಅದು ಕೆಲಸ! ಬೇಸು! ೧ ಮಾತ್ಗೇಳ್ತೀನಿ- ಯಿಂದಿನ್ ಕಾಲ್ದಾಗ್ ಎಂತೆಂತೋರ್ ಇದ್ರಂತ! ಈಗ್ಲು ಔರೆ-ದೊಡ್ ಪಡಕಾನೆ ಇಟ್ಟಾಕ್ಸ್ನೇನೆ ಬಂತ!...

ಸತ್ಯಸಂಕಲ್ಪ

ಜನ್ಮ ಜನ್ಮಾಂತರದ ಸತ್ಯ ಸಂಕಲ್ಪವೇ, ಫಲಹೊಂದು ಕಾಲ ಬಂದಾಗ. ಒಗರಿಳೆದು ಹುಳಿ ಹೋಗಿ, ಸವಿ ಹವಣುಗೋಳುತಿರೆ, ಬಣ್ಣ ಹೊಂಬಣ್ಣ- ಕೇರುತಿರೆ, ಬಳುಕಿ ಗಾಳಿಗೆ, ಬೆಂದು ಬಿಸಿಲಿನಲಿ, ನಾನು ಕಾಯುವೆ; ಹಸಿವ ಎಸರೇರಿ ಕುದಿಬಂದು ಉಕ್ಕಿ...

ಏನೂ ಮಾಡದೆ

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ ಹಾರುವ ಹಕ್ಕಿ...

ಕವಚ

ಜೋತು ಬಿದ್ದಿದೆ ಮೇಲೆ ಬಣ್ಣ ಬಣ್ಣದ ಕವಚ ಸತ್ತ ಮೌಲ್ಯಗಳ ಹೆಣಭಾರ. ಹೊತ್ತು ಸಾಗಿರುವೆ ಬಹುದೂರ ಹೀಗೇಯೇ ಮರುಮಾತಿಲ್ಲದೆ. ಸನಾತನ ಬೇರುಗಳು ಬಿಳಲುಗಳು ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು ಹೊತ್ತಿರುವ ಕವಚಕ್ಕೆ ಮೆತ್ತಿದೆ ಬೆವರಿನ ಜಿಡ್ಡು...

ಕನ್ನಡಿಗರ ತಾಯಿ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲನೆಮ್ಮೆವು- ತನು ಕನ್ನಡ, ಮನ...

ಬೈಜಾಂಟಿಯಮ್ಮಿಗೆ ಯಾನ

೧ ಮುದುಕರಿಗೆ ತಕ್ಕ ನಾಡಲ್ಲ ಅದು. ಪ್ರಾಯದ ಹೆಣ್ಣು ಗಂಡುಗಳೆಲ್ಲ ತೋಳತೆಕ್ಕೆಗಳಲ್ಲಿ, ಹಕ್ಕಿ ಮರಮರದಲ್ಲಿ - ಸಾವಿರುವ ಸಂತಾನ - ಹಾಡಿನುಬ್ಬರದಲ್ಲಿ, ಸ್ಯಾಮನ್ ಮೀನುಗಳ ಪಾತ, ಮೆಕರೆಲ್ ಕಿಕ್ಕಿರಿದ ಕಡಲು, ಗಾಳಿ ನೆಲ ಜಲ...

ತ್ರುಪ್ತಿ

‘ದುಡ್ ಉಳ್ಳೋರು ದುಡ್ ಇಲ್ದೋರು ಲೋಕಕ್ ಎಳ್ಡೇ ಜಾತಿ!’ ಅಂತಂದೌನೆ ನಮ್ಮೌನ್ ಒಬ್ಬ! ಏ ಹೈ ಸಚ್ಚಿ ಬಾತ್ಙಿ! ೧ ಪೈಲಾದೋರು ದುಡ್ಡಿಗ್ ದತ್ತು- ಔರ್ ಕಂಡಿಲ್ಲ ತ್ರುಪ್ತಿ! ಕಾಸ್ ಇಲ್ದಿದ್ರು ದುಸರೀಯೋರ್‍ಗೆ ಇದ್ದಿದ್ರಲ್ಲೆ...

ಸುಹೃದ

ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ. ಯುಗಜುಗದ ಪರಿಪಾಕದಿಂದ ಬರಲಿರುವಂಥ ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ- ಗಳು ನಾವು, ಕಣ್ಣ ಆಚೆಗೆ...

ಯಾಕೆ ನಿಂತಿ ಬೆರ್‍ಚಪ್ಪ

ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ...