ಜೋತು ಬಿದ್ದಿದೆ ಮೇಲೆ
ಬಣ್ಣ ಬಣ್ಣದ ಕವಚ
ಸತ್ತ ಮೌಲ್ಯಗಳ ಹೆಣಭಾರ.
ಹೊತ್ತು ಸಾಗಿರುವೆ ಬಹುದೂರ
ಹೀಗೇಯೇ ಮರುಮಾತಿಲ್ಲದೆ.
ಸನಾತನ ಬೇರುಗಳು ಬಿಳಲುಗಳು
ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು
ಹೊತ್ತಿರುವ ಕವಚಕ್ಕೆ ಮೆತ್ತಿದೆ
ಬೆವರಿನ ಜಿಡ್ಡು ಅಂಟು
ಘಾಟು ತುಂಬಿದ ಬೆವರ ವಾಸನೆ.
ಮುಚ್ಚಿದ ಮುಸುಕಿನ ಚಾದರ
ಹೊತ್ತು ತಂದಿರುವೆ ಬಹುದೂರ
ಸಿಡಿಮಿಡಿಯಾಗಿ ದೂರ ತಳ್ಳುವೆ
ನನಗರಿಯದಂತೆ ನಾನೇ
ಕವಚ ಕಿತ್ತುಹಾಕುತ್ತಿರುವೆ.
ಸತ್ತಿರುವ ಸೂತನ ಬಿಳಲುಗಳ
ಒಂದೊಂದಾಗಿ ಪಳೆಯುಳಿಕೆ ಬೇರುಗಳ
ಕಳಚುತ್ತಿರುವೆ ಹೀಗೆಯೇ
ಹೊತ್ತಿರುವ ಭಾರಗಳ, ದಾಗೀನ
ಒಂದೊಂದಾಗಿ…. ಒಂದೊಂದಾಗಿ…
*****