ತಲೆಯಲ್ಲಿ ಬುದ್ಧಿಶಕ್ತಿಯಿಲ್ಲದಿದ್ದರು
ತಾ ಹೆಸರುವಾಸಿಯಾಗುವ ಬಯಕೆ
ಪತ್ರಿಕಾ ಪ್ರತಿನಿಧಿಗೆ ನಿರ್ಲಕ್ಷಿಸಿ
ತಾನೇ ಶ್ರೇಷ್ಠವೆಂದು ಮೂರ್ಖತನ ಪ್ರದರ್ಶಿಸುವನು.
ಪತ್ರಕರ್ತನ ಮಹತ್ವ ಅರಿಯದೆ
ನಾನೇ ವಾರ್ತಾ ಅಧಿಕಾರಿ ಎನ್ನುವನು
ಪತ್ರಿಕಾ ವರದಿಗಳು ವಿಮರ್ಶೆ ಮಾಡಿ
ಪತ್ರಿಕೆಯು ಟೀಕೆಗೆ ಗುರಿಪಡಿಸುವನು.
ಜಾತಿಮತಭೇದ ಮಾಡುತ್ತ
ಪತ್ರಕರ್ತರಿಗೆ ಕೀಳುದೃಷ್ಟಿಯನ್ನಿಯುವನು
ಗರ್ವ ಅಹಂಕಾರದಿ ನಡೆದುಕೊಂಡು
ಪತ್ರಕರ್ತರ ವಿಶ್ವಾಸ ಕಳೆದುಕೊಳ್ಳುವನು.
ಬೆಳೆಯು ಸಿರಿ ಮೊಳಕೆ ಎಂಬ
ಅರಳುವ ಮೊಗ್ಗು ಕೈದಿ ಚಿವುಟುವಂತೆ
ಬೆಳೆಯುತ್ತಿರುವ ಪತ್ರಕರ್ತರನು
ಕೆಟ್ಟದಾರಿಗೆ ಕೊಂಡೊಯ್ಯುವನು.
ಪತ್ರಕರ್ತರಲ್ಲಿನ ಪ್ರತಿಭೆ ಅರಿಯದೆ
ತಾ ಮೂರ್ಖತನದಿ ವರ್ತಿಸುವನು
ತಾ ಅಧಿಕಾರದಲ್ಲಿರುವುದನ್ನು ಮರೆತು
ತಾ ಕಾಗೆ ಅಧಿಕಾರ ಚಲಾಯಿಸುವನು.
ಸುಜ್ಞಾನಿಯನ್ನು ಅರಿಯದೇ ತಾ
ಅಜ್ಞಾನಿಗಳ ಸಹವಾಸ ಮಾಡುವನು
ತಾ ಹಾಳಾಗುತ್ತಿದನ್ನು ಅರಿಯದೇ
ತಾ ಪತ್ರಕರ್ತರಿಗೆ ಹಾಳುಬಾವಿಗೆ ತಳ್ಳುವನು.
*****