ದುರ್ಗಾಮಾತೆಗೆ

ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ !
ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!!
ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ
ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ

ಗಗನದಲಿ ಗುಡುಗುವಾ ಗುಡುಗಿವಳು
ಕಾರ್‌ಮೋಡಗಳೇ ತಾರಕಾಸುರನ ತಂಡದವರು
ಸಿಡಿವ ಮಿಂಚು ಸಿಡಿಲುಗಳೇ ಇವಳಾಯುಧಗಳು
ಈ ಸುರಿವ ಮಳೆಯೇ ರಿಪುಗಳ ಕಾಳಗದ ಬೆವರು

ಧರೆಯಾಕಾಶಕೂ ತಾಳ್ದ ವಿರಾಟರೂಪದವಳು
ಇಂದೋ ಮಹಾನವಮಿ; ತೋರುವಲು ಜಗನ್ಮಹಿಷಿ
ನಡಗುವ ಎಡವುವ ತನ್ನಯ ಮಕ್ಕಳ ಕಾಯ್ವಳು
ಓ ದುರ್ಗೆ! ನಮಿಸುವೆ ತಾಯೇ!! ಆದಿ ಅವತಾರ ಪುರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಸಿವೆ ಎಣ್ಣೆ
Next post ಅಡಿಗೆ ಪಾತ್ರೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…