ಅಮರ‘ಶಿಲ್ಪಿ’

ಸೃಜನ ಜನಕನ ಪ್ರೀತಿ ತನಯ
ಸೃಷ್ಠಿ ದೃಷ್ಠಿದಾತನ ಚಿನ್ಮಯ |

ಕಲಾ, ಕಲೆ, ಕಲಾಲಯದ ಕಾವ್ಯವೊ
ನಿನ್ನ ಕಣ್ಣ ಕೈಗಳ ಲೀಲೆಯು
ಲೋಕ ಲೋಕಕೆ ಹೇತು ಸಿಂಧುವು
ನಾಕ ಭುವನದ ಕೀರ್ತಿಯು |

ಶಿಲೆಯು, ಧಾತುವು ಸುಮವರಳಿನರಳು
ನವನೀತಗೊಳಿಸುತೆ ನೇಹದಿ
ಲಾವಣ್ಯದೆಳೆಯ ತಿರುಳ ಹೆರಳಲಿ
ಭಾವಾತೀತವಾಗುತ ಪುಣ್ಯದಿ |

ಕಲ್ಲು ಕಲ್ಲೆದೆ ಮಿಡಿಸೊ ಕರ್ತೃವೆ
ಮೂರ್ತ ಮೂರ್ತದ ಕಾರಣ
ಇತಿಹಾಸಹಾಸದ ಸಗ್ಗಲೋಕವು
ಸಾಕ್ಷಾತ್ಕಾರದೈಸಿರಿ ತೋರಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನದಲಿ
Next post ರಾಜ ಹಂಸಗಳು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…