ಅಮ್ಮ ಪಾತ್ರೆ ಹಿಡಿದು ಬಡಿಸಿದಳು.
ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ.
ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ
ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು.
ಅಕ್ಕ ತಬ್ಬಿದಳು ಲೋಕದ ಮಾಯೆಯ
ಪ್ರೇಮ ಕರಗಿ ನೀರಾಗಿ ನದಿಯಾದಳು.
ತಂಗಿ ಹಂಚಿದಳು ಸ್ನೇಹದ ದಿವ್ಯತೆ
ಸಾವಿರಾರು ಕನಸುಗಳು ಆಕಾರಗೊಂಡವು.
ತಮ್ಮ ಕೂಡಿಕಳೆಯುವದರಲ್ಲಿ ಬಿಚ್ಚಿಕೊಂಡ
ಎಲ್ಲ ಮರ್ಮರಗಳು ಬದುಕು ಇಡಿ ಗಂಟಾಯಿತು.
ಅಣ್ಣ ಹಂಚುತ್ತ ಹೋದ ಒಲವ
ಅಲ್ಲಿಂದ ಇಲ್ಲಿಗೆ ಹರಿದಾಡಿದವು ಹೆಜ್ಜೆಗಳು.
ದಿನಗಳ ನೋಡು ನೋಡುತ್ತಲೆ ಕಳೆದ ಕಾಲ
ನಾನೀಗ ಅವರೆಲ್ಲರ ಪ್ರತಿದೀಪವಾಗಿರುವೆ.
ತುಂಬಿದ ಪಾತ್ರೆ ಎದೆಯ ಹಾಡಿಗೆ
ಹಾಲನುಣಿಸಿ ದನಿ ಏರಿಸಿದೆ ಆಪ್ತತೆಗೆ
ಹೀಗೆ ದೇವರು ಕೊಟ್ಟ ಮಧು ಚೆಲ್ಲು
ಹರಡಿ ಹಾಸಿವೆ ಆಗಸದ ತುಂಬ ಚಿಕ್ಕಿಗಳು.
*****