ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ
ನಾ ಸತ್ತು ನೀನಾಗುವದಿನ್ನೆಂದಿಗೆ ||ಪ||

ನಾ ಬಂದು ನಾನಿನ್ನು ನಾನೇನು ಮಾಡಿದ್ದೆ
ನಾ ಸುಳ್ಳು ನೀನಾಗುವದಿನ್ನೆಂದಿಗೆ ||ಅ.ಪ||

ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ
ನಾನಾದಳಿಸುವದಿನ್ನೆಂದಿಗೆ
ನಾ ಧರ್ಮ ನಾ ಕರ್ಮ ನಾ ಪಾಪ
ನಾ ರೂಪ ಅಳಿಸುವದಿನ್ನೆಂದಿಗೆ ||೧||

ನಾ ಹುಟ್ಟಿ ನಾ ಖೊಟ್ಟಿ ನಾ ಯಟ್ಟಿ
ನಾ ಮುಟ್ಟಮುರಿಸುವದಿನ್ನೆಂದಿಗೆ
ನಾ ಬಿಟ್ಟು ನಾ ಸುಟ್ಟು ನಾ ಶಿಶುನಾಳಧೀಶನ
ನಾ ಹೊಗಿ ಹೊಂದುವದಿನ್ನೆಂದಿಗೆ ||೨||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರು ಮಾಯಾ ವಸ್ತುವಲ್ಲ
Next post ಪೀಠಿಕೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…