ಪೀಠಿಕೆ

ನಿನಗು ನನಗು ನೆಲ-ಮುಗಿಲಿನಂತರ
ವೆಂದನಲ್ಲನ ಮೊಗದಲಿ…..
ಮೊಗವಿಟ್ಟು ನುಡಿದಳು
ಇನಿದು ದನಿಯಲಿ..
ನಿಜದ ಬದುಕಿದೆ ನೆಲದಲಿ

ಭರದಿ ಸುರಿವಾ ಮಳೆಯಬ್ಬರ
ಸುವ ಕೋಪದುರಿಯ ನೇಸರ…..
ಗೊತ್ತು-ಗುರಿಯು ಇಲ್ಲದಲೆಯೋ…..
ಬೀಸುಗಾಳಿಯ ಬರ್ಬರ
ಎಲ್ಲ ಕಂಡು, ಎಲ್ಲ ಉಂಡು…..
ಬಸಿರ ಜೀವಕೆ ಬಾಳ ಬೆಸೆವಾ…..
ಇಳೆಯೇ ಜೀವಕೆ ಕಂಗಳು…..

ಇಂದು-ನಾಳೆಗೆ ನಾಳೆ-ಮುಂದಕೆ
ಕಣ್ಣ ಕನಸಿನ ಪೀಠಿಕೆ
ಬರುವುದೆಲ್ಲವ ಬರಸೆಳೆದು ಒಪ್ಪುತೆ
ಮಣ್ಣ ಹಾಡಿನ ಚರಣಕೆ
ಎಲ್ಲ ನಮ್ಮದು, ಎಲ್ಲೆ ಮೀರದು
ಉಸಿರುಸಿರ ಹಸಿರನಲಿ
ಸ್ಪುರಿಸೋ ಭಾವಕೆ ಪಥಗಳು…..

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ
Next post ನಗೆ ಡಂಗುರ – ೧

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…