ಹೋಗುತಿಹುದು ಕಾಯ ವ್ಯರ್ಥ

ಹೋಗುತಿಹುದು ಕಾಯ ವ್ಯರ್ಥ
ಇದರ ಲಾಘವ ತಿಳಿದವ ಯೋಗಿ ಸಮರ್ಥ ||ಪ||

ಏಳು ಜನ್ಮಾಂತರದಿನವು
ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು
ಭೋಗಲಂಪಟ ಸುಖಘನವು ಭವ
ರೋಗದಿ ಮರಣಕ್ಕೆ ಆಯಿತೋ ಅನುವು ||೧||

ಬದುಕೇನು ಮಾಡಿದಿ ಇಲ್ಲೆ ಸುಳ್ಳೇ
ಮುದುಕ್ಯಾಗಿ ಮೆರದೆಲ್ಲೆ ಛೀ ಹುಚ್ಚು ಮರುಳೇ
ಅದಕೆ ಕೇಳುವ ಯಮನಲ್ಲೇ ಸಧ್ಯ
ನೆದರಿಟ್ಟು ನೋಡಿಕೋ ಉದಿಸಿದ್ಯಾವಲ್ಲೆ ||೨||

ಇನ್ನಾರ ತಿಳಿ ಕಂಡ್ಯಾ ತಮ್ಮ ನುಡಿ
ಓಂ ನಮ: ಶಿವಯೆಂಬೋ ಮಂತ್ರವು ನಿಮ್ಮ
ಪುಣ್ಯಪಾಪಂಗಳ ಕರ್ಮಾ ಕಳೆದುಳಿದುದೇ
ಚೆನ್ನ ಶಿಶುನಾಳಧೀಶನಧರ್ಮಾ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಪ ನೀನಾಗಬೇಡ ದಪ್ಪ
Next post ಬರಬಾರದೋ ಯೋನಿಯೊಳು ಜನಿಸಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…