ನೀರನು ಚೆಲ್ಲುವ ಮೋಡಕ್ಕೆ
ಭೇದ ಬುದ್ಧಿ ಇಲ್ಲ,
ಬಿಸಿಲನು ಸುರಿಸುವ ಸೂರ್ಯನಿಗೆ
ಪಕ್ಷಪಾತವಿಲ್ಲ,
ಪರಿಮಳ ಹರಡುವ ವಾಯುವಿಗೆ
ಜಾತಿ ಪಂಥವಿಲ್ಲ,
ಮಾನವರಲ್ಲಿ ಮಾತ್ರವೆ ಇಂಥ
ಏರು ತಗ್ಗು ಎಲ್ಲ.
ಎಲ್ಲರ ಮೈಲೂ ಹರಿಯುವುದು
ರಕ್ತ ಮಾತ್ರವೇನೇ,
ಚಳಿ ಮಳೆ ಗಾಳಿಯ ಪರಿಣಾಮ
ಎಲ್ಲರಿಗೊಂದೇನೆ,
ಹಸಿವು ದಾಹಗಳ ಬಾಧೆಗಳು
ಇಲ್ಲದವರು ಯಾರು?
ಕೊಂಬೆ ರೆಂಬೆಗಳು ಎಷ್ಟೇ ಇರಲಿ
ಕೆಳಗೆ ಒಂದೆ ಬೇರು.
*****