“ರಾತ್ರಿ ಹಗಲು ಎರಡೂನೂ
ಒಂದರ ಹಿಂದೆ ಮತ್ತೊಂದು
ಬರ್‍ತಾನೇ ಇರ್‍ತಾವೆ,
ಯಾತಕ್ ಆ ಥರ ಮಾಡ್ತಾವೆ?”
“ರಾತ್ರಿ ಹಗಲು ಮಾತ್ರಾನೇ
ಆ ಥರ ಸುತ್ತೋದಲ್ಲಣ್ಣ,
ಇಡೀ ಜಗತ್ತೇ ಆ ರೀತಿ
ಸುತ್ತು ಹಾಕ್ತಾ ಇದೆಯಣ್ಣ!
ಬೇಸಿಗೆಯಾಯ್ತೋ ಮಳೆಗಾಲ
ಅದರ ಹಿಂದೆಯೇ ಚಳಿಗಾಲ,
ಹೀಗೇ ಮೂರು ಕಾಲಗಳು
ಒಂದಕ್ಕೊಂದು ಬಾಲಗಳು.
ನದಿಗಳು ಕಡಲಿಗೆ ಸೇರ್‍ತಾವೆ
ಬಿಸಿಲಿಗೆ ಆವಿ ಆಗ್ತಾವೆ;
ಮೋಡಗಳಾಗಿ ನೆಲಕ್ಕೆ ಸುರಿದು
ಮತ್ತೆ ನದಿಯೇ ಆಗ್ತಾವೆ.
ಬೀಜ ಮೊಳೆತು ಮರವಾಗಿ
ಹೂವು ಹೀಚು ಕಾಯಾಗಿ
ಹಣ್ಣಾದ್ಮೇಲೆ ತೆಗೆದರೆ ಒಳಗೆ
ಬೀಜ ಇರುತ್ತೆ ಮಸ್ತಾಗಿ.”
*****