ಕಾರು ತುಂಬಾ ವೇಗವಾಗಿ ಅಂದರೆ ೬೦ಕಿಮಿಗೂ ಹೆಚ್ಚು ವೇಗವಾಗಿ ಓಡುತ್ತಿತ್ತು. ಪೋಲೀಸಿನವ ಬೆನ್ನಟ್ಟಿ ಆ ಕಾರನ್ನು ನಿಲ್ಲಿಸಿ ದ್ರೈವರ್ನನ್ನು ತರಾಟೆಗೆ ತೆಗೆದುಕೊಂಡರು. “ನಿಮ್ಮ ಮೇಲೆ ಅತಿವೇಗದ ಕಾರಣ ಕೇಸ್ಹಾಕುತ್ತಿದ್ದೇನೆ. ನಿಮ್ಮಹೆಸರು ಹೇಳಿ” ಎಂದೆನ್ನುತ್ತಾ ತನ್ನ ಡೈರಿಯನ್ನು ತೆಗೆದು ಹೆಸರು ಬರೆದುಕೊಳ್ಳಲು ಮುಂದಾದ.
‘ಹೆಸರು ತಾನೆ ನಿಮಗೆ ಬೇಕಾಗಿರೋದು? ಬರೆದುಕೊಳ್ಳಿ’ ಎಂದೆನ್ನುತ್ತಾ ತನ್ನ ಹೆಸರು ಹೀಗೆ ಹೇಳಿದ ಆ ಡ್ರೈವರ್ ಮಹಾಶಯಃ
“ಗೋಪಿ ಕುಚಮರ್ದನ ಗೋಪಾಲದಾಸ ಹುಚ್ಚಾಚಾರ್, ಕಡಲ ಮಂಡಲಗೀ ತರದಿ ಹಣಮಂತ ಎಂಕಣ್ಣ”-
ಪೋಲೀಸಿನವ ತಬ್ಬಿಬ್ಬಾಗಿ ಬೆವತು ಹೆಸರು ಬರೆದು ಕೊಳ್ಳಲಾಗದ ಸ್ಥಿತಿ ತಲುಪಿ “ನೋಡಿ, ಸುಮ್ಮನೆ ಜಾಗ ಖಾಲಿ ಮಾಡಿ ಹೊರಡಿ ಇನ್ನು ಮುಂದೆ ಇಷ್ಟೊಂದು ವೇಗವಾಗಿ ಹೋಗಬೇಡಿ.” ಎಂದು ಬಿಟ್ಟ!
***
Related Post
ಸಣ್ಣ ಕತೆ
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…