ಇಟಲಿಯ ಜನರು ತಮ್ಮ-ನಾಡಿನ ಸುಪ್ರಸಿದ್ದ ಕವಿ ರೋಜನಿಯ ಸುಮಾರು ಐದೂವರೆ ಅಡಿ ಎತ್ತರದ ಮೂರ್ತಿಯೊಂದನ್ನು ನಿರ್ಮಿಸಿ ಅದನ್ನು ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸುವ ಸಿದ್ಧತೆಯಲ್ಲಿದ್ದರು. ಆಗ ರೋಜನಿ ಕೇಳಿದರು: “ಈ ನಿರ್ಮಾಣಕ್ಕೆ ತಗಲುವ ವೆಚ್ಚು ಎಷ್ಟು?” ಅವರ ಆಭಿಮಾನಿಗಳು ‘ಸುಮಾರು ಎರಡು ಲಕ್ಷ ಫ್ರಾಂಕ್‍ಗಳಾಗಬಹುದು’ ಎಂದರು.
ರೋಜನಿಯವರು ಈ ಉತ್ತರವನ್ನು ಕೇಳಿ, “ಸರಿ, ಹೀಗೆ ಮಾಡಿ, ನನಗೆ ಒಂದು ಲಕ್ಷ ‘ಪ್ರಾಂಕ್’ಗಳನ್ನು ಮಾತ್ರ ಕೊಡಿರಿ. ನಾನೇ ಮೂರ್ತಿಯಾಗಿ ಉದ್ಯಾನವನದಲ್ಲಿ ನಿಲ್ಲುತ್ತೇನೆ. ನಿಮ್ಮ ಇಚ್ಛೆಯೂ ಫಲಿಸಿದಂತಾಗುತ್ತದೆ!” ಎಂದರು.
***