ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ.
ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳು ಸಿಲ್ಕಿದ ಎಗ್ಗ
ಮನುಜರಿರಾ, ನೀವು ಕೇಳಿರೋ.
ನಿಮ್ಮ ಇರವು ಎಂತೆಂದರೆ,
ಕಾಯವೆಂದರೆ ಕಳವಳಕ್ಕೊಳಗಾಯಿತ್ತು.
ಜೀವವೆಂದರೆ ಅರುಹು ಮರವೆಯೊಳಗಾಯಿತ್ತು.
ಮನವೆಂದರೆ ಸಚರಾಚರವನೆಲ್ಲವನಾಚರಿಸುವದಕ್ಕೆ
ಒಳಗಾಯಿತ್ತು. ಪ್ರಾಣವೆಂದರೆ ಇವೆಲ್ಲವನು
ಆಡಿಸಿ ನೋಡುವದಕ್ಕೆ ಒಳಗಾಯಿತ್ತು.
ಇದರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ,
ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ
ಜಗವನೆ ಮರೆದು, ಎಚ್ಚತ್ತು, ಚಿತ್ತವ ಧಾನವಮಾಡಿ,
ಕಳವಳಕ್ಕೊಳಗಾಗಿರ್ದ ಕಾಯವನೆ
ಸರ್ವಾಂಗ ಲಿಂಗವನೆ ಮಾಡಿದರು.
ಅರುಹುಮರವೆಯೊಳಗಾಗಿರ್ದ ಜೀವನ ಬುದ್ಧಿಯನೆ,
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವದಕ್ಕೊಳಗಾಗಿರ್ದ
ಮನವನೆ ಅರುಹ ಮಾಡಿದರು.
ಆಡಿಸಿ ನೋಡೋದಕ್ಕೆ ಒಳಗಾಗಿರ್ದ
ಪ್ರಾಣವನೆ ಲಿಂಗವ ಮಾಡಿದರು.
ಈ ಸರ್ವಾಂಗವನು ಲಿಂಗವನೆ ಮಾಡಿ,
ಆ ಲಿಂಗವನು ಕಂಗಳಲ್ಲಿಯೆ ಹೆರೆಹಿಂಗದೆ ನೋಡಿ,
ಮಂಗಳದ ಮಹಾಬೆಳಗಿನಲ್ಲಿ ಬಯಲಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…