ಫ್ರಿಜ್ ನ ಒಳ ಹೊರಗು

ಬೇಸಗೆ ಬಂದಾಗ ಫ್ರಿಜ್ ಬೇಕೇ ಬೇಕೆನಿಸುತ್ತದೆ, ಆಲ್ಲವೇ? ನಗರಗಳ ಬಹುಪಾಲು ಮನೆಗಳಲ್ಲಿ ತೀರಾ ಆಗತ್ಯದ ಸಾಧನ ಎನಿಸಿರುವ ಫ್ರಿಜ್ ಅನ್ನು ‘ತಂಗಳ ಪೆಟ್ಟಗೆ’ ಎನ್ನುವವರೂ ಇದ್ದಾರೆ. ಫ್ರಿಜ್ ಕೇವಲ ತಂಗಳು ಪಟ್ಟಿಗೆಯಲ್ಲ, ಮನೆಮಂದಿಗೆಲ್ಲ ಉಪಕಾರಿ ಆಗಬೇಕಾದರೆ ಕೆಲವು ಮುನ್ನೆಚ್ಚರಿಕೆ ವಹಿಸುವುದು ಆಗತ್ಯ.

ಶೇಖರಹಾ ಸಾಮರ್ಥ್ಯ
ಫ್ರಿಜ್ ನ ಶೇಖರಣಾ ಸಾಮರ್ಥ್ಯವನ್ನು (ಫ್ರೀಜರ್‌ನದ್ದೂ ಸೇರಿ) ಲೀಟರ್‌ಗಳಲ್ಲಿ ಸೂಚಿಸುತ್ತಾರೆ. ವಿವಿಧ ಶೇಖರಣಾ ಸಾಮರ್ಥ್ಯಗಳ ಫ್ರಿಜ್‌ಗಳು ಈಗ ಲಭ್ಯ. ಪುಟ್ಟ ಗಾತ್ರದ 50 ಲೀಟರ್ಗಳ ವಿರ್ಲ್‌ಪೂಲ್ ಫ್ರಿಜ್‌ನಿಂದ ತೊಡಗಿ ದೊಡ್ಡ
ಗಾತ್ರದ 600 ಲೀಟರ್‌ಗಳ ಸಾಂಸಂಗ್ ಫ್ರಿಜ್‌ವರೆಗೆ, ಬಹುಪಾಲು ಕಂಪನಿಗಳು ಫ್ರೀಜರ್‌ನ ಗಾತ್ರ, ಇತರ ವಿಭಾಗಗಳ ಗಾತ್ರ ಮತ್ತು ಒಟ್ಟು ಗಾತ್ರವನ್ನು ಫ್ರಿಜ್‌ನ ಮಾಹಿತಿ ಪತ್ರದಲ್ಲಿ ನಮೂದಿಸುತ್ತವೆ. ಆದರೆ ಕೆಲವು ಕಂಪನಿಗಳು ಈ ಮಾಹಿತಿ ನಮೂದಿಸುವುದಿಲ್ಲ. ಮನೆಯಲ್ಲಿ 3 – 4 ಜನರಿದ್ದರೆ, 200 – 300 ಲೀಟರ್ ಗಳ ಫ್ರಿಜ್ ಸಾಕಾಗುತ್ತದೆ. ಹಣ್ಣು – ತರಕಾರಿಗಳನ್ನು ವಾರಕ್ಕೆರಡು . ಮೂರು ಬಾರಿ ಖರೀದಿಸುವ ಕುಟುಂಬಕ್ಕೆ 150 – 200
ಲೀಟರ್‌ಗಳ ಫ್ರಿಜ್ ಮತ್ತು ವಾರಕ್ಕೊಮ್ಮೆ ಖರೀದಿಸುವ ಕುಟುಂಬಕ್ಕೆ 300 ಲೀಟರ್‌ಗಳ ಫ್ರಿಜ್ ಧಾರಾಳ ಸಾಕು.

ಇಂತಿಷ್ಟು ಲೀಟರಿನ ಫ್ರಿಜ್‌ನ ಎಂದರೆ ಏನರ್ಥ? ಆ ಅಳತೆ ಫ್ರಿಜ್‌ನ ಹೊರ ಆವರಣದ ಒಟ್ಟು ಗಾತ್ರವನ್ನು ಸೂಚಿಸುತ್ತದೆ. ಫ್ರಿಜ್‌ನ ನಿಜವಾದ ಶೇಖರಣಾ ಸಾಮಥ್ಯ ಇದಕ್ಕಿಂತ ಶೇ.10ರಷ್ಟು ಕಡಿಮೆ. ಉದಾಹರಣೆಗೆ 265 ಲೀ. ಒಟ್ಟು ಗಾತ್ರದ ಫ್ರಿಜ್‌ನ ಶೇಖರಣಾ ಸಾಮರ್ಥ್ಯ ಸುಮಾರು 150 ಲೀ.

ಆದ್ದರಿಂದ ಫ್ರಿಜ್ ಖರೀದಿಸುವ ಮುನ್ನ ಕುಟುಂಬದ ಸದಸ್ಯರ ಸಂಖ್ಯೆ, ವಾರಕ್ಕೆಷ್ಟು ಬಾರಿ ಹಣ್ಣು . ತರಕಾರಿ ಇತ್ಯಾದಿ ಖರೀದಿಸುತ್ತೀರಿ, ಸಸ್ಯಾಹಾರಿ ಆಥವಾ ಮಾಂಸಾಹಾರಿ ಕುಟುಂಬವೇ . ಇವನ್ನೆಲ್ಲ ಅಗತ್ಯವಾಗಿ ಪರಿಗಣಿಸಿರಿ. ಮಾಂಸಾಹಾರಿ ಕುಟುಂಬಗಳಿಗೆ ಮೊಟ್ಟೆ . ಮಾಂಸ ಇತ್ಯಾದಿ ಸಂಗ್ರಹಿಸಲು ಫ್ತಿಜ್‌ನಲ್ಲಿ ಜಾಸ್ತಿ ಶೇಖರಣಾ ಜಾಗ ಬೇಕಾಗುತ್ತದೆ. ನಿಮಗೆ ಆಗಲ ಜಾಸ್ತಿಯಿರುವ ಫ್ರಿಜ್  ಬೇಕೇ ಆಥವಾ ಮುಂಬದಿಯಿಂದ ಹಿಂಬದಿಗೆ ಆಂತರ ಜಾಸ್ತಿಯಿರುವ ಫ್ರಿಜ್ ಬೇಕೇ ಎಂಬುದನ್ನೂ ನಿರ್ಧರಿಸಿರಿ. ಅದಕ್ಕಾಗಿ ವಿವಿಧ ಕಂಪೆನಿಗಳ ಫ್ರಿಜ್‌ಗಳನ್ನು ಲೀಟರ್ ಆಳತೆಯಲ್ಲಿ ಹೋಲಿಸುಪುದಕ್ಕಿಂತ ಅವುಗಳ ಉದ್ದ – ಆಗಲ – ಎತ್ತರ ಹೋಲಿಸುವುದು ಉತ್ತಮ.

ಫ್ರಿಜ್ ಖರೀದಿಗೆ ಹೊರಡುವ ಮುನ್ನ ನಿಮ್ಮ ಮನೆಯಲ್ಲಿ ಫ್ರಿಜ್ ಇರಿಸುವ ಜಾಗದ ಅಗಲ ಮತ್ತು ಎತ್ತರ ಆಳೆಯಲು ನೆನಪಿರಲಿ. ತರಲಿರುವ ಫ್ರಿಜ್‌ನ ಆಗಲ ಮತ್ತು ಎತ್ತರ ಆ ಜಾಗಕ್ಕೆ ಸೂಕ್ತವೇ ಎಂದು ಪರೀಕ್ಷಿಸಿರಿ.

ಬಾಗಿಲು / ಅರೆಗಳು ಮುಂಚೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದದ್ದು ಒಂದೇ ಬಾಗಿಲಿನ ಫ್ರಿಜ್, ಈಗ ಎರಡು ಬಾಗಿಲುಗಳ ಫ್ರಿಜ್ ಹಾಗೂ ಪಕ್ಕದಲ್ಲಿ ಬಾಗಿಲು ಗಳಿರುವ ಫ್ರಿಜ್ ಲಭ್ಯ. 50 ಲೀ.ನಿಂದ 400 ಲೀ. ಗಾತ್ರದ ಒಂದು ಬಾಗಿಲಿನ ಫ್ರಿಜ್‌ನ ಬಾಗಿಲು ತೆರೆದಾಗ ಫ್ರೀಜರ್ ಮತ್ತು ಇತರ ಭಾಗಗಳು ಒಟ್ಟಾಗಿ ತೆರೆದುಕೊಳ್ಳುತ್ತವೆ. ಎರಡು ಬಾಗಿಲಿನ ಫ್ರಿಜ್‌ಗಳಲ್ಲಿ ಹೀಗಾಗುವುದಿಲ್ಲ . ಯಾಕಂದರೆ ಅವುಗಳಲ್ಲಿ ಫ್ರೀಜರಿಗೆ ಮತ್ತು ಇತರ ವಿಭಾಗಗಳಿಗೆ ಎರಡು ಪ್ರತ್ಯೇಕ ಬಾಗಿಲುಗಳಿರುತ್ತವೆ. ಆದ್ದರಿಂದ ಫ್ರಿಜ್‌ನ ಬಾಗಿಲು ತೆರೆದಾಗಲೆಲ್ಲ ಫ್ರೀಜರಿಗೆ ತೀರಾ ಕಡಿಮೆ ಬಿಸಿಗಾಳಿ ತಗಲುತ್ತದೆ. ಹಾಗಾಗಿ ಇದರಲ್ಲಿ ದೀರ್ಘಕಾಲ ಆಹಾರ ವಸ್ತುಗಳನ್ನು ಶೀತಲೀಕರಿಸಲು ಅನುಕೂಲ. ಪಕ್ಕದಲ್ಲಿ ಬಾಗಿಲುಗಳಿರುವ ಫ್ರಿಜ್‌ನ ಆನುಕೂಲ ಏನೆಂದರೆ ಹೆಚ್ಚು ವಸ್ತುಗಳನ್ನು ಶೇಖರಿಸಿಡಬಹುದು. ಇವುಗಳ ಪಕ್ಕದ ಬಾಗಿಲು ಮಾತ್ರ ತೆಗೆದು ಅಲ್ಲಿಂದ ಮಂಜುಗಡ್ಡೆ ಮತ್ತು ತಂಪು ನೀರು.ಹೊರತೆಗೆಯಲು ಸಾಧ್ಯ. ಆದರೆ ಇದರ ಬೆಲೆ 68,000 ರೂಪ್ಯಾ!

ಫ್ರಿಜ್‌ನೊಳಗೆ ಹಲಗೆಯಂತಹ ಆರೆಗಳು (ಶೆಲ್ಫ್‌ಗಳು) ಇರುತ್ತವೆ. ಪ್ಲಾಸ್ಟಿಕ್, ವಯರ್ ಆಥವಾ ಗಾಜಿನಿಂದ ಮಾಡಿರುವ ಇವು ತುಂಡಾದರೆ ಹೊಸತು ಹಾಕಿದರಾಯಿತು. ಹೊಸ ಆರೆಗಳ ಬೆಲೆ ರೂ. 250 ರಿಂದ ರೂ. 600. ಗ್ಲಾಸಿನದು ಪ್ಲಾಸ್ಟಿಕಿನದಕ್ಕಿಂತ ದುಬಾರಿ. ವಯರ್‌ನದ್ದು ಭದ್ರವಾಗಿದ್ದು ಸುಲಭದಲ್ಲಿ ತುಂಡಾಗದು. ಕೆಲವು ಫ್ರಿಜ್‌ಗಳ ಆರೆಗಳು ಎರಡು ಭಾಗಗಳಾಗಿರುತ್ತವೆ. ಒಂದು ಭಾಗ ಹೊರ ತೆಗೆದಿಟ್ಟರೆ ದೊಡ್ಡ ಹಾಗೂ ಎತ್ತರದ ಪಾತ್ರೆ/ ಕನ್‌ಟೈನರ್ ಗಳನ್ನು ಒಳಗಿರಿಸಲು ಅನುಕೂಲ. ಕ್ರಿಸ್ಪರ್‌ಗಳಿದ್ದರೆ ಇನ್ನಷ್ಟು ಅನುಕೂಲ. ಇವು ಹಣ್ಣು, ತರಕಾರಿ ಇತ್ಯಾದಿಗಳಲ್ಲಿರುವ ತೇವಾಂಶವನ್ನು ಹಾಗೆಯೇ ಉಳಿಸಿಕೊಳ್ಳುವ ಕಾರಣ ಆವು ತಾಜಾ ಆಗಿ ಉಳಿಯುತ್ತವೆ. ಫ್ರಿಜ್‌ನ ಬಾಗಿಲಿನಲ್ಲಿರುವ ಶೆಲ್ಫ್‌ಗಳಲ್ಲಿ ನೀರಿನ ಬಾಟಲಿ ಹಾಗೂ ಜಾರ್‌ಗಳನ್ನು ಜೋಡಿಸಿಡಬಹುದು. ಬಾಗಿಲುಗಳಲ್ಲಿರುವ ಪುಟ್ಟ ಸಂಪುಟಗಳಲ್ಲಿ ಮೊಟ್ಟೆ, ಲಿಂಬೆ, ಬೆಣ್ಣೆ, ಚೀಸ್ ಇತ್ಯಾದಿ ಇರಿಸಬಹುದು.

ಫ್ರಿಜ್‌ನ ಬಾಗಿಲಿನ ಅಂಚುಗಳಲ್ಲಿ ಆಯಸ್ಕಾಂತೀಯ ಗಾಸ್ಕೆಟ್ ಗಳಿರುತ್ತವೆ. ಈ ಆಂಚು ಮತ್ತು ಫ್ರಿಜ್‌ನ ಮುಂಬದಿಯ ಚೌಕಟ್ಟಿನ ಸಂದಿಯಲ್ಲಿ ತೆಳು ಕಾಗದ ಕೂರುವಷ್ಟು ಆಂತರವೂ ಇರಬಾರದು. (ಇದ್ದರೆ ತಕ್ಷಣ ರಿಪೇರಿ ಮಾಡಿಸಿರಿ|) ಯಾಕೆಂದರೆ ಆ ಎಡೆಯಿಂದ ಹೊರಗಿನ ಬಿಸಿಗಾಳಿ ಒಳನುಗ್ಗುತ್ತಾ ಇದ್ದರೆ ಫ್ರಿಜ್‌ನ ಒಳಗಡೆಯ ತಂಪು ಉಳಿಸಲಿಕ್ಕಾಗಿ ವಿದ್ಯುತ್ ಅಪವ್ಕಯವಾಗುತ್ತದೆ.

ಡಿಫ್ರಾಸ್ಟ್ ತಿರುಗಣೆ
ಫ್ರಿಜ್‌ನ ಪ್ರೀಜರ್‌ನೊಳಗಡೆ ಐಸ್ ಗಡ್ಡೆ ಕಟ್ಟುತ್ತದೆ. ಸುಮಾರು 15 ದಿನಗಳಿಗೊಮ್ಮೆ ಇದನ್ನು ಕರಗಿಸಿ ತೆಗೆಯಬೇಕು. ಕೆಲವು ಫ್ರಿಜ್‌ಗಳಲ್ಲಿ ಇದರ ವ್ಕವಸ್ಥೆ ತೀರಾ ಸರಳ. ಫ್ರಿಜ್‌ನ ವಿದ್ಯುತ್ ಸಂಪರ್ಕ ತಪ್ಪಿಸಿದಾಗ ಐಸ್‌ ಕರಗಿ ನೀರಾಗಿ ಸಂಗ್ರಹವಾಗುತ್ತದೆ. ಆ ನೀರನ್ನು ಹೊರಚೆಲ್ಲಬೇಕು. ಸೆಮಿ ಅಟೋಮ್ಯಾಟಿಕ್ ಮಾದರಿಯಲ್ಲಿ ಡಿಫ್ರಾಸ್ಟ್ ಬಟನ್ ಒತ್ತಿ ಇರಿಸಿದ ಬಳಿಕ ಐಸ್ ಕರಗಿ ನೀರಾಗಿ ಡ್ರಿಪ್ ಟ್ರೇಯಲ್ಲಿ ಸಂಗ್ರಹವಾಗುತ್ತದೆ.

ವಾರಂಟಿ
ಎಲ್ಲ ಕಂಪೆನಿಗಳೂ ತಮ್ಮ ಫ್ರಿಜ್‌ಗಳಿಗೆ ಒಂದು ವರುಷದ ವಾರಂಟಿ ನೀಡುತ್ತವೆ ಫ್ರಿಜ್‌ನ ಭಾಗಗಳು ಮತ್ತು ಉತ್ಪಾದನಾ ದೋಷಗಳಿಗೆ ಈ ವಾರಂಟಿ. ಆದರೆ ಕಂಪ್ರೆಸರ್‌ನ ವಾರಂಟಿ ಆವಧಿ ಸರಿಯಾಗಿ ಗಮನಿಸಿರಿ. ಎಲ್‌ಜಿ, ಸೈಮನ್ಸ್ ಎಲೆಕ್ಟ್ರೋಲಕ್ಸ್, ಕೆಲ್ವಿನೇಟರ್, ಸಾಂಸಂಗ್, ಗಾದ್ರೆಜ್ 5 ವರ್ಷಗಳ, ವಿಡಿಯೋಕಾನ್ 6 ವರ್ಷಗಳ ಮತ್ತು
ವಿರ್ಲ್‌ಫೂರ್ಲ್ 7 ವರ್ಷಗಳ ವಾರಂಟಿ ನೀಡುತ್ತವೆ.

ಬಿಐಎಸ್ ಗೆ ಸಲಹೆಗಳು
ಬಳಕೆದಾರರ ಹಿತರಕ್ಷಣೆಗಾಗಿ, ಈ ಕೆಳಗಿನ ಸಲಹೆಗಳನ್ನು ಜಾರಿಗೊಳಿಸಬೇಕೆಂದು ಅಹ್ಮದಾಬಾದಿನ ಸಿಇಆರ್ ಸೊಸೈಟಿಯು ಬ್ಯೂರೋ ಆಥ್ ಇಂಡಿಯನ್ ಸ್ಟಾಂಡರ್‌ಡ್ಸನ್ನು ವಿನಂತಿಸಿದೆ :

1. ಫ್ರಿಜ್‌ಗಳ ಶೇಖರಣಾ ಸಾಮರ್ಥ್ಯವನ್ನು ಉತ್ಸಾದಕರು ಲೀಟರ್ ಅಳತೆಯಲ್ಲಿ ತಿಳಿಸುತ್ತಿದ್ದು ಇದನ್ನು ಗ್ರಹಿಸಲು ಬಳಕೆದಾರರಿಗೆ ಕಷ್ಟ. ಇದರ ಬದಲಾಗಿ ಫ್ರಿಜ್‌ಗಳ ಉದ್ದ, ಅಗಲ ಮತ್ತು ಎತ್ತರಗಳನ್ನು ನಮೂದಿಸಬೇಕು.

2. ಉತ್ಸಾದಕರು ಫ್ರಿಜ್‌ಗಳ ಒಟ್ಟು ಮತ್ತು ನಿವ್ವಳ ಗಾತ್ರ ನಮೂದಿಸಬೇಕು. ಯಾಕೆಂದರೆ ನಿವ್ವಳ ಗಾತ್ರ (ಫ್ರಿಜ್‌ನೊಳಗಿನ ಶೇಖರಣಾ ಜಾಗ) ಒಟ್ಟು ಗಾತ್ರಕ್ಕಿಂತ ಶೇ. 10ರಷ್ಟು ಕಡಿಮೆ.

3. ಫ್ರಿಜ್‌ನಲ್ಲಿ ನೀರು ಮಂಜುಗಡ್ಡೆಯಾಗಲು ಎಷ್ಟು ಸಮಯ ತಗಲುತ್ತದೆ ಎಂಬುದನ್ನು ಫ್ರೀಜರಿನ ಮುಚ್ಚಳದಲ್ಲಿ ನಮೂದಿಸಬೇಕು.

4. ಫ್ರಿಜ್‌ನ ಥರ್ಮೋಸ್ಟಾಟ್ (ಉಷ್ಟತಾ ನಿಯಂತ್ರಕ)ನಲ್ಲಿ ಸೆಟ್ಟಿಂಗನ್ನು 1,2,3 ಎಂದು ನಮೂದಿಸಲಾಗುತ್ತಿದೆ. ಇದರ ಬದಲಾಗಿ ಯಾವ ಸೀಜನಿಗೆ ಯಾವ ಸೆಟ್ಟಿಂಗ್ ಎಂದು ಸೀಜನಿನ ಮೊದಲಕ್ಷರಗಳ (ಬೇಸಗೆಗೆ ಎಸ್, ಮಳೆಗಾಲಕ್ಕೆ ಎಂ, ಚಳಿಗಾಲಕ್ಕೆ ಡಬ್ಲ್ಯು) ಮೂಲಕ ನಮೂದಿಸಬೇಕು.

5. ಫ್ರಿಜ್, ಅದರ ವಿದ್ಯುತ್ ಮೋಟರ್ ಮತ್ತು ಕಂಪ್ರೆಸರ್‌ಗೆ ಉತ್ಸಾದಕರು ಐಎಸ್ಐ ಸರ್ಟಿಫೀಕೇಶನ್ ಪಡೆದು ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು.

ನೆನಪಿರಲಿ

* ಫ್ರಿಜ್‌ಖರೀದಿಸುವ ಮುನ್ನ ಅಳತೆ ಟೇಪಿನಿಂದ ಅದನ್ನು ಆಳತೆ ಮಾಡಿರಿ. ಅದರ ಉದ್ದ, ಅಗಲ, ಎತ್ತರ ಎಷ್ಟೆಂದು ನಿಮ್ಮ ಕಣ್ಣಂದಾಜು ಸಾಲದು.

* ಬೇಯಿಸಿದ ಆಹಾರ ಫ್ರಿಜ್‌ನಲ್ಲಿ ಇಡುವಾಗ ಪಾತ್ರೆ ಆಥವಾ ಕನ್‌ಟೈನರ್‌ಗೆ ಹಾಕಿ, ಮುಚ್ಚಳ ಮುಚ್ಚಿರಿ. ಐಸ್‌ಕ್ರೀಮನ್ನು ಮುಚ್ಚಿದ ಕನ್‌ಟೈನರಿನಲ್ಲಿಟ್ಟು ಒಳಗಿರಿಸಿರಿ-

* ಫ್ರಿಜ್‌ನಲ್ಲಿಟ್ಟ ಪಾತ್ರೆ / ಕನ್‌ಟೈನರ್ ಗಳ ನಡುವೆ ಒಂದಿಂಚು ಜಾಗವಿರಲಿ- ತಂಪು ಗಾಳಿ, ಒಳಗೆ ಸುತ್ತಾಡಲು ಇದು ಆಗತ್ಯ. ಅಣಬೆ ಮತ್ತು ಕಲ್ಲಂಗಡಿಗಳನ್ನು ಫ್ರಿಜ್‌ನಲ್ಲಿಟ್ಟು ತಂಪಾಗಿಸಬಹುದು. ಆದರೆ ಕೆಡದಂತೆ ಇರಿಸಲು ಸಾಧ್ಠವಿಲ್ಲ. ತರಕಾರಿಗಳನ್ನು ತೊಳೆದು, ನೀರಿನ ಪಸೆ ಒಣಗಿದ ಬಳಿಕ ಒಳಗಿರಿಸಿರಿ.

* ಹೊಸ ಮಾದರಿಯ ಫ್ರಿಜ್‌ಗಳಲ್ಲಿರುವ ಅನೇಕ ವಿಶೇಷತೆಗಳು ಏನೆಂದು ಮಾರಾಟಗಾರರಿಂದ ಕೇಳಿ ಅರ್ಥ ಮಾಡಿಕೊಳ್ಳಿರಿ. ಅವು ನಿಮಗೆ ಆಗತ್ಯವೇ ಎಂದು ಪರಿಶೀಲಿಸಿರಿ. ಯಾಕೆಂದರೆ ಆನಗತ್ಕ ‘ವಿಶೇಷತೆ’ಗಳಿಂದ ನಿಮ್ಮ ವಿದ್ಯುತ್ ಬಿಲ್ ಜಾಸ್ತಿಯಾದೀತು.

* ಬಹುಪಾಲು ಉತ್ಪಾದಕರು ತಮ್ಮ ಫ್ರಿಜ್‌ನ ದೈನಿಕ ವಿದ್ಯುತ್ ಬಳಕೆ ಎಷ್ಟೆಂದು ತಿಳಿಸುವುದಿಲ್ಲ. ಆದರೂ ಅದನ್ನು ಮಾರಾಟಗಾರರಿಂದ ಕೇಳಿ ತಿಳಿಯಿರಿ. (ಹೋಲಿಕೆಗಾಗಿ ಪಟ್ಟಿ ನೋಡಿರಿ.)

೧೧ ಕೋಟಿ ರೂ. ಪರಿಹಾರಕ್ಕಾಗಿ ಕ್ಲಾಸ್ ಆಕ್ಷನ್ ದಾವೆ

ಹೊಸದಿಲ್ಲಿಯ ರಾಷ್ಟೀಯ ಬಳಕೆದಾರರ ರಾಜ್ಕ ಪರಿಹಾರ ಕಮಿಷನ್ ಎಲ್ ಜಿ ಇಲೆಕ್ಟ್ರಾನಿಕ್ಟ್ ವಿರುದ್ದ ರೂ. 11 ಕೋಟಿಗಳ ಪರಿಹಾರ ಕೋರಿರುವ ಕ್ಲಾಸ್ ಆಕ್ಷನ್ (ಸಾಮೂಹಿಕ ಕಾರ್ಯಾಚರಣೆ) ದಾವೆಯೊಂದನ್ನು ವಿಚಾರಣೆಗೆ ಸ್ವೀಕರಿಸಿದೆ. ಈ ದಾವೆ ಹೂಡಿದವರು ಅಹ್ಮದಾಬಾದಿನ ಕನ್ನೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೋಸೈಟಿ ಮತ್ತು ಎಲ್ ಜಿ ಕಂಪೆನಿಯ ಗ್ರಾಹಕರಾದ ಶ್ರೀಮತಿ ವರ್ಷಾಬೆನ್ ಪುರೋಹಿತ್.

ಎಲ್‌ಜಿ ಫ್ರಿಜ್‌ಗಳ ಮೂರು ಮಾದರಿಗಳ ಶೇಖರಣಾ ಸಾಮರ್ಥ್ಯದ ಬಗ್ಗೆ ಬಳಕೆದಾರರಿಗೆ ತಪ್ಪು ಮಾಹಿತಿ ನೀಡಿ, ಎಲ್‌ಜಿ ಇಲೆಕ್ಟ್ರಾನಿಕ್ಸ್ ಅನ್ಯಾಯದಿಂದ ಲಾಭ ಮಾಡಿಕೊಂಡಿದೆ ಎಂಬುದು ಅವರ ದೂರು. ನಿಜವಾದ ಶೇಖರಣಾ ಸಾಮರ್ಥ್ಯ ಕಂಪೆನಿ ಪ್ರಚಾರ ಮಾಡಿದ್ದಕ್ಕಿಂತ ಶೇ. 11ರಷ್ಟು ಕಡಿಮೆಯಾಗಿತ್ತು. ಫ್ರಿಜ್‌ಗಳ ಲೇಬಲ್‌ಗಳಲ್ಲಿ ಮತ್ತು ಪ್ಯಾಕಿಂಗ್ ಕಾರ್ಟನ್‌ಗಳಲ್ಲಿ ಮುದ್ರಿಸಿದ ಒಟ್ಟು ಮತ್ತು ನಿವ್ವಳ ಗಾತ್ರಗಳ ಮಾಹಿತಿ ತಾಳೆ ಬೀಳುತ್ತಿರಲಿಲ್ಲ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ವಿರುದ್ದ ಬಳಕೆದಾರರಿಂದ ಬಂದ ದೂರುಗಳಿಂದ ಮತ್ತು ಹೊಸದಿಲ್ಲಿಯ ಎಂಆರ್‌ಟಿಪಿ ಕಮಿಷನಿನಲ್ಲಿ ವಿಚಾರಣೆಗೆ ಬಾಕಿಯಿರುವ ವ್ಯಾಜ್ಯದ ಕುರಿತ ಪತ್ರಿಕಾ ವರದಿಯಿಂದ ಎಲ್‌ಜಿ ಇಲೆಕ್ಟ್ರಾನಿಕ್ಸ್‌ನ ಅಪ್ರಾಮಾಣಿಕ ವಾಣಿಜ್ಕ ವ್ಯವಹಾರದ ಬಗ್ಗೆ ಸಿಇಆರ್ ಸೊಸೈಟಿ ತಿಳಿದುಕೊಂಡಿತು. ಅನಂತರ 230, 250 ಮತ್ತು 280 ಲೀಟರ್ ಗಾತ್ರದ ಮೂರು ಎಲ್‌ಜಿ ಫ್ರಿಜ್‌ಗಳನ್ನು ಖರೀದಿಸಿತು. ಅವನ್ನು ಆಹ್ಮದಾಬಾದಿನ ಎಲ್.ಡಿ. ಇಂಜಿನಿಯರಿಂಗ್ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತು. ಆ ಮೂರು ಫ್ರಿಜ್‌ಗಳ ನಿಜವಾದ ಶೇಖರಣಾ ಸಾಮರ್ಥ್ಯ ಕಂಪೆನಿ ತಿಳಿಸಿದ್ದಕ್ಕಿಂತ ಕ್ರಮವಾಗಿ ಶೇ. 10.87, 11.20 ಮತ್ತ 11.37 ಕಡಿಮೆ ಇದೆಯೆಂಬುದು ಪರೀಕ್ಷೆಯಿಂದ ಖಚಿತವಾಯಿತು.

ಒಂದು ಕುಟುಂಬದ ವಾರ್ಷಿಕ ವಿದ್ಯುತ್ ಬಳಕೆಯ ಶೇ. 12ರಿಂದ 30 ಫ್ರಿಜ್‌ನ ಬಾಬ್ತು ಎಂದು ಒಂದು ಆಂದಾಜು. ಯಾಕೆಂದರೆ ದಿನದ 24 ತಾಸುಗಳಲ್ಲೂ ಫ್ರಿಜ್‌ ಚಾಲೂ ಆಗಿರುತ್ತದೆ. ಈಗ ಹಲವು ಉತ್ಪಾದಕರು ತಮ್ಮ ಹೊಸ ಮಾಡೆಲ್ ಗಳ ಬಗ್ಗೆ ‘ಕಡಿಮೆ ವಿದ್ಯುತ್ತಿನಿಂದ ಅಧಿಕ ತಂಪು’ ಎಂದೆಲ್ಲ ಜಾಹೀರಾತು ನೀಡುತ್ತಾರೆ. ಇವನ್ನೆಲ್ಲ ಪರೀಕ್ಷೆ ಮಾಡಿದ ಅನಂತರವೇ ನಂಬಲು ಸಾಧ್ಯ. ಬ್ಯೂರೋ ಆಥ್ ಇಂಡಿಯನ್ ಸ್ಯಾಂಡರ್ಸ್ (ಬಿಐಎಸ್) ಪ್ರಕಾರ ವಿವಿಧ ಗಾತ್ರಗಳ ಫ್ರಿಜ್‌ಗಳ ವಿದ್ಯುತ್ ಬಳಕೆ ಮತ್ತು ವೆಚ್ಚದ ಲೆಕ್ಕಾಚಾರವನ್ನು ಪಟ್ಟಿಯಲ್ಲಿ ನೀಡಲಾಗಿದೆ.

ಫ್ರಿಜ್‌ನ ಗಂಟೆಗಳ ವಿದ್ಯುತ್ ವೆಚ್ಚ
ಗಾತ್ರ              ವಿದ್ಯುತ್ ಬಳಕೆ . ಕಿ.ವಾಟ್       ವಿದ್ಯುತ್ ವೆಚ್ಚ : ಕಿ.ವಾಟ್ಗೆ 4ರೂ.ರಂತೆ
1 ಬಾಗಿಲಿನ   2 ಬಾಗಿಲುಗಳ           1 ಬಾಗಿಲಿನ   2 ಬಾಗಿಲುಗಳ
65 ಲೀ. ತನಕ         0.85.          –                      3.40
66 ರಿಂದ 165 ಲೀ.    0.1             –                      4.40
166 ರಿಂದ 240 ಲೀ.  1.4,         1.82                   5.60            7.28
241 ರಿಂದ 310 ಲೀ.  1.6          2.08                   6.40            8.32
311 ರಿಂದ 450 ಲೀ.  1.9          2.47                  7..60            9.88

ತಂತ್ರಜ್ಞಾನ ಬದಲು
ಭೂಮಿಯನ್ನು ಆವರಿಸಿರುವ ಓಜೋನ್ ಪದರ ಇಲ್ಲಿನ ಜೀವಸಂಕುಲವನ್ನು ರಕ್ಷಿಸುತ್ತಿದೆ. ಈ ಪದರವನ್ನು ಅಪಾಯಕಾರಿ ಕ್ಲೋರೋ ಫ್ಲೋರೊಕಾರ್ಬನ್ (ಸಿಎಫ್ ಸಿ) ಆನಿಲಗಳು ನಾಶಮಾಡುತ್ತಿವೆ. ಇವನ್ನೇ ಫ್ರಿಜ್‌ಗಳಲ್ಲಿ ಶೀತಕಾರಕವಾಗಿ ಬಳಸಲಾಗುತ್ತಿತ್ತು. ಭಾರತ ಹಾಗೂ ಇತರ ದೇಶಗಳು ಸಹಿ ಮಾಡಿರುವ ಮಾಂಟ್ರಿಯಲ್ ಒಪ್ಪಂದದ ಪ್ರಕಾರ 2010ರ ಅನಂತರ ಇವನ್ನು ಬಳಸುವಂತಿಲ್ಲ. ಆದರೆ ಭಾರತದಲ್ಲಿ ಜ್ಯಾರಿ ಮಾಡಿರುವ ನಿಯಮಗಳ ಪ್ರಕಾರ ಜನವರಿ 1, 2003ರಿಂದಲೇ ನಮ್ಮಲ್ಲಿ ಇವುಗಳ ಬಳಕೆ ನಿಷೇಧಿಸಲಾಗಿದೆ. ಎಲ್ಲ ಕಂಪೆನಿಗಳೂ ಸಿಎಫ್‌ಸಿಗಳ ಬಳಕೆ ನಿಲ್ಲಿಸಿರುವುದು ಮುಂದಿನ ತಲೆಮಾರುಗಳಿಗಾಗಿ ಭೂಮಿಯ ರಕ್ಷಣೆಯತ್ತ ಇಟ್ಟ ಒಂದು ಹೆಜ್ಜೆ.

ಉದಯವಾಣಿ 1-4-2004

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿದೆ ಧರ್ಮ
Next post ನಗೆಡಂಗುರ-೧೩೪

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…