ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ
ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು
ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ
ಘಾಸಿಯಾದಾಗ ಇದುವರೆಗೆ ಅದರೊಂದಿಗೆ ಸಂಪರ್ಕ ಹೊಂದುವುದು ಬಹಳ ಕಷ್ಟವಿತ್ತು
ಚಿಪ್ಪಿನ ಮೂಲಕ ಅಪರೇಷನ್ ಮಾಡಲು ಸಾಧ್ಯವಿರಲಿಲ್ಲ. ಇದೀಗ ಮೂಗಿನ ಮೂಲಕ
ಅಸ್ತ್ರಗಳನ್ನು ತೂರಿಸಿ ಮೆದುಳಿನ ತೊಂದರೆಗಳನ್ನು ನಾಶಮಾಡಬಹುದೆಂದು ದಿಲ್ಲಿಯ
ಇಂದ್ರಪ್ರಸ್ತ ಅಪೋಲೋ ಅಸ್ಟತ್ರೆಯ ಡಾ|| ವಿಜಯಕುಮಾರ್ ಮತ್ತು ತಂಡದವರು
ಕಂಡುಹಿಡಿದಿದ್ದಾರೆ.
ಮೂಗಿನ ಮೂಲಕ ಮೆದುಳನ್ನು ತಲುಪಿ ಶಸ್ತ್ರ ಚಿಕಿತ್ಸೆ ನಡೆಸುವ ಈ ತಂತ್ರದಲ್ಲಿ
ರಕ್ತಸ್ರಾವವಾಗಲಾರದೆಂದು ಡಾ|| ವಿಜಯಕುಮಾರ್ ತಿಳಿಸುತ್ತಾರೆ. ನೇಸನ್ ಎಂಡೋಸ್ಕೋಪಿ
ಅಥವಾ ಮೂಗಿನ ಮೂಲಕದ ಶಸ್ತ್ರಚಿಕಿತ್ಸಾ ವಿಧಾನದಿಂದ ಮೆದುಳಿನ ಯಾವ
ಭಾಗವನ್ನಾದರೂ ತಲುಪಬಹುದು. ಆದರೆ ಮಿದುಳಿನ ಶಸ್ತ್ರ ಚಿಕಿತ್ಸೆಯಿಂದ
ಮಿದುಳಿನ ಕೆಳಭಾಗದಲ್ಲಿರುವ ಪಿಟ್ಯೂಟರಿ ಗ್ರಂಥಿಯವನ್ನು ತಲುಪಲು ಸಾಧ್ಯವಾಗುವುದಿಲ್ಲ
ಕೇವಲ 4 ಮೀಟರ್ ಉದ್ದನೆಯ ಹಗುರವಾದ ತಂತಿಯ ಮೂಲಕ ಈ ಎಲ್ಲ ಶಸ್ತ್ರ
ಚಿಕಿತ್ಸೆಯನ್ನು ನಡೆಸಲಾಗುವುದು. ಇದು ಮೂಗನ್ನು ಪ್ರವೇಶಿಸಿದಾಗ ಈ ಭಾಗದಸಂಪೂರ್ಣ
ಚಿತ್ರವು ಗಣಕಯಂತ್ರ (ಕಂಪ್ಯೂಟರ್) ನಲ್ಲಿ ಕಾಣುತ್ತದೆ. ಈ ಕಂಪ್ಯೂಟರ್ ಮೇಲೆ ಕಾಣುವ
ಚಿತ್ರದ ಸಹಾಯದಿಂದ ಎಲ್ಲವನ್ನು ಪರಿಗ್ರಹಿಸುತ್ತ ಮೆದುಳಿನ ಭಾಗವನ್ನು ಪ್ರವೇಶಿಸಿ ಅದರಲ್ಲಿ
ಏನಾದರೂ ಏರುಪೇರಾಗಿದ್ದರೆ ಆ ತಂತಿಯ ತುದಿಯಲ್ಲಿರುವ ಚಿಕಿತ್ಸಕ ಘಟಕದಿಂದ
ಪರಿಹರಿಸಲಾಗುತ್ತದೆ. ಇದರ ಬಗೆಗೆ ಸಂಶೋಧನೆಗಳು ದೇಶಗಳಲ್ಲಿ ನಡೆದು ‘ಯಶಸ್ವಿ
ಚಿಕಿತ್ಸೆ’ ಎಂದು ಹೇಳಿದೆ ಮೆದುಳಿನ ದ್ರವಸೋರಿಕೆಗೆ ಮತ್ತು ಕೆಲವೊಂದು ಭಾಗದ ಶಸ್ತ್ರ
ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ.
****