ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ಇದು ಕೂಡ ವಯಸ್ಸಾದವರಿಗೆ ಕಾಡುವ ಕ್ರೂರ ಕಾಯಿಲೆ. ಇದನ್ನು ಹೋಗಲಾಡಿಸಲೇಬೇಕೆಂದು ಪ್ರಯತ್ನಪಟ್ಟು ಲಂಡನ್ ಮತ್ತು ಫ್ರಾನ್ಸ್ ದೇಶದ ವಿಜ್ಞಾನಿಗಳು ಒಂದು ಸೂಜಿ ಮದ್ದನ್ನು ಕಂಡು ಹಿಡಿದರು.
ಕರುಳಿನಲ್ಲಿ ಗೊತ್ತಾದ ಒಂದು ಬಗೆಯ ‘ಎನ್‌ಜೈಮ್‌ಗಳು ನೈಟ್ರಿಕ್’ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದಲೂ, ಈ ನೈಟ್ರಿಕ್ ಆಮ್ಲವು ಉಸಿರಾಟದ ನಾಳವನ್ನು ಬಾಧಿಸುವುದರಿಂದಲೂ ಆಸ್ತ್ಮವೂ ಬರುತ್ತದೆ. ಈ ರೋಗಕ್ಕೆ ಪರಿಹಾರವಾಗಿ ‘ನೈಟ್ರಿಕ್ ಆಮ್ಲ ಉತ್ಪತ್ತಿ ಯಾಗದಂತೆ ತಡೆಯೊಡ್ಡುವ ಔಷಧಿಯುಳ್ಳ ಇಂಜಕ್ಷನ್ ಕೊಟ್ಟರೆ ಆಗ ಈ ಆಮ್ಲ ತನ್ನ ಉತ್ಪತ್ತಿಯನ್ನು ನಿಲ್ಲಿಸಿ ಬಿಡುತ್ತದೆ. ಆಗ ಕೆಮ್ಮು ಕಫ, ಉಬ್ಬಸಗಳೆಲ್ಲ ನಿಂತುಹೋಗುತ್ತದೆ.
ಪ್ಯಾಕ್ ಬಾಕ್ಸ್: 3 IN ONE
ಇಂದೊಂದು ಆಶ್ಚರ್ಯಕರ ಪೆಟ್ಟಿಗೆ ವಾಣಿಜ್ಯೋದ್ಯಮಗಳಿಗೆ ಹೇಳಿ ಮಾಡಿಸಿದ ಸಾಧನ. ಅವರಿಗಷ್ಟೇ ಅಲ್ಲ ಸಂಶೋಧಕರಿಗೆ ಬಹರಗಾರರಿಗೆ, ಪತ್ರಕರ್ತರಿಗೆ, ಒಂದಿಲ್ಲ ಒಂದು ವಿಧದಲ್ಲಿ ಈ ಪೆಟ್ಟಿಗೆ ಸಹಾಯ ಮಾಡುತ್ತದೆ. ಅಮೇರಿಕಾದ ವಿಜ್ಞಾನಿಗಳು ತಯಾರಿಸಿದ ಇದರಲ್ಲಿ ದೂರವಾಣಿ ಇದೆ. ಪ್ಯಾಕ್ಸ್ ಸುದ್ದಿ ಕಳಿಸುವ ಸೌಲಭ್ಯವಿದೆ. ಪೇಪರ್‌ನ್ನು ಸ್ಟೋರ್ ಮಾಡುವ ಸೌಲಭ್ಯವಿದೆ. ಯಾರು ಯಾವಾಗಲಾದರೂ ಎಲ್ಲೆಂದರಲ್ಲಿ ಇದರ ಉಪಯೋಗವನ್ನು
ಪಡೆದುಕೊಳ್ಳಬಹುದು. ಮುಚ್ಚಿದರೆ ಒಂದು V.I.P. ಸೂಟ್‌ಕೇಶ್ ಇದ್ದಂತಿದೆ ಇದರ ಬೆಲೆ ರೂ. 2,000 ಡಾಲರ್.