ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ್ನು ಸುರಿದು (Blood Bank) ನಲ್ಲಿ ರಕ್ತ ತಂದು ಪೂರೈಸ- ಬೇಕಾಗುತ್ತದೆ. ಇದೆಲ್ಲ ಕಷ್ಟಕರವಾದ ಕೆಲಸವೆ. ಆದರೆ ತಂತ್ರಜ್ಞಾನದಿಂದ ರಕ್ತವೂ ಸೃಷ್ಟಿಯಾಗಿ ಬೇಕಾದವರಿಗೆ ಅಂಗಡಿಯಲ್ಲಿ ಸಿಗುವಂತಾದರೆ ಅದಕ್ಕಿಂತಲೂ ಇನ್ನೇನು ಬೇಕು. ರೋಗಿಯ ಪುಣ್ಯ ರಕ್ತಕ್ಕಾಗಿ ಅಲೆಯುವ ಸಮಸ್ಯೆಯೇ ಇರಲಾರದು. ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ‘ವಿಟ್‌ವೈಸ್’ ಎಂಬ ವಿಜ್ಞಾನಿ ಜೈವ ತಂತ್ರಜ್ಞಾನ ಸಾಧನೆಯಿಂದ ರಕ್ತದ ಸೃಷ್ಟಿಯನ್ನು ಕಂಡು ಹಿಡಿದರು. ಕೆಂಬ್ರಿಡ್ಜ್ ಮಸಾಚುಸೆಟ್ಟ್‌ನಲ್ಲಿರುವ ಆಂಟೋಜೆನಿ ಎಂಬ ಜೈವ ತಾಂತ್ರಿಕ ಸಂಸ್ಥೆಯಲ್ಲಿ ಸಂಶೋಧಕ ವ್ಶೆದ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಪಥಮವಾಗಿ ಆದಿಕೋಶಗಳನ್ನು ಗುರುತಿಸಿ, ಪ್ರತ್ಯೇಕಿಸಿ ಪ್ರಯೋಗಾಲಯದ ಪ್ಲಾಸ್ಟಿಕ್ ತಟ್ಟೆಯೊಂದರಲ್ಲಿ ಅವನ್ನು ಬಿತ್ತಿದರು. ಅವಕ್ಕೆ ಪೋಶಾಕಾಂಶಗಳನ್ನು ಒದಗಿಸಿದರು. ಸೂಕ್ತಜನಕಾಣುಗಳನ್ನು ಪೂರೈಸಿದರು. ಕೆಲವೇ ದಿನಗಳಲ್ಲಿ ನಿಬ್ಬೆರಗಿನ ಫಲಿತಾಂಶವನ್ನು ನೋಡಿ ಕುಣಿದಾಡಿದರು. ಆದಿಕೋಶವು ಕೆಂಗಣಗಳನ್ನು ಉತ್ಪಾದಿಸಲಾಂಭಿಸಿತು. ರಕ್ತವು ಸ್ಪಷ್ಟಿಯಾಯಿತು. ಈ. ಸೂತ್ರವನ್ನು ಅನುಸರಿಸಿ ಸಂಶೋಧಕರು ರಕ್ತವನ್ನು ಸೃಷ್ಟಿಸಿ ಅಶಕ್ತ ರೋಗಿಗಳಿಗೆ ಈ ರಕ್ತವನ್ನು ಪೂರೈಸುತ್ತಾರೆ ಎಂಬ ದಿನಗಳು ಬರುತ್ತವೆ !