ಇಂದಿನ ನಮ್ಮ ಮನೆಗಳಿಗೆ ಡೋರ್ ಲಾಕ್‌ಗಳನ್ನೂ ಹಾಕಿ ಮುಟ್ಟಿ ನೋಡಿ ಹೊರ
ಹೋಗುತ್ತೇವೆ. ಮುಂದೊಂದು ದಿನ ಈ ಕೀಲಿ ಜಡಿಯುವ ಸಮಸ್ಯೆಗಳೇ ಇರುವುದಿಲ್ಲವೆಂದು
ವಿಜ್ಞಾನಿಗಳು ಹೇಳುತ್ತಾರೆ. ಮನೆಯ ಯಜಮಾನ ಮನೆಯ ಬಾಗಿಲ ಬಳಿ ಬಂದಾಗ
ಸೆನ್ಸಾರ್‌ಗಳಿಂದ ಮುಖವನ್ನು ಅಥವಾ ಕಣ್ಣಿನ ಐರಸ್ ಅನ್ನು ಪರೀಕ್ಷೆ ಮಾಡಿ ಗುರ್ತನ್ನು
ಖಚಿತಗೊಳಿಸಿಕೊಂಡು ಸ್ವಯಂ ಚಾಲಿತವಾಗಿ ಬಾಗಿಲುಗಳು ತಮ್ಮಿಂದ ತಾವೇ
ತೆರೆದುಕೊಳ್ಳುತ್ತವೆ. ಈ ತಂತ್ರಜ್ಞಾನ ಮುಂದೊಂದು ದಿನ ಬರಲಿದೆ, ಎಂದು ವಿಜ್ಞಾನಿಗಳ
ವ್ಯಾಖ್ಯಾನವಾಗಿದೆ. ಇದರಂತೆ ಆಹಾರ ಪದಾರ್ಥಗಳ ಅವಶ್ಯಕತೆಯನ್ನು”ರೆಫ್ರಿಜಿರೇಟರ್’ಗಳು
ಗುರುತಿಸುತ್ತವೆ. ಭವಿಷ್ಯದಲ್ಲಿ ತಂಗಳು ಪೆಟ್ಟಿಗೆಯಲ್ಲಿ ತರಕಾರಿ ಮುಗಿದು ಹೋದಾಗ ಆದು
ತನ್ನಿಂದ ತಾನೆ ಸ್ವಯಂಚಾಲಿತಗೊಂಡು ತರಕಾರಿ ಮಾರ್ಕೆಟ್ಟಿಗೆ ಸಂದೇಶವನ್ನು ರವಾನಿಸುತ್ತವೆ.
ಮೈಕ್ರೋ ಓವನ್ ಆಹಾರ ಪದಾರ್ಥಗಳ ತಯಾರಿಕೆಯನ್ನು ಪರಿಶೀಲಿಸುತ್ತದೆ.
ವಾಷಿಂಗ್‌ಮಿಷನ್ ಕೂಡ ತನಗೆ ಬೇಕಾದ ಡಿಟರ್ಜಂಟ್ ಫಾಬ್ರಿಕ್ ಸಾಫ್ಟ್‌ನರ್‌ಗಳನ್ನೂ
ಅಂಗಡಿಯಿಂದ ತರಿಸಿಕೊಳ್ಳುವ ಏರ್ಪಾಡು ಮಾಡುತ್ತದೆ.
ಮನೆಯ ಕಿಟಕಿಗಳಲ್ಲಿಯೂ ಕೂಡ ಕ್ರಾಂತಿಕಾರಕ ಬದಲಾವಣೆಯಾಗುತ್ತದೆ.
‘ಸಾಸ್ಮಾರ್ಟ್‌ಗ್ಲಾಸ್’ ಎಂಬ ತಿರುಗುವ ರೆಕ್ಕೆಗಳು ಆಕ್ಟಿವ್ ಎಲಿಮೆಂಟ್ಸ್ ಆಗಿ
ಕಾರ್ಯನಿರ್ವಹಿಸುತ್ತವೆ. ಅಂದರೆ ಸೂರ್ಯ ಕಿರಣಗಳ ಉಷ್ಟತೆ ಮತ್ತು ಬೆಳಕಿನ ತೀವ್ರತೆಗೆ
ತಕ್ಕಂತೆ ಸ್ವಯಂ ಚಾಲನೆಗೊಂಡು ನಮಗೆ ಅಗತ್ಯವಿದ್ದಷ್ಟು ಸೂರ್ಯರಶ್ಮಿಗಳನ್ನು ಒಳಗೆ
ಬರುವಂತೆ ಏರ್ಪಾಡು ಇರುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ನಮ್ಮ ಏಕಾಂತಕ್ಕೆ
ಭಂಗವಾಗದಂತೆ ಕಿಟಕಿಗಳೆ ಹೊಂದಾಣಿಕೆಯಾಗುತ್ತವೆ. ಹೊರಗಿನಿಂದ ನೋಡಿದರೆ ಕಿಟಕಿಗಳು
ಗಾತ್ರದಲ್ಲಿ ಚಿಕ್ಕವು ಎನಿಸಿದರೂ ಮನೆಯೊಳಗಿಂದ ನೋಡಿದರೆ ಅವು ಎರಡು ಪಟ್ಟು ದೊಡ್ದ
ಟಿ.ವಿ.ಯ ಚಪ್ಪಟೆ ಸ್ಕ್ರೀನಿನಂತೆ ಕಾಣಿಸುತ್ತವೆ. ಮುಂದೊಂದು ದಿನ ಮನೆಯೊಳಗೆ ನಿಮ್ಮ ಸ್ವಂತ
ಸ್ಯಾಟ್ ಲೈಟ್ ಲಿಂಕ್, ನಿಮ್ಮ ಮನರಂಜನೆ, ವಿಜ್ಞಾನ ಹಾಗೂ ಸುದ್ದಿ ಸಮಾಚಾರವನ್ನು
ಸಾದರಪಡಿಸುತ್ತದೆ. ಈಗ ಆಗಿರುವ ಫೈಬರ್ ಆಪ್ಟಿಕಲ್ ಕೇಬಲ್ ಸಂಪರ್ಕಗಳಿಗೆ ಮುಂದೆ
ಮೌಲ್ಯವಿರಲಾರದು. 2020 ಸುಮಾರಿಗೆ ಟಿ.ವಿ. ಯೂ ಸಹ ಹಳೆಯ ಸರಕಾಗಬಹುದು.
ಸೋಫಾದಲ್ಲಿ ಆರಾಮಾಗಿ ಮಲಗಿಕೊಂಡು ನಿಮ್ಮ ನೆಚ್ಚಿನ ತಾರೆಗಳ ಕಾರ್ಯಕ್ರಮಗಳನ್ನು 3D
ಹಲೋಗ್ರಾಂಮ್ ತಾಂತ್ರಿಕತೆಯ ಮೂಲಕ ವೀಕ್ಷಿಸಬಹುದು.
೦೦೦