ಈ ಭೂಮಿ ಚಪ್ಪಟೆಯಾಗಿದ್ದು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋದರೆ ಮನುಷ್ಯ ಬಿದ್ದು ಹೋಗುತ್ತಾನೆಂದು ನಂಬಲಾಗಿತ್ತು ಆದರೆ ಈಗ ಭೂಮಿಯು
ಗೋಲಾಕಾರವಾಗಿದೆ ಎಂದು ಕಂಡುಹಿಡಿದ ಮೇಲೆ ಭೂವ್ಯೂಹದ ಹೊರಗಿನಿಂದಲೂ ಬೇರೆ ಗ್ರಹಗಳ ಮೇಲಿನಿಂದಲೂ ಭೂಮಿಯ ಆಕೃತಿಯನ್ನು ನೋಡಬಹುದು, ತಿಳಿಯಬಹುದು. ಆದರೆ ಇದರ ಗಾತ್ರ ಮತ್ತು ಪರಿಧಿಯನ್ನು ಕಂಡುಹಿಡಿಯುವ ಸಾಹಸವನ್ನು ಕ್ರಿ.ಪೂ. ೨೫೦ರಲ್ಲಿ ಎರಟೂಸ್ತೀನ್ಸ್ ಎಂಬ ಮನುಷ್ಯ ಭೂಮಿಯ ಪರಿಧಿಯ ಅಳತೆ ಮಾಡಿದನೆಂದು ಹೇಳಲಾಗುತ್ತದೆ. ಈತನ ಪ್ರಕಾರ ಸುಮಾರು ೪೬,೦೦೦ ಕಿ.ಮೀಟರ್ ಪರಿಧಿಯನ್ನು ಹೊಂದಿದೆ. ಆಧುನಿಕ ನಕ್ಷಾ ಕೌಶಲ್ಯವೂ ಕೂಡ ಭೂಮಿಯ ಪರಿಧಿಯು ಸುಮಾರು ೪೦,೦೭೬ ಕಿ.ಮೀ. ಎಂದು ನಿರೂಪಿಸಿದ ಈ ಎರಡೂ ಹತ್ತಿರದ ಅಳತೆಗಳಾಗಿದ್ದರಿಂದ ಒಪ್ಪಬಹುದಾಗಿದೆ.
*****
ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು