ಎಲ್ಲೆ ಇರು ನಾ ನಿನ್ನ ನೆನೆಯುವೆನು

ಎಲ್ಲೆ ಇರು ನಾ ನಿನ್ನ ನೆನೆಯುವೆನು ಚಿನ್ನ
ನೀ ಮರೆತರೂ ಹೇಗೆ ನಾ ಮರೆವೆ ನಿನ್ನ?

ನಭದ ನೀಲಿಮೆಯಲ್ಲಿ ಓಲಾಡಿ ಮುಗಿಲು
ಬರೆಯುವುದು ನಿನ್ನದೇ ಮುಖಮಾಟ ಹೆರಳು
ಓಡುವಾ ತೊರೆಯಲ್ಲಿ ಜಲಜಲಿಸಿ ಹರಳು
ನುಡಿಸುವುದು ಓ ನಲ್ಲೆ ನಿನ್ನದೇ ಕೊರಳು!

ಸಂಜೆಯ ಗಾಳಿಗಿದೆ ನಿನ್ನ ಮೈ ತಂಪು
ಮಲ್ಲಿಗೆಯ ಚೆಲ್ಲುತಿದೆ ನಿನ್ನುಸಿರ ಕಂಪು
ಅಲ್ಲೆ ಕಾಮನಬಿಲ್ಲು, ಸರಿಸಿಟ್ಟ ಸೀರೆ
ನಿನ್ನ ನೆನಪನೆ ಎಲ್ಲ ಉರಿಸುವುವು ನೀರೆ!

ನಿನ್ನ ಕಣ್ಣಿನ ಮಿಂಚುಬೆಳಕಿನಲಿ ಮಿಂದು
ಹಚ್ಚಿಕೊಂಡೆನು ಅಂದು ಕನಸುಗಳ ನೂರು
ಕಾಡುವುವು ಕನಸೀಗ ಕುದಿಯುವುದು ಇರುಳು
ಮುಗಿಯುವುದು ಕಡೆಗೊಮ್ಮೆ ಏಳುವುದು ನೆರಳು!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಿ ಕೊಳವೆ (ಕಲೀಡೋಸ್ಕೋಪ್)
Next post ನಗೆ ಡಂಗುರ – ೮೬

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…