ಖುರಾಸಾನ್ ಪ್ರಾಂತದ ಒಬ್ಬ ದೊರೆ. ಮಹಮದ್ ಸಬಕ್ತಗೀನನನ್ನು ನೋಡಿದ ಕನಸಿನಲ್ಲಿ. ಅವನು ಸತ್ತು ಎಷ್ಟೋ ಕಾಲವಾಗಿತ್ತು. ಅವನ ಮೈ ಅಂಗಾಂಗವೆಲ್ಲ ಹರಿದು ಮಣ್ಣಾಗಿತ್ತು. ಕಣ್ಣುಗಳು ಮಾತ್ರ ಮೊದಲಿನಂತೆ ತನ್ನ ಗೂಡಿನಲ್ಲಿ ಅತ್ತ ಇತ್ತ ತಿರುಗಾಡುತ್ತ ಸುತ್ತಲೂ ನೋಡುತ್ತಿದ್ದವು. ಈ ಒಗಟನ್ನು ಬಿಡಿಸಲಾರದೆ ಪಂಡಿತರು ಮೌನ ತಾಳಿದ್ದರು. ಒಬ್ಬ ದರ್ವೀಷ ಕೈ ಮುಗಿದು ಹೇಳಿದ, ‘ಆ ದೊರೆ ಇತರರು ತನ್ನ ರಾಜ್ಯವನ್ನು ಆಳುತ್ತಿದ್ದಾರಲ್ಲಾ ಎಂದು ಈ ಪರಿಯಾಗಿ ನೋಡುತ್ತಿದ್ದಾನೆ’ ಎಂದು.
ವೀರರೆಷ್ಟೋ ಮಂದಿ ಮಣ್ಣಿನಲಿ ಹೂಳಿದರು
ಬುವಿಯ ಮೇಲವರದೊಂದಾದರೂ ಗುರುತಿಲ್ಲ.
ಮಣ್ಣಿನ ಕೈಗಿತ್ತರವರವರ ದೇಹಗಳ
ತಿಂದಿತದು ಒಂದು ಮೂಳೆಯನಾದರಿಡಲಿಲ್ಲ.
ನೌ ಷೇರವಾನ್ ಅವನಿದ್ದನೆಂದೋಯೇನೋ
ಹೆಸರಿದುದು ದಾನಿಯವನಾಗಿದ್ದ ಕಾರಣದಿ.
ಜೀವತಾನಿರುವಂದು ಒಳ್ಳಿದನು ಮಾಡಯ್ಯ
ಇಲ್ಲವಾದನು ಮನುಜ ಎಂದು ಸಾರುವ ಮುನ್ನ.
*****





