Home / ಕಥೆ / ಕಿರು ಕಥೆ / ಶಾಂತಿಯ ಸುಳ್ಳು

ಶಾಂತಿಯ ಸುಳ್ಳು

ಒಬ್ಬ ದೊರೆ ತನ್ನ ಕೈಗೆ ಸಿಕ್ಕಿದ್ದ ಒಬ್ಬ ಸೆರೆಯಾಳನ್ನು ಕೊಂದುಬಿಡಬೇಕೆಂದು ಆಜ್ಞೆ ಮಾಡಿದ. ಆ ಮನುಷ್ಯನಿಗೆ ದಿಕ್ಕು ಕಾಣದೆ ನಿರಾಶೆಯಾಗಿ ಅರಸನನ್ನು ತನ್ನ ಭಾಷೆಯಲ್ಲಿ ಬೈದು ಕೆಟ್ಟ ಮಾತುಗಳನ್ನಾಡಿದ. ಜೀವವನ್ನು ಕೈ ತೊಳೆದುಬಿಟ್ಟ ಮನುಷ್ಯ ಮನಸ್ಸಿಗೆ ಬಂದುದನ್ನು ಹೇಳುವುದಕ್ಕೆ ಹಿಂಜರಿಯ ಎಂದು ಬಲ್ಲವರು ಹೇಳಿಯೇ ಇದ್ದಾರೆ.

ಓಡುವನು ಮಾನವನಪಾಯದಲಿ, ಆಗದಿರೆ
ಕೈ, ತಾನೆ, ಕತ್ತಿಯನು ಝಳಪಿಸುತ ನಿಲ್ಲುವುದು.

ಇವನು ಏನು ಹೇಳುತ್ತಿದ್ದಾನೆ ಎಂದು ದೊರೆ ಕೇಳಿದ. ಒಬ್ಬ ಮಂತ್ರಿ, ಒಳ್ಳೆಯವನು, ನುಡಿದ: ‘ಒಡೆಯ, ಈ ಮನುಷ್ಯ ಹೇಳಿದ್ದಾನೆ, ‘ಬಂದ ಕೋಪವನ್ನು ತಡೆದು ಇತರರನ್ನು ಮನ್ನಿಸುವ ಧಾರಾಳಿಗಳಿಗಾಗಿಯೇ ಸ್ವರ್ಗ ಇರುವುದು. ದೇವನು ಅಂತಹವರನ್ನು ಖಂಡಿತವಾಗಿ ಸಲಹುತ್ತಾನೆ’ ಎಂದು. ದೊರೆಗೆ ಮರುಕವಾಯಿತು. ಅವನ ರಕ್ತವನ್ನು ಹರಿಸಬೇಡಿ ತಡೆಯಿರಿ ಎಂದು ನಿಲ್ಲಿಸಿದ. ಎದುರು ಕಕ್ಷಿಯ ಮಂತ್ರಿಯೊಬ್ಬ ತಟ್ಟನೆ ಹೇಳಿದ: ‘ನಮ್ಮಂತಹವರು, ಮಂತ್ರಿಗಳು ದೊರೆಗಳ ಎದುರಿನಲ್ಲಿ ಸತ್ಯವನ್ನಲ್ಲದೆ ಬೇರೆ ನುಡಿಯುವುದು ಸಲ್ಲದು. ಈ ಪಾಪಿ ಸ್ವಾಮಿಯನ್ನು ಬೈದು ಆಡಬಾರದುದನ್ನು ಆಡಿದ್ದಾನೆ.’ ಈ ಮಾತನ್ನು ಕೇಳಿ ದೊರೆಗೆ ಕೋಪ ಬಂದಿತು. ಹೇಳಿದ: ‘ಅಯ್ಯಾ ನಿನ್ನ ಈ ನಿಜಕ್ಕಿಂತಲೂ ಹೆಚ್ಚಾಗಿ ಆತ ಹೇಳಿದ ಸುಳ್ಳಿನಿಂದಲೆ ನನ್ನ ಮನಸ್ಸಿಗೆ ಸಂತಸವಾಯಿತು. ಆ ಮಾತು ನೀತಿಯಲ್ಲಿ ಆಡಿದ್ದು, ಈ ಮಾತು ಕಿಚ್ಚಿನಿಂದ ಆಡಿದ್ದು. ಶಾಂತಿಗಾಗಿ ಆಡುವ ಸುಳ್ಳು ಜಗಳ ತೆಗೆಯುವ ನಿಜಕ್ಕಿಂತ ಮೇಲು ಎಂದು ಮತಿವಂತರು ಹೇಳಿದ್ದಾರೆ.’

ಮಂತ್ರಿಗಳು ಹೇಳಿದುದ ದೊರೆ ತಾನು ಮಾಡುವನು,
ದುಃಖಕರವದು ಮಂತ್ರಿಯೊಳ್ಳಿದನು ತೋರದೊಡೆ.
*****

Tagged:

Leave a Reply

Your email address will not be published. Required fields are marked *

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...