Home / ಕವನ / ಕವಿತೆ / ಬಿಡಿ ಹಾಡುಗಳು

ಬಿಡಿ ಹಾಡುಗಳು

ಬೂದನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ
ಸಾಲ ಶರಣರಿಗೆ ಸರಮಾಲೆ || ಕಟಿಗೊಂಡು
ಮಾದಯ್ಯ ಗೆದ್ದ ಕೈಲಾಸ ೧

ಶಿವಶಿವ ಎಂದಾರ, ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವ
ಶಿವನೆಂಬ ಸಬುದ ಬಿಡಬ್ಯಾಡ ೨

ಹಂತಿ ಹೊಡೆಯುತ ನೆನೆದೆ, ಸಂತಸದಿ ಶರಣರನು
ಕಂತುಹರ ನಿನ್ನ ಭಕ್ತರನು | ನೆನೆಸಿದರ
ಸಂತಸದಿ ನೀಡೋ ವರಶಿವನೆ ೩

ಹಂತಿಪದಕೊಂದಿಲ್ಲ, ನಿಂತು ಬೆನಕನ ಪೂಜೆ
ಹಂತಿಯೋಳು ಪೂಜೆ ಶರಣರಿಗೆ | ಒಕ್ಕಲಿಗ
ಸ್ವಂತ ನೆನೆಯೆಂದ ಗಣಪನಿಗೆ ೪

ಬೇಡ ಬೇಟೆಗೆ ಹೋಗಿ, ಬೆಲ್ಲ ಪುತ್ತರಿ ಕೊಯ್ದ
ಬೇಡ ಕನ್ನಯ್ಯ ಶಿವಪೂಜೆ | ಮಾಡಿದರ
ನಾಡೆಲ್ಲ ನೋಡು ಶಿವರಾತ್ರಿ ೫

ಕನ್ನ ಬೇಟೆಯನಾಡಿ, ಹೊನ್ನಬೆಟ್ಟವ ತಿರುಗಿ
ಪನ್ನಂಗಧರಗೆ ಎಡೆಮಾಡಿ | ನರಿಕೂಗಿ
ಸಣ್ಣ ರಾಸ್ಯುಕ್ಕಿ ಕಣತುಂಬಿ ೬

ಹರನ ಶಿಖರದ ಮೇಲೆ, ಸಿರಿಗಂಧದ ಮರಹುಟ್ಟಿ
ಕಿರಿಟದೊಳೆರಡು ಗಿಳಿಕೂತು | ಓದ್ಯಾವ
ಹರಳಯ್ಯನೆಂಬು ಹಳೆಗಥೆಯ ೭

ಆರಾಣದಡಿವ್ಯಾಗ, ಆರು ಕಾಲಿನ ಮಂಚ
ನಾಗರ ಸರಪು ತೆಲೆಗಿಂಬು | ಶಿವಲಿಂಗ
ಹ್ಯಾಂಗ ಗವಿದಾವ ಸವನಿದ್ದೆ ೮

ಇಂಜಾಣದಡಿವ್ಯಾಗ, ಮಂಜ ಬಿದ್ದವ ತಾಯಿ
ಮಂಜಲ್ಲ ಮಳೆಯ ಸರುವಂದೆ | ಶಿವಲಿಂಗ
ಕೆಂಜಡೆ ಬಿಚ್ಯಾರ ಬಿಸಲೀಗೆ ೯

ಹರೆಯ ಹೊತ್ತೀಲೆದ್ದು, ನರಿಯ ಮಾರಿಯ ಕಂಡೆ
ತಿರುಗಾಡದ ಕಂಡೆ ಪವಳ್ಯಾಗ | ಶಿವಲಿಂಗ
ಸಾಲ ಸಂಪೀಗಿ ವನದಾಗ ೧೦

ಗುಡ್ಡದ ಮಲ್ಲಯ್ಯ, ಗುಡಿಯೆಲ್ಲ ಬಂಗಾರ
ಹಾಸೀಗಿ ಗಲ್ಲು ಹವಳಾವು | ಮಲ್ಲಯ್ಯ
ಬೀಸಣಿಕೆಗೆಲ್ಲ ಬಿಡಿ ಮುತ್ತು ೧೧

ರಾಗಿ ಬಣ್ಣದ ಕುದುರಿ, ರಾಜೇಕ ದೊಡ್ಡದು
ರಾಜರೊಳುರಾಜ ಮಳೆರಾಜ, ಬರುವಾಗ
ರಾಜೀವ ಕೈಯ ಮುಗಿದಾವ ೧೨

ಕೆಂದಗುದುರಿಯನೇರಿ, ಕೆರಿಯಾಗ ನಿಂತವನ್ಯಾರ
ಅಂಜತೀನಯ್ಯ ಹೆಸರ್ಹೇಳ | ಲೋಕಽದ
ಮಂಜಿನಾಗಿರುವ ಮಳೆರಾಜ ೧೩

ಹಚ್ಚನ್ನ ಹರಿನಾಮ, ಮುತ್ತಿನ ಗೋಪಾಳ
ಹೊತ್ತೇರಿ ಬರುವ ಇವನ್ಯಾರ, ಕೆರೂರ
ಗಚ್ಚಿನ ಗುಡಿಯ ಕರಿಹನುಮ ೧೪

ಕಪ್ಪೂರ ಬೆಳಕೀಲೆ, ಗುಗ್ಗೂಳ ಹೊಗೆಯಽಲಿ
ಅಪ್ಪ ರಾಷಣ್ಣ ಬೆವತಾನ, ಪೂಜ್ಯಾರಿ
ಮುತ್ತೀನ ಚೌರಿ ನೀ ಬೀಸೊ ೧೫

ಏಳ ಯಲ್ಲವ ತಾಯಿ, ಎಷ್ಟೊತ್ತ ಮಲಗೀದೆ
ಹೂವೆಂಜಲಾಗಿ ಹುಳಮುಟ್ಟಿ, ಕೊಳ್ಳದ
ನೀರೆಂಜಲಾಗಿ ಗಿಳಿ ಕುಡಿದು ೧೬

ಶರಣರ ನೆನದಽರ, ಸರಗೀಯ ಇಟ್ಹಾ೦ಗ
ಅರಳ ಮಲ್ಲೀಗಿ ಮುಡಿದ್ಹಾಂಗ, ಕಲ್ಯಾಣ
ಶರಣರ ನೆನೆಯೋ ಎಲೆ ಮನವ ೧೭

ದೈವ ದೇವರ ಹಂತಿ, ಭವದೊಳಗೆ ನಮ್ಹಂತಿ
ತೇದುಂಡ ಹಂತಿ ನಂಬಾಳು | ಒಕ್ಕಲಿಗ
ಕೋದ ತೆನಿಹಂತಿ ಜನುಮಾಕೊ ೧೮
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...