Home / ಲೇಖನ / ಇತರೆ / ಮೊದಲ ಕತೆ

ಮೊದಲ ಕತೆ

ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿದ್ದರು. ಒಮ್ಮೆ ಸಭೆಯಲ್ಲಿ ಒಬ್ಬ ಎದ್ದು ನಿಂತು- “ನಮ್ಮ ಸಂಸ್ಕೃತಿ ಮೊದಲೋ? ವಿಶ್ವದ ದೇವರುಗಳು ಮೊದಲೋ?” ಎಂದು ಪ್ರಶ್ನಿಸಿರ್ದ.

ಇಡೀ ಸಭೆಯೇ ನಿಶ್ಯಬ್ದವಾಯಿತು. ಅಲ್ಲಿದ್ದವರೆಲ್ಲ ಸ್ವಾಮಿ ವಿವೇಕಾನಂದರನ್ನು ಕುತೂಹಲದಿಂದ ನೋಡುತ್ತಾ ಕುಳಿತರು.

ಸ್ವಾಮಿ ವಿವೇಕಾನಂದರು- “ನನಗಿಂದು ಭಲೇ ಖುಷಿಯಾಗುತ್ತಿದೆ. ನನ್ನ ನೂರಾರು ಭಾಷಣ ಇಲ್ಲಿ ಚಿಕಾಗೋ ನಗರದಲ್ಲಿ ಪ್ರಭಾವ ಬೀರಿದೆಯೆನಿಸುವುದು ಬಹಳ ಒಳ್ಳೆಯ ಪ್ರಶ್ನೆಯನ್ನೇ ನೀವು ಕೇಳಿರುವಿರಿ. ಇದೊಂದು ಬೀಜವೃಕ್ಷದ ನ್ಯಾಯವಿದ್ದಂತೇ… ಮರ ಮೊದಲೋ? ಬೀಜ ಮೊದಲೋ? ಎಂಬ ಗಂಭೀರವಾದ ವಾದ ವಿವಾದ! ಸಂಸ್ಕೃತಿ ದೇವರು ಏಕಕಾಲದಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಮನುಷ್ಯ ದೇವರನ್ನು ಸೃಷ್ಠಿಸಿದ ಎನ್ನುವ ವಾದ ಉದ್ಧಂಡತನವಾದ. ದೇವರು ಮೊದಲು, ನಂತರ ಮನುಷ್ಯ, ಈವತ್ತು ಮನುಷ್ಯ ಇತರೆ ಮನುಷ್ಯರನ್ನು ಅರ್ಥ ಮಾಡಿಕೊಂಡಿಲ್ಲ. ತನ್ನನ್ನು ತಾನು ಅರಿತಿಲ್ಲ. ಇನ್ನು ಗೌರವ ಕೊಡುವುದಿಲ್ಲ ಇವರೆಲ್ಲ ಮನುಷ್ಯರಲ್ಲ, ರಕ್ಕಸರು, ರಾವಣರು, ಸೈತಾನರು, ದೇವರು ಮನುಷ್ಯರೊಳಗಿರುವುದರಿಂದ ಒಬ್ಬರಿಗೆ ಒಬ್ಬರು ಪರಸ್ಪರ ಗೌರವ ಕೊಡುವ ತೆಗೆದುಕೊಳ್ಳುವುದನ್ನು ಮೊದಲು ಕಲಿತುಕೊಳ್ಳಬೇಕು! ಆಗಲೇ ದೇವರ ಮೇಲೆ ನಂಬಿಕೆ, ಭಕ್ತಿ, ಗೌರವ, ಮೂಡುವುದು.

ದೇವರ ಅಸ್ತಿತ್ವವಿರುವುದರಿಂದಲೆ ಎಲ್ಲರೂ ಭಯ, ಭಕ್ತಿ, ನೆಮ್ಮದಿಯಿಂದ ಜೀವನ ಮಾಡುತ್ತಿರುವುದು. ಇಲ್ಲಿ ನಮ್ಮಲ್ಲಿ ನೆಮ್ಮದಿಗೆ, ಸುಖ, ಸಂತೋಷಕ್ಕೆ, ಸಾವಿರಾರು ಮಾರ್‍ಗಗಳಿವೆ. ಏಕೆಂದರೆ… ದೇವರಿದ್ದಾನೆಂಬ ಒಂದೇ ಒಂದು ಕಾರಣಕ್ಕೇ… ಸಿದ್ಧಾಂತ, ತತ್ವ, ನಂಬಿಕೆ, ರಚನೆಯ ಆಧಾರದ ಮೇಲೆ ಸಂಸ್ಕೃತಿ- ದೇವರ ಅಸ್ಥಿತ್ವ ಕೂಡಾ… ನಿರ್‍ಧಾರವಾಗುವುದು” ಎಂದು ವಿವರಿಸುತ್ತಾ ನಿಂತರು.

ಅಲ್ಲಿದ್ದವರೇನು… ಪ್ರಶ್ನೆ ಕೇಳಿದ ವ್ಯಕ್ತಿ ಕೂಡಾ ಸ್ವಾಮಿ ವಿವೇಕಾನಂದರ ಪ್ರತಿಭೆ, ವಿದ್ವತ್ತು, ಕಂಚಿನಂಥಾ ಕಂಠಶ್ರೀಗೆ ನಿಬ್ಬೆರಗುಗೊಂಡನಲ್ಲದೆ, “ಸ್ವಾಮಿಗಳೆ… ಇಂದು ನಮ್ಮ ಕಣ್ಣು ತೆರೆಸಿದ್ದೀರಿ. ನಿಮ್ಮ ದೇವರು ನಮಗೆ ಗಾಡ್ ಆಗುವುದು. ನಮ್ಮ ವರ್ಷಿಪ್, ಫೇತ್‌, ಇಕ್ವಾಲಿಟಿ, ಬಿಲೀಫ್, ರೈಸ್… ನಿಮಗೆ ಅನ್ನ ದೇವರು- ಪೂಜೆ ವಿಶ್ವಾಸ, ಸಮಾನತೆ, ನಂಬಿಕೆ… ಇತ್ಯಾದಿ ರೂಪದಲ್ಲಿ ಕಾಣುವುದು!” ಎಂದು ಒಪ್ಪಿಕೊಂಡನಲ್ಲದೆ, ಸ್ವಾಮಿಗಳಿಗೆ ಅಡ್ಡಬಿದ್ದು ಹೊರಟ.

ಅಲ್ಲಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸ್ವಾಮಿ ವಿವೇಕಾನಂದರಿಗೆ ಏನೋ ಸಾಧಿಸಿದ ತೃಪ್ತಿ, ಆನಂದ ಲಭಿಸಿತು. ತಿಳಿಯದಲೇ… ಜನರತ್ತ ಕೈಬೀಸಿ ಸಂಭ್ರಮಿಸಿದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...