Home / ಲೇಖನ / ಇತರೆ / ವಜ್ರ ಕತೆ

ವಜ್ರ ಕತೆ

ವಜ್ರದ ಗಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದುದು. ಮೊತ್ತ ಮೊದಲು ವಜ್ರವನ್ನು ಬಳಸಿದ ಹಾಗೂ ಪರಿಚಯಿಸಿದ ದೇಶ ಭಾರತ!

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿದೆ. ಇದು ವಿಶ್ವಕ್ಕೇ ಮಾದರಿ. ಬಹು ದೊಡ್ಡ ಗಣಿಯಾಗಿದೆ. ಈ ಗಣಿಯಿಂದ ಕೊಹಿನೂರ್ ವಜ್ರವನ್ನು ಹೊರ ತೆಗೆದಿದ್ದು! ಇದು ಇಡೀ ವಿಶ್ವದಲ್ಲೇ ಅತಿ ದೊಡ್ಡ ವಜ್ರದ ಹರಳಾಗಿದ್ದು ಅದು ಸಾವಿರಾರು ಕೋಟಿ ಬೆಲೆ ಬಾಳುವುದು!

ಭವ್ಯ ಭಾರತವನ್ನು ಸುಮಾರು ೧೫೦ ವರ್ಷಗಳ ಕಾಲ ಬ್ರಿಟೀಶರು ಆಳಿದರು. ಆಗ ಬೆಲೆ ಬಾಳುವ ವಸ್ತು ಒಡವೆ ಮುತ್ತು ರತ್ನ ವಜ್ರ ವೈಡೂರ್ಯಗಳನ್ನು ಹಡಗಿನ ತುಂಬಾ ಬ್ರಿಟನ್‌ಗೆ ಸಾಗಿಸಿದರು! ಅದರಲ್ಲಿ ಕೊಹಿನೂರ್‌ ವಜ್ರನೂ ಸೇರಿದೆ.

ಜುಲೈ ೨೦೧೫ ರ ಆರಂಭ ದಿನಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ – “೨೦೦ ವರ್ಷಗಳ ಕಾಲ ಭಾರತವನ್ನು ಆಳಿ ಲೂಟಿ ಮಾಡಿದ್ದಕ್ಕೆ ಪ್ರತಿಯಾಗಿ ಭವ್ಯ ಭಾರತಕ್ಕೆ ಬ್ರಿಟನ್ ಸರ್ಕಾರ ಪೂರ್ಣನಷ್ಟ ಪರಿಹಾರವನ್ನು ತುಂಬಿ ಕೊಡಲೇಬೇಕು” ಎಂದು ವಾದಿಸಿದ್ದರು.

ಈಗ ಇದರ ಬೆನ್ನಲ್ಲೇ ದಿನಾಂಕ ೨೮-೦೭-೨೦೧೫ ರಂದು ಮಂಗಳವಾರದ ದಿನದಂದು “ಜಗತ್ ಪ್ರಸಿದ್ಧ ನಮ್ಮ ಕೊಹಿನೂರ್‌ ವಜ್ರವನ್ನು ಭವ್ಯ ಭಾರತಕ್ಕೆ ಈ ಕೂಡಲೇ ಹಿಂದಿರುಗಿಸತಕ್ಕದ್ದು” ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ಕೀತ್ ವಾಜ್ ಎಂಬುವರು ಧ್ವನಿಗೂಡಿಸಿರುವರು.

ಇದೇ ನವೆಂಬರ್ ೨೦೧೫ ರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ದೇಶಕ್ಕೆ ಭೇಟಿ ನೀಡುತ್ತಿದ್ದು ಆ ವೇಳೆಯಲ್ಲಿ ಅವರ ಕೊಹಿನೂರ್‌ ವಜ್ರವನ್ನು ಭಾರತಕ್ಕೆ ಮರಳಿಸಿ ಎಂದು ಕೀತ್‌ವಾಜ್ ಸ್ಥಳೀಯ ಸರ್ಕಾರವನ್ನು ಗಟ್ಟಿಯಾಗಿ ಆಗ್ರಹಿಸಿರುವರು.

“ಶಶಿ ತರೂರ್ ಅವರ ಮಾತುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯನ್ನು ನಾನು ಸ್ವಾಗತಿಸುತ್ತೇನೆ. ಅವರ ನಿಲುವುಗಳನ್ನು ನಾನೂ ಕೂಡಾ ವ್ಯಕ್ತ ಪಡಿಸುತ್ತೇನೆ. ಅವರ ಅಗ್ರಹ ಅಪ್ಪಟವಾಗಿದ್ದು ಈ ಬಗ್ಗೆ ಎಲ್ಲರೂ ಯೋಚಿಸುವ ಅಗತ್ಯವಿದೆಯೆಂದು” ಕೀತ್ ವಾಜ್ ಮೇಲಿಂದ ಮೇಲೆ ವಾದಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ, ಭಾರತಕ್ಕೆ ಸರ್ವ ಸ್ವಾತಂತ್ರ್ಯವನ್ನೇ ಕೊಟ್ಟ ಅಂದಿನ ಬ್ರಿಟನ್ ಸರ್ಕಾರ ಇಂದು ಕೊಹಿನೂರ್‌ ವಜ್ರವನ್ನು ಮರಳಿಸಿ ಬಿಡುವುದು… ಇಷ್ಟೆಲ್ಲ ಪ್ರತಿಧ್ವನಿ ಮೊಳಗಿದ ಮೇಲೆ ಅದನ್ನು ಅವರು ತಮ್ಮ ಬಳಿ ಇಟ್ಟುಕೊಂಡರೆ ಸರಿ ಕಾಣದು ಅಲ್ಲವೇ?!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...