ಮೂಲ: ವಿಲಿಯಂ ಬಟ್ಲರ್ ಏಟ್ಸ್
ನಮ್ಮ ಕಾಲದಲ್ಲಿ ಮಾನವನ ವಿಧಿ ರಾಜಕಾರಣದ
ಮೂಲಕ ತನ್ನ ಅರ್‍ಥವನ್ನು ವ್ಯಕ್ತಪಡಿಸುತ್ತದೆ.
-ಥಾಮಸ್‌ಮನ್
ಹಾಗೆ ನಿಂತಿರುವಾಗ ಅಲ್ಲಿ ಆ ಹುಡುಗಿ
ಹೇಗೆ ಹರಿಸಲಿ ಇತ್ತ ಗಮನವನ್ನ?
ರೋಮಿನದೊ, ರಷ್ಯದ್ದೊ, ಇಲ್ಲವೇ ಸ್ಪೇನಿನದೊ
ರಾಜಕೀಯಕ್ಕೆ ನನ್ನ ಲಕ್ಷ್ಯವನ್ನ?
ಇಲ್ಲಿದ್ದಾನೆ ಒಬ್ಬ ಲೋಕ ಸುತ್ತಿದ ವ್ಯಕ್ತಿ
ತಾನಾಡುವುದನ್ನೆಲ್ಲ ಬಲ್ಲವ;
ಇನ್ನೊಬ್ಬ ರಾಜಕಾರಣಿ ಕೂಡ ಇದ್ದಾನೆ
ಅತ್ಯಂತ ಪಂಡಿತ ವಿಚಾರಶೀಲ.
ಯುದ್ಧ ಹಾಗೂ ಅದರ ಭೀಕರತೆ ಕುರಿತು
ಅವರ ಮಾತೆಲ್ಲ ನಿಜ ಇರಲೆಬೇಕು;
ಅದರಯ್ಯೋ ನಾನು ಪ್ರಾಯಕ್ಕೆ ಮರಳಿ
ಆ ಹೆಣ್ಣನ್ನು ತೋಳಲ್ಲಿ ತಬ್ಬಬೇಕು.
*****