ಹಾಡ ಕೇಳ ನೋಡ
ಹಾಡಿನೊಳಗಣ ಭಾಷೆ ಕಟ್ಟಿ ಹಾಡ

ಭಾಷೆ ಕೇಳ ನೋಡ
ಭಾಷೆಯೊಳಗಣ ರೂಪ ಕಟ್ಟಿ ಹಾಡ

ರೂಪ ಕೇಳಿ ನೋಡಿ
ರೂಪದೊಳಗಣ ಭಾವ ಕಟ್ಟಿ ಹಾಡ

ಭಾವ ಕೇಳ ನೋಡ
ಭಾವದೊಳಗಣ ಗೆಳೆತನ ಕಟ್ಟಿ ಹಾಡ

ಗೆಳೆತನ ಕೇಳಿ ನೋಡ
ಗೆಳೆತನದೊಳಗಣ ಐಕ್ಯತೆ ಕಟ್ಟಿ ಹಾಡ

ಐಕ್ಯತೆ ಕೇಳ ನೋಡ
ಐಕ್ಯದೊಳಗಣ ನಾಡ ಉಸಿರ ಹಾಡ

ನಾಡ ಉಸಿರ ನೋಡ
ಕನ್ನಡಮ್ಮ ತೂಗ್ಯಾಳ ಕೂಸ ಹಾಡ

ಕೂಸ ಕೇಳ ನೋಡ
ಕೂಸಿನೊಳಗಣಾ ನಗೆಯ ಸವಿ ಹಾಡ

ನಮಿಸಿ ಕೇಳ ನೋಡ
ತಾಯಿ ವರವ ಕೊಟ್ಯಾಳ ನಮಗ

ವರವ ಕೇಳ ನೋಡ
ಜನುಮ ಜನುಮಕೂ ಕನ್ನಡಮ್ಮನ
ಸೇವೆ ಮಾಡಿ ಹಾಡೋಣ ಬಾರ
ಹಾಡಿ ನಲಿಯೋಣ ಬಾರ
*****