ತಂದನಾನ ತಾನ ನನ್ನ ತಾನನ ತಂದೇನಾನಾ
ತಾನನ ತಂದೇನಾ ತಂದನ್ನಾನಾ || ೧ ||
ಮಕ್ಕಳ ಇಲ್ಲೇಂದೆ ದುಕ್ಕ ಮಾಡ್ಯಳೆ ಗೌರೀ
ದುಕ್ಕ ಮಾಡ್ಯಾಳೆ ಗೌರೀ || ೨ ||
ಮಕ್ಕಳ ಬೇಡಿದಳೇ ಶಿವನಲ್ಲಿ ಪಾಪಿಯ ಗೌರೀ
ತಾನಂದನ್ನ ತಾನನಾಽ ತಂದೋನಾನಾ || ೩ ||
ರೊಟ್ಟೀ ಸುಟ್ಟಳೆ ಗೌರೀ | ಶಿಕ್ಕದ ಮೇಲ್ ಮಡಗ್ಯಾಳು
ಅಕ್ಕನ ಮಕ್ಕಳು ಮನೆಗೆ ಬಂದೋ | ಪಾಪಿಯ ಗೌರೀ || ೪ ||
ಅವರಕೆ ಸೂರ ಕೊಡನಿಲ್ಲ | ತಂದನಾ ತಾನಾ
ಅಕ್ಕನ ಮಕ್ಕಳಿಗೆ ಸೂರಕೊಡನಿಲ್ಲ | ಪಾಪಿಯ ಗೌರೀ || ೫ ||
“ನಿನಗ್ಯಾಕೆ ಮತ್ತರು ಸಂತನವೇ” ತಾನಂದನ್ನಾ
“ಕುಂಟ ನನಗೆ ಬೇಡ ಕುರುಡ ನನಗೆ ಬೇಡ || ೬ ||
ಗೆಜ್ಜೆಕಾಲ ಕೊಮರನ ಕೊಡೊವನಗೆಂದಳು | ಪಾಪಿಯ ಗೌರಿ
“ಕುಂಟನೂ ನಾನೇನು ಕೋಡೇ ಕುರುಡಾನೂ ನಾನೇನು ಕೋಡ || ೭ ||
ಗೆಜ್ಜೆಕಾಲ ಕೊಮರನ ಕೊಡ್ವೇ ನಿನಗೇ” | ಪಾಪಿಯ ಗೌರಿ
“ಬಾಳೆ ನೆಟ್ಟಿಕೋಳೆ ನೀನು | ಬಾಳೆಗೆ ನೀರೆರಕೋಳೇ ಗೌರಿ || ೮ ||
ಬಾಳಿಗೆ ಸಾವಿರ ಸಂತಾನ ಬರತೀದೇ | ಪಾಪಿಯ ಗೌರಿ
ಆದರಕಂಡ ಜಾನ ಮರಕೋಳೆ” ತಾನಂದನ್ನಾ || ೯ ||
ತೆಂಗ ನೆಟ್ಟಿಕೋಳೇ ನೀನೂ ತೆಂಗಿಗ್ ನೀರೆರಕೋಳೆ
ತೆಂಗು ಸಾವಿರದು ಫಲ ಬರತೀದೇ ತಾನಂದನಾ || ೧೦ ||
“ಕುಂಟನು ಬೇಡ ನನಗೆ ಕುರುಡನು ಬೇಡ ನನಗೆ
ಬಂಜೆಯೆಂಬಂಥ ಶಬದ ಮರಕೋಡೋ ತಾನಂದನಾನ್ನ || ೧೧ ||
*****
ಹೇಳಿದವರು: ತೊಳಶು ನಾಗು ಗುನಗ, ಅಡಲೂರು ತಾಲೂಕ: ಅಂಕೋಲಾ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.