ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ
ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ ||
ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ
ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ ||
ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ರಂಗಾ
ರಂಗನೊಂದೇ ತಂಗೀ ಬರುವಾಳೋ ಕೋಲೇ || ೨ ||
ರಂಗನೊಂದೇ ತಂಗೀ ಬರುವಾಳೋ ಕೆನ್ನುರೀ ರಂಗಾ
ಬಂದೀ ರಾಜಂಗಳದಲ್ಲಿ ನಿಲೂತಾಳೋ ಕೋಲೇ || ೩ ||
ಬಂದೀ ರಾಜಂಗಳದಲ್ಲಿ ನಿಲೂತಾಳೋ ರಂಗನಾ ತಂಗೀ
ಕಿನ್ನುರಿ ಕಾಂಬುತಲೈದೋಲೋ ಕೋಲೇ || ೪ ||
ಕಿನ್ನುರಿ ಕಾಂಬುತೆಲೋ ಲೈದಾಲೋ ರಂಗನ ತಂಗೀ
ಕಿನ್ನುರಿ ತಡವುತೇ ಲೈದೊಲೋ ಕೋಲೋ || ೫ ||
ಕೆನ್ನೂರಿ ತಡವುತೆಲೋ ತಡಿದಾಳೊರಂಗನ ತಂಗೀ
ಕಿನ್ನುರಿ ಮೇನೆ ಕೈಯಾಡೀ ಹೊಡೀದಳೋ ಕೋಲೇ || ೬ ||
ಕಿನ್ನುರಿ ಮೇನೆ ಕಯ್ಯೋಲೇ ಹೊಡಿದಾಳೆ ರಂಗನಾ ತಂಗೀ
ಕೆನ್ನುರಿ ಮೇನೇಲೇ ನುಡುದಿಲವೋ ಕೋಲೇ || ೭ ||
ಕಿನ್ನುರಿಮೇನೇಲೇ ನುಡೂದಿಲ್ಲ ರಂಗನಾ ತಂಗೀ
ಏನಾರೇ ಹೇಳೂತೈದಾಳೋ ಕೋಲೇ || ೮ ||
ಯೇನನಾರೆ ಹೇಳುತೇ ಲೈದಾಳೋ ರಂಗನ ತಂಗೀ
“ನನ್ನ ಕಯ್ಯಾಲ್ಲೇನೇ ನೀನೂ ನುಡಿದಿಲವೋ ಕೋಲೇ || ೯ ||
ನನ್ನ ಕಯ್ಯಲ್ಲೇನೋ ನುಡೂದಿಲ್ಲ ಕೀನ್ನುರಿಯೇ ಕೇಳೇ”
“ನಿನ್ನ ನಲ್ಲನ ಕಯ್ಯಲೇ ನೀನೇ ನುಡೂವ್ಯಲ್ಲೇ ಕೋಲೇ” || ೧೦ ||
ಅಟ್ಟೊಂದು ಹೇಳುತೇಲೇ ಲೈದಾಳು ರಂಗನ ತಂಗೀ
ತಂಗೀವಂದು ಮಾತೇಲೇ ಕೇಳಿಯಾನೋ ಕೋಲೇ
ಆಗೇಲೋ ರಂಗಾನೂ ಬಾಳೆ ಬಂದೇ ಶಿಟ್ಟೇ ಬಂದೊ|| ೧೧ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.