ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ
ವಳೆ ಲಾಗಲೇ ಲೇನು ಮಾಡ್ಯಾನಾ || ೧ ||
ಅರಸೂನ ವನಗೆ ಲಾದರೆ ನಡುದ್ಯಾ
ವಳ್ಳೆಲಾಗಲೇ ಲೇನು ಮಾಡ್ಯನು || ೨ ||
ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು?
“ನಿಮ್ಮಲೆ ಮನುಗೆ ಸಾನಲೆ ಉಳುತೇ” || ೩ ||
ಅಂದಿ ಅರಸಗೆ ಲಾದರೆ ನುಡುದನು ಗೊಲ್ಲಾರ ಹುಡುಗಾ
ಚಿನ್ನದ ಗುದುರೆ ಗೊಲ್ಲಾರ ಹುಡುಗಾ || ೪ ||
ಲಾಗಲೆ ಲೇನು ಕೇಳ್ಯಾನು ಅರಸ?
ಮರಮನೆಲೆ ಯಾವ ಲಕ್ಕಿಲಾಸೋ || ೫ ||
ಯಲಗೊತ್ತುಲೆ ಕೇಳಿದ ಅರಸ
ಯಾವರೆ ಕೆಲಸಾ ಬೇಕಲ ಸ್ವಾಮಿ || ೬ ||
ಯಾವರೆ ಕೆಲಸಾ ಮಾಡಲು ಎಲ್ಲೇ
ಲಾಗಲೆ ಲೇನೂ ಮಾಡನೆ ಹುಡುಗಾ || ೭ ||
ಲಡುಗೆಲೆ ಮನೆಗೆ ಲಾದರೆನೋಡಿ
ಲಡುಗೆಲೇ ಲಾದರೆ ಮಾಡುಲಿಕೆ ಹಾಕ್ಯಾ || ೮ ||
ಗೊಲ್ಲರ ಹುಡುಗಾ ಯೇನಾರೆ ಮಾಡ್ಯಾ?
ಬೇಕಾದ ಲಡುಗೆ ಮಾಡಿರಿ ಇನ್ನೇ || ೯ ||
ತಾಸೀನ ಲೊಳಗೆ ಮಾಡುತ್ಯಾನು ಹುಡುಗಾ
ಒಳ್ಳೆ ಲಡಗೆ ಲೂಟಕಾದರೆ ಕರದಾ || ೧೦ ||
ಒಳ್ಳೆ ಅರಶಗೆ ಲಡುಗೇ ಮಾಡಿದ
ನಿತ್ಯದಂತೆ ದೇವರ ಪೂಜ್ಯೇ || ೧೧ ||
ಪೂಜೆನಲಾದರೆ ಮಾಡ್ಯಾನ ಲರಸ
ಊಟಕೆಲಾದರೆ ನಡೆದನು ಲರಸ || ೧೨ ||
ನಡೆದನೋ ಲರಸ ನೋಡಿರಿ ಶಿವನೆ
ಚಿನ್ನದ ಗುದುರೇ ಗೊಲ್ಲರ ಹುಡುಗಾ || ೧೩ ||
ಲರಸಗೆ ನೋಡಿ ಹೇಳ್ಯಾ ನೆಲಾದರೆ
ಬಟ್ಟಲದೊಳಗೆ ಹಾಕ್ಯಾನು ಲಿನ್ನೆ || ೧೪ ||
ಊಟದ ರುಚಿಯೇ ನೋಡ್ಯಾನು ಲರಸಾ
ಪಕವನಲಾದರೆ ಆಗಿದೊಶೀವನೆ || ೧೫ ||
ಊಟಕೆ ಆದರೆ ಬೆರಗ್ಯಾನೋ ಲರಸು
ಚಿನ್ನದ ಗುದುರೆ ಗೊಲ್ಲರ ಹುಡುಗಾ
ಬೇಕಾದ ಊಟ ಉಪಚಾರ ಮಾಡುತ್ಯಾ || ೧೬ ||
*****
ಹೇಳಿದವರು: ಢಾಕು ದೇವು ನಾಯ್ಕ, ಅರಗಾ ತಾಲೂಕು, ಕಾರವಾರ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.