ದುಕ್ಕ

ಕಯ್ಞಾದ್ ಔಸ್ದಿ ಕುಡದೋನಂಗೆ
ಮೊಕಾನ್ ಯಾಕ್ ಸಿಂಡರ್‍ಸ್ತಿ?
ನಿಂಗೊಂದ್ ದುಕ್ಕ ಬಂದಿದ್ರ್, ಅದನ
ನಂಗಳ್ ಮುಂದ್ ಯಾಕ್ ಇರ್‍ಸ್ತಿ?
ನಮಗ್ಯಾಕ್ ದುಕ್ಕ ತರ್‍ಸ್ತಿ?
ಮುಕದಾಗ್ ಸೋನೆ ಯಿಡಕೊಂಡಂಗೆ
ಗೋಳ್ಯಾಕ್ ಸುಂಕೆ ಸುರ್‍ಸ್ತಿ? ೧

ದುಕ್ಕಾನ್ ಒತ್ಕೊಂಡ್ ಬಂದೋರ್ ನಾವು!
ಒತ್ಕೊಂಡ್ ಓಗೋರ್ ನಾವು!
ಸಿಕ್ದೋರತ್ರ ಯೋಳ್ಕೊಂಡಾಕ್ಸ್ನೆ
ಆರೋಗ್ತೈತ ಕಾವು!
ಸಾಯ್ತದೇನ್ ಈ ಆವು?
ಆರೋಕಿಲ್ಲ! ಸಾಯೋಕಿಲ್ಲ!
ಆರ್‍ಸಿ ಸಾಯ್ಸೋರ್ ನಾವು! ೨

ನಂ ನಂ ದುಕ್ಕ ನಂನಂಗೇನೆ
ವೊರಲಾರದಸ್ಟಸ್ಟ್ ಐತೆ!
ಜತೇಗ್ ನಿಂದೂ ಇರಲಂತಂದ್ರೂ
ಅದರಿಂದ ಏನಾಗ್ತೈತೆ?
ಏನ್ ಬಂದಂಗ್ ಆಯ್ತೈತೆ?
ಅವರಿವರತ್ರ ಅತ್ರೆ ನಿಂಗೆ
ದುಕ್ ಏನ್ ಕಮ್ಯಾಗ್ತೈತೆ? ೩

ನಂ ನಂ ದುಕ್ಕ ಸಿಕ್ದೋರತ್ರ
ಮಾಡ್ತಾನಿದ್ರೆ ಮಾಜರ್
ಕೇಳೋರ್ ಎದರಾಗ್ ಇರೊಗಂಟ್ಲೂನೆ
ದುಕ್ಕಾನೆ ಗೈರಾಜರ್!
ನಾವೆ ದೊರೆಗೊಳ್! ರಾಜರ್!
ಕೇಳೋವ್ರೇನ್ರ ಅಂಗೋಯ್ತಂದ್ರೆ
ತಕ್ಕೊ! ದುಕ್ಕ ಆಜರ್! ೪

ದುಕ್ಕ ಗಿಕ್ಕ ಎಲ್ಲ ನೋಡು
ನಂ ನಂ ಮನಸಿದ್ದಂಗೆ!
ಮನಸಿನ್ ಲಗಾಮ್ ನಂ ಕೈಲಿದ್ರೆ
ಇಲ್ದಿದ್ ಇರೋವಂಗೆ!
ಇರೋದ್ ಇಲ್ದಿದ್ದಂಗೆ!
(ಯೆಂಡ ಕುಡದೋನ್ ಮಾತ್ ಅಂತೇಳಿ
ನಗಬೇಡೋ ಏ ಪೆಂಗೆ!) ೫

ದುಕ್ಕ ಇದ್ರೆ ಇತ್ತಂತೇಳು!
ಸಂತೋಸಾನ ಗಳ್ಸು!
ಮಾರೆ ಮೇಗಿನ್ ಇಸ್ಟೇಜಿಂದ
ದುಕ್ಕಕ್ ಕತ್ತ್ ಇಡದ್ ತಳ್ಸು!
ನೆಗೀನ್ ಪರದೆ ಬಿಳ್ಸು!
ಯಿಂಗೆ ದುಕ್ಕಕ್ ದಪ್ಫನ್ ಮಾಡಿ
ಅದಕ್ಕ್ ಕೊಸೆ ಕೀಳ್ಸು! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂದು
Next post ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…