ಹೋಲಿಸದಿರೆಲೆ ಚೆಲುವ
ಇನ್ನೇತಕು ನನ್ನ ನಗುವ
ಶ್ರುತಿಮಾಡಿದ ವೀಣೆಯ ತಂತಿ
ಬೆಳದಿಂಗಳ ಮಲ್ಲಿಗೆ ಪಂಕ್ತಿ
ಪರಿಮಳ ಬೀರುವ ಸುರಪಾರಿಜಾತ
ಕಿಲ ಕಿಲ ನದಿ ದೈವ ಸಂಪ್ರೀತ
ಎನಬೇಡ ನಗು ನನ್ನ ತುಟಿಯಂಚಿನೊಳೆಂದು
ಎನಬೇಡ ನಗು ನನ್ನ ಕಡೆಗಣ್ಣಿನೊಳೆಂದು
ಎನಬೇಡ ನಗು ನನ್ನ ಭ್ರಕುಟಿಯೊಳೆಂದು
ಎನಬೇಡ ನಗು ನನ್ನ ಕೆನ್ನೆಯೊಳೆಂದು
ಎನಬೇಡ ನಗು ನನ್ನ ಗಲ್ಲದೊಳೆಂದು
ಎನಬೇಡ ನಗು ನನ್ನ ಭಂಗಿಯೊಳೆಂದು
ಎನಬೇಡ ನಗು ನನ್ನ ಭಾವದೊಳೆಂದು
ನನಗೊ ನಗೆ ಬರದು
ಬಂದರು ಅದು ಒಣ ನೆಲದಂತಿರುವುದು
ನಿನ್ನ ಪ್ರೀತಿಯ ಮಳೆಗದು ಕಾಯುವುದು
ನೀ ಸುರಿಯದಿದ್ದರೆ ಧರೆ ಉರಿವುದು
ಎನಬೇಡ ನಗುತಲಿರು ಚೆಲುವೆ ನೀನೆಂದು
ನಾ ನಕ್ಕರೆ ಧರೆ ಸ್ವರ್‍ಗವಾಗುವುದು ಎಂದು
*****