“ನಿಲ್ಲು ನಿಲ್ಲಯ್ಯ ರಾಜ ನಿಜಗುಣ ನಾ ಬಲ್ಲೆ
ಮಲ್ಲಿಗೆ ಸೂರಾಡಬಹುದೇನೋ || ನಿಲ್ಲಯ್ಯ ರಾಜಾ” || ೧ ||
ಠಾಕಠೀಕ ಜೋಕ “ನಾರೀ ಜೋರಲಿಂದ ಹೋಗುವಾಗ
ಕರಗ ಬಿದ್ದಿತೆ ನಾರೀ, ಹೌದಲ್ಲೇ ರಮಣೀ || ೨ ||
ಹೌದಲ್ಲೇ ರಮಣೀ? ಕರಗು ಬಿದ್ದಿ ನಾರೀ
ನೀ ನೀರೀಗೆ ಹೋಗುವಾಗೆ ನಾ ಬಂದೆ ನಿಲ್ಲೇ ಬಾಲೇ || ೩ ||
ಬೊಗರೀ ಕುಚದ ಹೆಣ್ಣೇ ಮಿಗರಿ ಮಾತಾಡಬ್ಯಾಡಾ”
“ವಗರಿನ ಮಾತ್ಯಾಕೇ?” ಹೌದಲ್ಲೇ ರಮಣೀ || ೪ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.