ಬರೆದವರು: Thomas Hardy / Tess of the d’Urbervilles
ಅವನು ಅತ್ತ ಕಡೆ ಹೋಗುತ್ತಿದ್ದ ಹಾಗೆಯೇ ಮಲ್ಲಿಯು ಒಳಗೆ ಬಂದಳು. ಅವಳ ಹಿಂದೆಯೇ ರಾಣಿಯೂ ಬಂದಳು. ನರಸಿಂಹಯ್ಯನು ಅವರಿಬ್ಬರೂ ಬಂದುದು ನೋಡಿ ದೂರಕ್ಕೆ ಸರಿದ ಮನೆನಾರ್ತೆ ನಂಜಪ್ಪ ನೊಡಕೆ ಹಿಂದಕ್ಕೆ ಸರಿದನು.
ನಾಯಕನಿಗೆ ನರಸಿಂಹಯ್ಯನ ಮೇಲೆ ತುಂಬಾ ಅಭಿಮಾನ. ಇಂಗ್ಲಿಷ್ ಮೇಷ್ಟ್ರುಯೆಂದು ಅವನಲ್ಲಿ ತುಂಬಾ ಸಲುಗೆ, ಅದರಿಂದ ಅವನನ್ನು ಹಾಸ್ಯಮಾಡುತ್ತಾ ” ನಂಜಪ್ಸನಂತೂ ಶಿಬ್ಬಂದಿಯವನು. ಅವನು ಮನೇಗೇ ಸೇರಿದವನಾದರೂ ಮರ್ಯಾದೆ ಅಂತ ದೂರ ಹೋದ. ನೀವೇಕೆ ಹೋಗಬೇಕು? ನೀವು ಮೇಷ್ಟ್ರು. ‘ವರ್ಣ ಮಾತ್ರಂ ಕಲಿಸಿದಾತಂ ಗುರು.’ ನೀವು ಗುರುಗಳು. ನಮ್ಮಗೆ ಇಂಗ್ಲಿಷ್ ಕಲಿಸಿ ದ್ದೀರಿ. ಇವರಿಬ್ಬರೂ ನಿಮ್ಮ ಕೈಲಿ ಸಂಸ್ಕೃತ ಕಲೀಬೇಕು” ಅಂತಿದಾರೆ. ನೀನೇಕೆ ಸಂಕೋಚ ಪಡಬೇಕು ?” ಎಂದ.
“ಇಲ್ಲ, ಸಾರ್. ಸಂಕೋಚ ನನ್ನ ಸ್ಪಭಾವ- ಯಾರೇ ಆಗಲಿ, ನನ್ನನ್ನು ಹತ್ತಿರಕ್ಕೆ ಕರೆಯೋವರೆಗೂ ಅವರ ಬಳಿಯೂ ಸುಳಿಯೋ ದಿಲ್ಲ ”
ಆಯ್ತು, ಮೇಸ್ಟ್ರೇ, ನಾಳೆ ಮದುವೆ ಮಾಡಿಕೊಂಡು ಸಂಸಾರ ಮಾಡೋವಾಗಲೂ ಹಿಂಗೇ ಇರ್ತೀರಾ?”
“ಇಲ್ಲ ಸಾರ್, ನಾನು ಮದುವೆಯೇ ಮಾಡಿಕೊಳ್ಳೋದಿಲ್ಲಾ !”
” ಅದೇನ್ರೀ ಹಂಗಂತೀರಿ!”
” ಹೌದು ಸಾರ್, ನನಗೆ ನಮ್ಮ ತಾಯಿ ಕಂಡರೆ ಬಹಳ ಭಕ್ತಿ ಸಾರ್. ಅದರಿಂದ, ನನಗೆ ಯಾವ ಜಗತು ಕಂಡರೂ ಅಲ್ಲಿ ನನಗೆ ನಮ್ಮ ತಾಯಿಯ ದರ್ಶನವೇ ಆಗುತ್ತದೆ ಸಾರ್! ಶಾಸ್ತ್ರವೂ ಹಾಗೇ ಹೇಳುತ್ತದೆ. ಹಾಗೇ, ಕೊನೆಯವರೆಗೂ, ಪ್ರತಿಯೊಬ್ಬ ಸ್ತ್ರೀಯನ್ನೂ ಮಾತೃಭಾವದಿಂದಲೇ ಕಾಣಬೇಕೆಂದಿರುವ ನನಗೆ ಮದುವೆಯಿಂದ ಆಗ ಬೇಕಾದುದೇನು?
“ಹಾಗಾದರೆ ನಿಮಗೆ ಮಕ್ಕಳು ಮರಿ ಆಗಬೇಕು ಅಂತ ಆಸೆ ಯಿಲ್ಲವಾ?”
ಈ ಸಾಧ್ಯವಾದರೆ ನಾನೂ ಬಿ.ಎ. ಮಾಡಿಕೊಂಡು ದೇಶಸೇವೆಗೆ ಈ ದೇಹವನ್ನು ಮೀಸಲು ಮಾಡುತ್ತೀನೆ. ಬ್ರಿಟಿಷರ ರಾಜ್ಯ ತಪ್ಪಿ ಸ್ವರಾಜ್ಯ ಬರುವುದು ಅಷ್ಟು ಸುಲಭವಲ್ಲ. ಆ “ದುಸ್ಸಾಧ್ಯವಾದ ಕಾರ್ಯ ಕ್ಕಾಗಿ ತಪಸ್ಸು ಮಾಡುವವರ ಗುಂಪಿಗೆ ಸೇರಿಕೊಂಡು ಜನ್ಮವನ್ನು ನೀಗುತ್ತೇನೆ. ಇಂಥಾ ನನಗೆ, ಸಂಸಾರ, ಮಕ್ಕಳು ಮರಿ ಇವೆಲ್ಲ ಬೇಕಾಗಿಲ್ಲ.”
ಒಂದು ವೇಳೆ ನಿಮ್ಮತಲೇಗೇ ಸ್ವರಾಜ್ಯ ಬಂತಪ್ಪ”
“ಆಗ ಹಿಮಾಲಯಕ್ಕೆ ತಪಸ್ಸಿಗೆ ಹೋಗುತ್ತೇನೆ. ಇಲ್ಲದಿದ್ದರೆ ಒಂದು ಶಾಲೆ ಕಟ್ಟಿಕೊಂಡು ಪಾಠ ಹೇಳುತ್ತಾ ಕೂತುಕೊಳ್ಳುತ್ತೇನೆ.”
“ಆ ಕೆಲಸ ಈಗಲೇ ಮಾಡಿ. ನಿಮಗೆ ಈಗ ಇಬ್ಬರು ಶಿಷ್ಯರು- ಇವರಿಬ್ಬರೂ ನಿಮಗೊಂದು ಶಾಲೆ ಕಟ್ಟಿಸಿಕೊಡುತಾರೆ. ಅದೂ ಅಲ್ಲದೆ ಬ್ರಿಟಿಷರು ಈ ಯುದ್ಧದಲ್ಲಿ ಗೆದ್ದರೆ ನಿಮಗೆ ಸ್ವರಾಜ್ಯ ಸಿಕ್ಕೇ ಸಿಕ್ತದಲ್ಲಾ ? ಇನ್ನು ತಪಸ್ಸೇಕೆ? ಸುಖವಾಗಿರಿ.”
“ಇಲ್ಲಾ ಸಾರ್, ಸುಖಪಡೋಕೆ ಹುಟ್ಟಿರೋರು ಕೆಲವರು. ಕಷ್ಟಪಡೋಕೇ ಹುಟ್ಟಿರೋರು ಕೆಲವರು. ಕಷ್ಪ ಕಷ್ಟ ಅಂತ ತಿಳಿದು ತಿಳಿದೂ ಅದನ್ನು ಒಪ್ಪಿಕೊಂಡು ಆ ಕಷ್ಟದ ಮಾರ್ಗ ಹಿಡಿಯೋದೆ ತಪಸ್ಸು. ಆದರಲ್ಲಿ ಇರೋ ಹಿತ ನನಗೆ ಇನ್ನು ಯಾವುದರಲ್ಲೂ ಇಲ್ಲ.”
“ಅಲ್ರೀ ನಿಮ್ಮ ತಪಸ್ಸು ಯಾಕೆ? ಸ್ವರಾಜ್ಯಕ್ಕೆ ಈ ಯುದ್ಧ ದಲ್ಲಿ ಬ್ರಿಟಿಷರು ಗೆದ್ದೇಗೆಲ್ತಾರೆ ಅಂತ ನೀವೇ ಹೇಳ್ತಿದ್ದೀರಿ. ಅವರು ನಾವು ಗೆದ್ದರೆ ಸ್ವರಾಜ್ಯ ಕೊಟ್ಟೇ ಕೊಡ್ತೀನಿ ಅಂತ ಹೇಳ್ತಾಲೇ ಇದ್ದಾರೆ. ಇನ್ನು ನಿಮ್ಮ ತಪಸ್ಸೇಕೆ ?”
“ನೋಡೀಸಾರ್, ತಾವು ಟೈಟಲ್ ಹೋಲ್ಡರ್, ತಮಗೆ ಬ್ರಿಟಿಷರಲ್ಲಿ ವಿಶ್ವಾಸವಿದೆ. ಅದು ಸರಿ. ಆದಕ್ಕೆ ಅವರು ಸ್ವರಾಜ್ಯ ಕೊಡೋ ವಿಚಾರದಲ್ಲಿ ನಮಗೆ ಅಷ್ಟು ಅಪನಂಬಿಕೆ ಹುಟ್ಟಿಸಿರೋದು ತಾನೇ ಏಕೆ ಬಲ್ಲಿರಾ? ಆ ಡೆಮಾಕ್ರಸಿ ಬಂದರೆ, ಮೆಜಾರಿಟಿ ಸರಕಾರ. ಮೆಜಾರಿಟಿ ಕಮ್ಯುನಿಟಿಗಳು ತಮಗೆ ಸ್ವರಾಜ್ಯ ಬರುತ್ತೆ ಅಂತ ಕೋ ಆಪರೇಟ್ ಮಾಡಲಿ ಅಂತ. ಈಗ ಒಂದು ಗಳಿಗೆ ಮುಂಚೆ ಪಟೇಲರು ಹಾರಾಡಿದರಲ್ಲ: ಅದೂ ಆ ನಂಬಿಕೆಯ ಫಲ. ನಾಳೆ ಡೆಮಾಕ್ರಸಿ ಬಂದರೆ, ಎಲ್ಲಾ ಹಾರುವರ ಪಾಲಾಗುತ್ತೆ ಅಂತ, ಇವೊತ್ತೇ ಅವರಿಗೆ ಬಾಯಿಗೆ ಬುಟ್ಟಿ ಕಟ್ಟುತ್ತೀನಿ ಅಂತ ಹಾರಾಡುತ್ತಿರೋದು. ಬ್ರಿಟಿಷರ ಒಡೆದು ಆಳು ನೀತಿಯ ವಿಷಫಲಗಳಲ್ಲಿ ಮೊದಲನೆಯದಿದು. ಉತ್ತರ ದಲ್ಲಿ ಹಿಂದೂ ಮಹಮ್ಮದೀಯರೆಂಬ ಭೇದ ತಂದಿಟ್ಟಿದ್ದಾರೆ ದಕ್ಷಿಣದಲ್ಲಿ ಬ್ರಾಹ್ಮಣ ಅಬ್ರಾಹ್ಮಣ ತಂದಿಟ್ಟಿದ್ದಾರೆ.”
” ಹಂಗಾದರೆ ಗೌಡ ಬ್ರಿಟಿಷರ ಸರ್ಕಾರದ ಕಡೆ ಅಂತೀರಾ?”
“ಗೌಡರಿಗೂ ಬ್ರಿಟಿಷರಿಗೂ ನೇರವಾಗಿ ಸಂಬಂಧವಿಲ್ಲ. ಆದರೆ ಅವರು ಹಸಿದ ಹೊಟ್ಟೆ ನೋಡಿ ಹಿಡಿ ಕಾಳು ಚೆಲ್ಲುವ ವಿದ್ಯೆ ಚೆನ್ನಾಗಿ ಬಲ್ಲರು. ಇರುವವರೆಗೂ ಊರನ್ನೆಲ್ಲಾ ಗೋಳು ಹುಯ್ದುಕೊಂಡು ಸತ್ತಮೇಲೂ ಊರು ಹಾಳಾಗಲಿ ಎಂದು ಏನೋ ಮಾಡಿದ ಶಾನುಭೋಗನಂಥವರು. ಈ ಬ್ರಿಟಿಷರು, ಹಾಗೆ ಬಿಟ್ಟು ಹೋಗುವ ಕಾಲ ಬಂದರೂ ಏನೋ ಅನರ್ಥ ಮಾಡಿಯೇ ಹೋದಾರು.”
“ನಮಗೇನೋ ನಿಮಗೆ ಬಂದಂಗೆ ಸಂದೇಹ ಬಂದಿಲ್ಲ. ಒಂದು ವೇಳೆ ನಿಮ್ಮ ಮಾತೇ ನಿಜ ಅನ್ನೋಣ. ಇರಲಿ. ನಮ್ಮ ಮಲ್ಲೀ ಅಂಥ ಹೆಣ್ಣು ತಂದು ಮದುವೆ ಮಾಡಿದರೆ ಆಗೇನು ಮಾಡ್ತೀರಿ?”
” ಮೊದಲನೆಯದ್ದು, ಮದುವೆಯಾಗೋದಿಲ್ಲ: ಎರಡನೆಯದು ಮಲ್ಲಮ್ಮಣ್ಣಿ ಅಂಥಾ ಸ್ತ್ರೀಯರು ನನ್ನ ಮೇಲೆ ಅಭಿಮಾನ ಮಾಡಿದರೆ, ಪೂಜೆಗೆ ಚಿನ್ನದ ವಿಗ್ರಹ ಸಿಕ್ಕಿದ ಹಾಗೆ. ಹೇಗೆ ಹೇಗೂ ನಾನು ಬ್ರಹ್ಮಚಾರಿ. ಆ ತಾಯಿಗೇ ಅಡ್ಡ ಬಿದ್ದು ‘ನಾನು ಬ್ರಹ್ಮಚಾರಿಯಾಗಿ ರುವಂತೆ ಅನುಗ್ರಹಿಸು ‘ ಎಂದು ಪ್ರಾರ್ಥನೆ ಮಾಡಿದ. ಅಷ್ಟೇ ! ರಾಮ ಕೃಷ್ಣರು ಮಾಡಲಿಲ್ಲವೆ ಹಾಗೆ?”
“ರಾಮಕೃಷ್ಣರಿಗೆ ಮದುವೆಯಾಗಿತ್ತು. ನೀವೂ ಹಾಗೇ ಮದುವೆ ಮಾಡಿಕೊಳ್ಳಿ.”
“ಮದುವೆಯಾಗದ ರಾಮಕೃಷ್ಣರು ಎಷ್ಟು ಜನ ಇಲ್ಲ?”
“ಏನೋಪ್ಪ. ನಾನಾಗಿದ್ದರೆ ನಿಮಷ್ಟು ಹಟ ಹಿಡೀತಿರಲಿಲ್ಲ. ಏನ್ರೀ ನೀವೇನಂತೀರಿ? ದೊಡ್ಡಮ್ಮನೋರು ಏನಂತಾರೆ ? ಚಿಕ್ಕಮ್ಮ ನೋರು ಏನಂತಾರೆ?”
ರಾಣಿಯು ನುಡಿದಳು: “ನಾವೂ ಮೇಷ್ಟ್ರನ್ನ ಒಂದು ವರ್ಷ ದಿಂದ ನೋಡ್ತಾ ಇದ್ದೀವಿ. ಅದರಲ್ಲೂ ಆನಂದಮ್ಮ ದಿನ ದಿನಾ ನೋಡ್ತಾರೆ ಅವರೂ ಆದೇ ಮಾತು ಹೇಳಿದರು. ಇವರು ಅಪರಂಜಿ ಭಂಗಾರ. ಅದರಲ್ಲಿ ಏನೂ ಸುಳ್ಳಿಲ್ಲ. ಏನೋ ಅವರ ಗತಿ ಹೆಂಗದೋ? ನಾನೇನು ಹೇಳೋದು ?”
” ತಾವೇನಂತೀರಿ ಚಿಕ್ಕಮ್ಮನೋರು ?”
“ಏನನ್ನಲಿ ಬುದ್ದಿ? ನನಗಂತೂ ಅವರ್ನ ಕಂಡಾಗಲೆಲ್ಲಾ ಪುರಾಣದಲ್ಲಿರೋ ಖುಷಿಗಳನ್ನ ಕಂಡಹಂಗಾಗ್ತದೆ. ಅವರ ಮರ್ಮ ನಾನೇನು ಬಲ್ಲೋ ?”
“ನಾ ಹೇಳಿದ ಮಾತೇ ಕೇಳಲಿಲ್ಲವಾ? ನಿನ್ನಂಥಾ ಹೆಣ್ಣೊಂದು ಗಂಟುಬಿತ್ತು ಅನ್ನು: ಆಗ ಇವರೇನು ಮಾಡ್ತಾರೆ ಅಂತೀನಿ?”
“ನಾನು ನಿಮ್ಮಂಗೆ ತಿಳಿದೋಳಲ್ಲ. ಆದರೂ ಬುದ್ಧಿ, ನೀರು ಬಿದ್ದರೆ ಕರಗಿ ಹೋಗೋ ಮಣ್ಣು ಹೆಂಟೆಯಲ್ಲ ಇದು. ನೀರಿಗೆ ಜಗ್ಗದೆ ಬಂಡೆ ಅನ್ನಿಸ್ತದೆ.”
” ಹಂಗಾದರೆ ಪರೀಕ್ಷೆ ಮಾಡಿದ್ದೀಯಾ ?” ನಾಯಕನು ನಗುತ್ತಾ ಕೇಳಿದನು.
ರಾಣಿಯು, “ಅಂಯ್, ಬುಡಿ, ಯಾವಾಗಲೂ ನಿಮ್ಮದು ಹಿಂಗೇ ಹಾಸ್ಯಮಾಡೋದು ” ಎಂದು ವಾಮವಾಗಿ ನುಡಿದಳು.
ಮಲ್ಲಿಯ ಮೊಕ ಕೆಂಪಾಗಿದ್ದರೂ ನಗುತ್ತ ಹೇಳಿದಳು: “ಇರಲಿ ಬುಡಿ, ಬುದ್ಧಿ. ಬುದ್ದಿಯೋರು ನಮ್ಮನ್ನಲ್ಲದೆ ಇನ್ನು ಯಾರನ್ನು ಹಾಸ್ಯ ಮಾಡಬೇಕು? ಬುದ್ಧಿ, ಮಾತಿಗೆ ಮಾತು ಕೊಟ್ಟಳು ಅನ್ನದಿದ್ದರೆ, ಹೇಳ್ತೇನೆ.”
“ಹೇಳು, ಹೇಳು, ಕೇಳೋವ,?
“ಮೀಸಲು ಹಾಲಿಗೇನು ಗೊತ್ತು ಕೊತ್ತಿ ಮುಸುಡಿ ಹೆಂಗದೆ ಅಂತ?”
ನರಸಿಂಹಯ್ಯನೂ ಜೊತೇಲೇ ಹೇಳಿದನು: “ಇದೂ ಕದ್ದು ಹಾಲು ಕುಡಿಯುವ ಕೊತ್ತಿಯೂ ಅಲ್ಲ.”
ನಾಯಕನು ಬಹು ಸಂತೋಷವಾಗಿ ನಕ್ಕನು: “ಮಲ್ಲಿ ನಿನ್ನ ಮಾತು ಒಪ್ಪೋ ಮಾತು ಒಪ್ಪಿಕೊಂಡೆ.”
ರಾಣಿಯು ಮಗ್ಗುಲಲ್ಲಿದ್ದ ಮಲ್ಲಿಯನ್ನು ಬರಸೆಳೆದು ಅಪ್ಪಿಕೊಂಡು ಮೆಚ್ಚಿಕೆಯಿಂದ ಕೈಹಿಸುಕಿದಳು.
ಮನೆವಾರ್ತೆ ನಂಜಪ್ಪನು ಮುಸಿ ಮುಸಿ ನಗುತ್ತಾ ಅತ್ತ ಕಡೆ ತಿರುಗಿದನು.
ನಾಯಕನು ಅದನ್ನು ಕಂಡು, “ನಂಜಪ್ಪಾ, ನೀನು ನಗುತಾ ಇದ್ದೀಯಲ್ಲ? ಗೌಡ ಹೊರಗೆ ಹೋದಾಗ ನಿಮ್ಮ ಚಿಕ್ಕಮ್ಮನೋರ ಮೊಕ ಕಣ್ಣು ಕಂಡೆಯಾ? ಉತ್ತರಹಳ್ಳಿ ಅಮ್ಮನಾಗಿ ಹೋಗಿಬಿಟ್ಟಿ ದ್ದರು. ಆ ರೌದ್ರ ಕಳೀಲಿ ಅಂತ ಕೊಂಚ ಹಿಂಗೆ ಆಟ ಹೂಡಿದೆ ಕಣಪ್ಪಾ !” ಎಂದನು.
ನಂಜಪ್ಪನು “ಸರಿ! ಬುದ್ದಿ” ಅಂದನು.
“ಹೂ! ಅದೇನು ಹೇಳಬೇಕೊ ಹೇಳೇಬಿಡು. ನಿನ್ನದೂ ಆಗಲಿ.”
“ಏನಿಲ್ಲ. ಊಟ ಆದಮೇಲೆ ಮೈಸೂರಿಗೆ ಹೊರಡೋದಿತ್ತು : ಇನ್ನೂ ಮೇಷ್ಟ್ರರಿಗೆ ಊಟ ಆಗಿಲ್ಲ ಅನ್ನೋವಾ ಅಂತಿದ್ದೆ.”
“ಬಿಡೋ! ಈ ಹಾರುವರ ಊಟಾ ಏನು? ಏಲೆ ಮುಂದೆ ಕುಂತು ಉಣ್ಣದಿದ್ದರೆ ಇಲ್ಲ: ಎರಡು ಹಣ್ಣು ಒಂದು ಬಟ್ಟಲು ಹಾಲು. ಆದರೆ ಮುಗೀತು” ಆಗಲಿ. ಹಂಗಂತಾ ಇವರೂಟಕ್ಕೆ ನಾವೇಕೆ ಚೆಕ್ಕರ್ ಹಾಕಬೇಕು ? ನಿನ್ನೆ ರಾತ್ರೆ ಹಗಲು ಊಟ ಚೆನ್ನಾಗಿತ್ತಾ ಮೇಷ್ಟ್ರೆ?”
“ಅಡಿಗೆ ಹೇಗಿದ್ದರೇನು ಸಾರ್! ಆ ತುಪ್ಪ, ಮೊಸರು ಆ ಎರಡೇ ಒಂದು ತೂಕ. ಅವರ ಮನೆಯಲ್ಲಿ ಅಡುಗೆ ಶ್ರದ್ಧಾ ಭಕ್ತಿಯಿಂದ ಮಾಡಿದ್ದರು. ಚೊಕ್ಕಟವಾಗಿತ್ತು. ಇನ್ನೇನುಬೇಕು ?”
” ನಮ್ಮ ಶಾನುಭೋಗರನ್ನ, ಕಳೀಬೇಡಿ ಒಳ್ಳೆ ಬ್ರಾಹ್ಮಣ. ಶಾಸ್ತ್ರಗೀಸ್ತ್ರ ಓದಲ್ಲ ನಿಮ್ಮ ಹಂಗೆ. ಆದರೂ ಒಂದು ದಿನ ದೇವರ ಪೂಜೆ ಬಿಡೋಕಿಲ್ಲ. ಬಹಳ ನಿಷ್ಠರು. ಈ ಗೌಡ ಇಷ್ಟು ಹಾರಾಡಿದ ನಲ್ಲ, ಅವನೂ ಕೂಡ ನಮ್ಮ ಶಾನುಭೋಗರನ್ನ ಕಂಡ್ರೆ ಎದ್ದು ಕ್ಳ್ರೆ ಮುಗಿಯೋದೆ !”
” ಯೋಗ್ಯತೆಯಿದ್ದರೆ ಗೌರವ ಇಲ್ಲದೆ ಹೋಗೋದೂ ಉಂಟೆ ? ಬೆಂಕಿಯನ್ನು ಬರಿಯ ಕಾಲಲ್ಲಿ ತುಳಿಯುವುದಕ್ಕೂ ಆದೀತೆ?”
” ಆಯಿತು. ನಮ್ಮನ್ನು ಗೆಲ್ಲಿಸಿದಿರಿ. ಒಂದು ವರ್ಷದೊಳಗಾಗಿ ಇಂಗ್ಲೀಷ್ ಕಲಿಸಿಕೊಟ್ಟು, ಇತರರು ಆಡುವುದು ಅರ್ಥವಾಗುವ ಹಂಗೆ ಮಾಡಿದಿರಿ. ನಮ್ಮ ಅಮ್ಮನೋರಿಗೂ ಹಂಗೆ ಸಂಸ್ಕೃತ ಕಲಿಸಿಬಿಡಿ.”
“ನಾವು ಬುದ್ಧಿಯೋರ ಜೊತೇಲಿ ಇಂಗ್ಲಿಷ್ ಆಡಬೇಡವಾ ಬುದ್ಧಿ ”
” ನೋಡವ್ವಾ, ನಾನು ಮುದುಕಿ ಆಗೋದೆ, ಏನಿದ್ದರೂ ಇನ್ನು ರಾಜ್ಯ ನಿನ್ನದು. ಅವರುಂಟು ನೀನುಂಟು.”
ಅಪ್ಪಣೆ ಆಗಲಿ ಬುದ್ಧಿ, ನಮಗೂ ಇಂಗ್ಲಿಷ್ ಕಲಿಸೋಹಂಗೆ ”
“ಆಗಬೋದು: ಇನ್ನೇನು?”
“ನೋಡಿ ಬುದ್ಧಿ ಬುದ್ಧಿಯೋರಿಗೆ ಇಂಗ್ಲಿಷ್ ಕಲಿಯೋಕೆ ಒಂದು ವರ್ಷ ಬೇಕಾಯ್ತು, ನಾನು ಆರೇತಿಂಗಳಲ್ಲಿ ಕಲೀದಿದ್ದರೆ ಮಲ್ಲೀ ಅನ್ನ ಬೇಡಿ. ಇನ್ನೇನಾದರೂ ಅನ್ನಿ”
” ನೀವು ಕಲಯೋ ಮಾತಾಡ್ತಾ ದ್ದೀರೆ ಹೊರತು, ಕಲಿಸೋರ ಗತಿಯೇನು ಅನ್ನೋ ಯೋಚನೆಯೇ ಇಲ್ಲವೋ? ”
” ಕುದುರೆಗೆ: ಹುರುಳಿ ಮೇಯೋದು ಗೊತ್ತು: ಇನ್ನೇನು ತಾನೇ ಅದಕ್ಕೆ ಯಾಕಬೇಕು?”
“ನಂಜಪ್ಪ, ಇಲ್ಲಿ ಬಾ ಖರ್ಚುಹಾಕಿ ಒಂದು ಎರಡು ಸಾವಿರ ತತ್ತಾ ! ಸಾಕಾ!”
ರಾಣಿಯು “ತಮ್ಮ ಚಿತ್ತ” ಎಂದು ಸುಮ್ಮನಾದಳು.
ಮಲ್ಲಿಯು “ಬುದ್ದಿಯೋರ ಪಾದದಲ್ಲಿ ನಾನು ಮಾತಾಡ ಬೋದಾ !” ಎಂದು ವಿನಯದಿಂದ ಕೇಳಿದಳು.
ಆ ವಿನಯಕ್ಕೆ ಮೆಚ್ಚಿ ನಾಯಕನು ತಾನು ಮಾಡಬೇಕಾದ ಶೃಂಗಾರೋಪಚಾರಗಳನ್ನೈಲ್ಲ ಕಣ್ಣಿಂದಲೇ ಮಾಡುತ್ತ “ಅಮ್ಮನೋರ ಅಪ್ಪಣೆ ಆಗಬೋದು? ಎಂದನು.
“ಬುದ್ಧಿ, ತಾವು ತಾಫೆಯೋರು ಬಂದರೆ ಒಂದು ಸಾವಿರ ಕೊಡು ತೀರಿ. ಸಂಗೀತಗಾರರು ಬಂದರೆ ದಿನಕ್ಕೊಂದು ಸಾವಿರ ಕೊಡುತೀರಿ ನಮ್ಮ ಮೇಷ್ಟ್ರ ಕೈಲಿ ಒಂದು ವರ್ಷ ದುಡಿಸಿಕೊಂಡು ಎರಡು ಸಾವಿರ ರೂಪಾಯೇನ ಕೊಡೋದು ?”
“ಎಲ್ಲಾ, ಹೆಣ್ಣೆ, ಕೊಟ್ಟೆಯಲ್ಲ ಚಕ್ಕರ್ ? ಎಷ್ಟು ಕೊಡಲಿ ಅದನ್ನಾದರೂ ಹೇಳು.”
” ಕೈತುಂಬಾ ಕೊಡಿ.”
ನಾಯಕನೂ ರಾಣಿಯೂ ಒಬ್ಬರನ್ನೊಬ್ಬರು ನೋಡಿದರು ? ಇಬ್ಬರ ದೃಷ್ಟಿಯೂ ಮಾತನಾಡಿಕೊಂಡಂತೆ ಆಯಿತು: ನಾಯಕನು ಸಂತೋಷ ತಡೆಯಲಾರದೆ “ಇದೆಲ್ಲೋ ದೊರೆಗಳ ಮನೇಲೇಹುಟ್ಟೋ ಹೆಣ್ಣುಕಣೋ
” ಎಂದನು.
ಮಲ್ಲಿಯ ಮೆಚ್ಚಿನ ಕಾಣಿಕೆಯನ್ನು ಒಪ್ಪಿಕೊಂಡ ಮಹಾರಾಣಿ ಯಂತೆ ಮೆಲ್ಲಗೆ ನಗುತ್ತಾ “ಅಲ್ಲ, ಅಲ್ಲ, ದೊರೆಗಳ ದೊರೆ ಕೈಹಿಡಿಯೋ ಭಾಗ್ಯ ಪಡೆದ ಹೆಣ್ಣು!” ಎಂದು ಕೈ ಮುಗಿದಳು.
ನಂಜಪ್ಪನಿಗೆ ಮತ್ತೆ ಅಪ್ಪಣೆಯಾಯಿತು : “ಚಿಕ್ಕಮ್ಮನೋರ ಲೆಕ್ಕ ಅಂತ ಐದುಸಾವಿರ ಖರ್ಚುಹಾಕಿ ತತ್ತಾಪ್ಪಾ! ಇನ್ನಾದರೂ ಈಗ ಚಿಕ್ಕಮ್ಮನೋರ ಮನಸ್ಸಿಗೆ ಒಪ್ಪಿತೋ ?” ಮಲ್ಲಿಯು ತಲೆದೂ ಗಿದಳು ಪೂಜೆಗೆ ಒಲಿದು ಪ್ರಸನ್ನಳಾದ ದೇವಿಯಂತೆ.
ನರಸಿಂಹಯ್ಯನು ಕೈಮುಗಿದುಕೊಂಡು “ನಾಯಕರೇ, ನನಗೆ ಅಷ್ಟು ಹಣಬೇಕಿಲ್ಲ. ತಮ್ಮಲ್ಲಿರಲಿ. ಬೇಕಾದಾಗ ತೆಗೆದುಕೊಳ್ಳು ತ್ತೇನೆ ಎಂದು ಯಾಚಕನಂತೆ ಪ್ರಾರ್ಥಿಸಿದನು.
ನಾಯಕನು ರೇಗಿದವನಂತೆ ಮೊಕ ಸಿಂಡರಿಸಿಕೊಂಡು ಗದರಿಸಿ ಕೊಳ್ಳುವನಂತೆ ಹೇಳಿದನು ; “ಎಲ್ಲಿ ಹಾರುವಯ್ಯ ಗಂಟುಬಿದ್ದ : ಮದುವೆ ಅಂದರೆ ಬೇಡ. ಹಣ ತಕೋ ಅಂದರೆ ಬೇಡ. ನಾನಿನ್ನೇನು ಕೊಟ್ಟು ನಿನ್ನಋಣ ತೀರಿಸೋವಾ? ಸುಮ್ಮನೆ ತಕೊಂಡುಹೋಗಿ ಸೇವಿಂಗ್ಸ್ ನಲ್ಲಿ ಹಾಕಿರಿ. ಇರಲಿ ಯಾವ ಕಾಲಕ್ಕೆ ಹೆಂಗೋ? ಲಕ್ಷ್ಮೀ ಬಂದರೆ ಬಿಡಬಾರದು.”
ನರಸಿಂಹಯ್ಯನಿಗೆ ಪ್ರತಿ ಹೇಳಬೇಕೆಂದು ಇಚ್ಛೆಯಿತ್ತು. ಆದರೆ ಪ್ರತಿಯಾಡಲಾಗಲಿಲ್ಲ.
*****