ಹರ್‍ಷಾಲಿ ಮಲ್ಹೋತ್ರಾ

ಹರ್‍ಷಾಲಿ ಮಲ್ಹೋತ್ರಾ

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ್‌ಸ್ಟಾರ್‌ ಹರ್‍ಷಾಲಿ ಮಲ್ಹೋತ್ರಾ ತೀರಾ ಗಮನ ಸೆಳೆಯುವ ಈ ಪಾತ್ರಧಾರಿಯಾಗಿ ನಮ್ಮ ಹೃದಯ ಮನ ಗೆಲ್ಲುವಳು.

ಸಿನಿಮಾದಲ್ಲಿ ಈಕೆಯದೇ ಮುಖ್ಯ ಪಾತ್ರ. ನಮ್ಮ ನೆರೆಯ ರಾಷ್ಟ್ರ ಸದಾ ಕಾಲು ಕೆದರಿ ನಮ್ಮೊಂದಿಗೆ ಜಗಳ ತೆಗೆಯುವ, ನಿತ್ಯ ಸುದ್ದಿಯಲ್ಲಿರುವ, ಪಾಕಿಸ್ತಾನದಿಂದ ತಪ್ಪಿಸಿಕೊಂಡು ಬರುವ ಹರ್‍ಷಾಲಿ ಮುನ್ನಿ ಎಂಬ ಹೆಸರಿನ ಈ ಮೂಕಿ ಹುಡುಗಿ ಈ ಪುಟ್ಟ ಬಾಲೆ ಬಲು ದಿಟ್ಟತನದಲಿ ಕಾಣಿಸಿಕೊಂಡು ನಮ್ಮ ಕಣ್ಣುಗಳನ್ನು ಸದಾ ಒದ್ದೆ ಮಾಡುವ ಮೂಲಕ ತನ್ನತ್ತ ಸೂರೆಗೊಂಡಿದ್ದಾಳೆ. ಸಿನಿಮಾ ಮಾಡಿದರೆ ಹೀಗೆ ಮಾಡಬೇಕೆಂದು ಅನಿಸುವುದರ ಜೊತೆಜೊತೆಗೆ ನಿರ್‍ದೇಶಕ ಕಬೀರ್ ಖಾನ್ ಮನ ಮುಟ್ಟುವಂತೆ ಹೇಳುವುದನ್ನು ಹೇಳಿಸುತ್ತಾನೆ.

ಈ ಪುಟಾಣಿ ಕಂದನನ್ನು ತನ್ನ ಮನೆಗೆ ಸೇರಿಸುವ ಜವಾಬ್ದಾರಿ ಈ ನಮ್ಮ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಸೇರಿದ್ದು… ಇದು ಭಾರೀ ಭಾರೀ ಗದ್ದಲ ಕುತೂಲಗಳಿಂದ ತಿರುವುಗಳಿಂದ ಸಾಗುವ ಸನ್ನಿವೇಶ ಮೈನೆವರೇಳೆಸುತ್ತದೆ. ಭಯಂಕರ ಉಸಿರುಗಟ್ಟಿಸಿ ಸಾಕಷ್ಟು ಸನ್ನಿವೇಶಗಳಲ್ಲಿ ಹರ್‍ಷಾಲಿ ಮಲ್ಹೋತ್ರಾ ಮಿಂಚಿದ್ದಾಳೆ…! ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ನಗಿಸಿದ್ದಾರೆ ಹೀಗಾಗಿ ಇವಳದೇ ಮುಖ್ಯ ಪಾತ್ರ, ಇದನ್ನು ಬಲು ಲವಲವಿಕೆಯಿಂದ ನಿರ್‍ವಹಿಸಿದ್ದಾಳೆ.

ಸಿನಿಮಾ ನೋಡಿದ ನಾವೆಲ್ಲರೂ “ಈ ಶತಮಾನದ ಹೊಸ ಶೋಧ”, “ಅದ್ಭುತ ಪ್ರತಿಭಾ ಬಾಲ ನಟಿ” ಎಂದು ಹುಬ್ಬೇರಿಸಿ ಹೊರಗೆ ಬಂದಿದ್ದುಂಟು! ಮಾನವೀಯ ಅಂತಃಕರಣದ ಮುಂದೆ ಜಾತಿ-ಮತ, ಕುಲ ಭೇದ ಗಡಿ ಕಾಯ್ದೆಗಳು ಪುಡಿ ಪುಡಿಯಾಗಿ ಜನರ ಕಂಬನಿ ಅಲ್ಲಿ ಹರಿಯುವುದು!

ಸಿನಿಮಾದಲ್ಲಿ ಮೂಕ ಪಾಕಿಸ್ತಾನಿ ಹೊರಗಡೆಯೇನು ಸಿನಿಮಾ ಸೆಟ್‌ನಲ್ಲಿ ಎಲ್ಲರ ಬಳಿ ಹರಳು ಹುರಿದಂತೆ ಮಾತನಾಡಿ ಒಳ್ಳೆ ಪುಟಾಣಿ ಹುಡುಗಿ ಎನಿಸಿಕೊಂಡಿದ್ದಾಳೆಂದರೆ ನಂಬಲು ಸಾಧ್ಯವಾಗದಂತೆ ನಟಿಸಿ ಅಭಿನಯ ಚತುರೆಯೆನಿಸಿದ್ದಾಳೆ.

“ನನಗೆ ನಟಿಸುವುದು ಡ್ಯಾನ್ಸ್ ಮಾಡುವುದು ಭಲೇ ಖುಷಿ ಖುಷಿ… ಸಲ್ಮಾನ್ ಖಾನ್ ಥರಾ ಸೂಪರ್ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಿರುವೆ!” ಎಂದು ಎಲ್ಲರ ಬಳಿ ಈ ಪುಟಾಣಿ ಈಗಾಗಲೇ ಸಾರಿ ಕೊಂಡಿದ್ದಾಳೆ. ಕನಸು ನೆನಸಾಗುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಈ ಪುಟಾಣಿಗೆ ಕಷ್ಟವಾಗಲಾರದೆಂದು ಎಲ್ಲರ ಲೆಕ್ಕಾ…

ಇನ್ನು ಸಲ್ಮಾನ್ ಖಾನ್ ಹತ್ತಿರನೇ ನೇರವಾಗಿ ಮುಖಾಮುಖಿ, “ನೀ ನನ್ನನ್ನು ನಿನ್ನ ಥರಾ ಸೂಪರ್ ಸ್ಟಾರ್ ಮಾಡ್ತೀಯಾ?” ಎಂದು ಕೇಳಿಯೇ ಬಿಟ್ಟಿದ್ದಾಳೆ. ಮನಸ್ಸಿನಂತೆ ಮಹದೇವಿಯಲ್ಲವೇ?

ಈಗಾಗಲೇ ಈ ಪುಟಾಣಿ ಎರಡು ಹಿಂದಿ ಸಿನಿಮಾಗಳಲ್ಲಿ, ಟೀವಿ ಸೀರಿಯಲ್‌ಗಳಲ್ಲಿ- ಜಾಹೀರಾತು ಹಾಗೂ ಇತರೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ್ದಾಳೆ. ಒಂದು ಕಡೆ ಶಿಕ್ಷಣ, ಇನ್ನೊಂದು ಕಡೆ ನಟನೆಯನ್ನು ಸರಿಸಮನಾಗಿ, ಸರಿಯಾಗಿಸಿಕೊಂಡು ಈಗಾಗಲೇ ಬೇಡಿಕೆ ಬಂದಿರುವ ಸಿನಿಮಾಗಳಲ್ಲಿ ಮಾತ್ರ ನಟಿಸುವೆ ಎನ್ನುವ ಪುಟಾಣಿ ಹರ್‍ಷಾಲಿ ಮಲ್ಹೋತ್ರಾಳಿಗೆ ನಾವು ನೀವು ಎಲ್ಲರೂ ಆಲ್ ದಿ ಬೆಸ್ಟ್ ಹೇಳುತ್ತಾ… ತನ್ನೆಲ್ಲ ಕನಸು ಕೈಗೂಡಲಿ ಎಂದು ಶುಭ ಹಾರೈಸೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆಗೆ
Next post ಪರದೆಯ ಹಿಂದೆ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…