ಬರೆದವರು: Thomas Hardy / Tess of the d’Urbervilles
ನಾಯಕನು ವಿಚಿತ್ರವಾದ ಮನೋಭಾವದಲ್ಲಿದ್ದಾನೆ. ಅವನಿಗೆ ಆಶ್ಚರ್ಯವಾಗಿದೆ. ಐದಾರುವರ್ಷದ ಹೆಣ್ಣು ಲೋಕದ ದೃಷ್ಟಿಯಲ್ಲಿ ಮಗು, ತನ್ನ ದೃಷ್ಟಿಯಲ್ಲಿ ಬೆಳೆದು. ಬಂದ ಹೆಣ್ಣಿಗಿಂತಲೂ ಬಲವಾಗಿ ಭಾವಗ್ರಾಹಿಣಿ. ರಾಮಾಯಣದಲ್ಲಿ ಬರುವ ಛಾಯಾಗ್ರಾಹಿಯೇ ಮಲ್ಲಿಯಾಗಿ ಬಂದಿದ್ದಾಳೋ, ಎನ್ನಿಸುವಂತಿದೆ. ಅವನೂ ಅಲ್ಲಿ ಇಲ್ಲಿ ಕಾಮಶಾಂತಿಗೆಂದು ಹೋಗಿ ಬಂದ. ದೇಹದ ಕಾಮಶಾಂತಿ ಯಾದರೂ, ಮನಸ್ಸಿನ ಕಾಮಕ್ಕೆ ಪುಟಿವಿಕ್ಕುವಂತಿದೆ. ಅವನಿಗೇ ನಗು. ಸಾವಿರ ಕುದುರೆ ಸರದಾರ ಮನೆ ಹೆಂಡತಿ ಕಾಸ್ತಾರನೆಂದು ಗಾದೆ. ಹಾಗೆ ಸಾವಿರ ಯುದ್ಧದಲ್ಲಿ ಗೆದ್ದು ಬಂದ ವೀರ, ಕಂದಮ್ಮನ ಮುಂದೆ ಮುಗ್ಗರಿಸಿದ್ದಾನೆ ಎಂದರೆ ನಿಡಕ್ಕೆ “ಇತರರು ಇರಲಿ ನೇ ನಂಬುವುದು ಹೇಗೆ 1 “ಪ ವನು ನಿತ್ಯವೂ ಒಂದು ಹೆಡೆ ಎಕ ಸ್ನಾನ ಮಾಡುಎನನು ಇದು ಎರಡ; ಹಾಜಿ ನೀರು ಸ್ನಾನ ಮೂಡಿದ್ದಾ ನೆ, ಶಿವಪೂಜೆ ತಾನೇ ಮಾಡಿ ಬೇಕಾದ ಹಾಗೆ ಪತ್ರೆ ಹೂವು ಗಂಧ ಎಲ್ಲಾ ಒಪ್ಪಿಸಿದ್ದಾನೆ ನೆ. “ಕಾಮಾರಿವೇವ ಹಾಸನ ಕಳೆದು ಮನಸ ನಿರ್ಮಲ ಮಾಡಿ ಕಾಸಾತೋ ಕಾಲಶಾಲ? ಏಂದು. ಹಾಡಿ ಆರತಿಯನ್ನು ಬೆಳಗಿದ್ದಾನೆ ಆದರೂ ತಿಳಿನೀರಿನಲ್ಲಿ ಬಿದ್ದ ಹೊಸ ಕಾಸು ತಳದಲ್ಲಿದ್ದರೂ ಕಾಣಿಸುವಂತೆ ಮಲ್ಲಿಯ ಮೇಲಣ ಮೋಹೆ ಒಳಕ್ಕೆ ಇಳಿಯುತ್ತಿರುವುದು ಅವನಿಗೆ ಕಾಣಿಸುತ್ತಿದೆ. ಪೂಜೆ ಮಾಡಿ ಕೊಂಡು ಚಿನ್ನದ ಹೊವು ಹಾಕಿದ ಬೆಳ್ಳಿ ಯೆ ಮಣೆಯ ಮೇಲೆ ಕುಳಿತು, ತುಪ್ಪದಲ್ಲಿ ಚಟಾಕು ಕಡುಬು ಮೆತ್ತ, “ಮಾವಿನ ಓಟಿ ನೆಟ್ಟು ನಿಷ ತೋರಿಸುವ ದೊಂಬರಂತೆ, ಯಾರಾದರೂ ಮಲ್ಲಿಯನ್ನು ಹೆಣ್ಣು ಮಾಡಿಕೊಟ್ಟರೆ ಒಂದು ಲಕ್ಷ ರೂಪಾಯಿ ಯಾದರೂ ಕೊಟ್ಟೀನಲ್ಲ !? ಎಂದು ಯೋಚಿಸುತ್ತಿದ್ದಾರೆ ನೆ. ಆ ಯೋಚನೆಯ ಪ್ರಭಾವವೇ ಏನೋ ಮಲ್ಲಿಗೂ ಮಲ್ಲಣ್ಣನಿಗೂ ನಾಯಕನ ಜೊತೆಯಲ್ಲಿ ನಾಷ್ಠಾಕ್ಕೆ ಕರೆಬಂದಿತ್ತು.
ಮಲ್ಲಿ ಏನೂ ಅರಿಯದೆ ಒಳಕ್ಕೆ ಹೋದಳು. ನಾಯಕನು ಕರೆಯುತ್ತಲೂ ಹೋಗಿ ಅವನ ಮುಗ್ಗುಲಲ್ಲಿ ಕುಳಿತಳು. ಮಲ್ಲಣ್ಣ ಮಾತ್ರ, ಕುಳಿತುಕೊಳ್ಳಲಾರದೇ ನಿಂತೇ ಇದ್ದ. “ತಮ್ಮದಾಗಲಿ ಬುದ್ಧಿ ; ಪಾದ” ಎಂದು ಕೊನೆಯನವರಿಗೂ ನಿಂತೇ ಇದ್ದ. ಕೊನೆಗೆ ನಾಯಕನು “ಮಲ್ಲಿ, ನಿಮ್ಮಪ್ಪನಿಗೆ ನೀನಾದರೂ ಹೇಳು ” ಎಂದ. ಅವಳೂ ಹೇಳಿದಳು. ಆದರೂ ಮಲ್ಲಣ್ಣ ಕುಳಿತುಕೊಳ್ಳಲಿಲ್ಲ, ನಾಯಕನ ಉಪಾಹಾರವಾದ ಮೇಲೆ, ಅವನೇ ಎದ್ದು ಬಂದು ಭುಜ ಹಿಡಿದು ಕುಳ್ಳಿರಿಸಿ, ತಾನೇ ತನಗೆ ಕೊಡುವಂತೆ ತುಪ್ಪದಲ್ಲಿ ಮುಳುಗಿದ ಕಡುಬು ತರಿಸಿಕೊಟ್ಟ. ಅಲ್ಲಿಗೆ ಮಲ್ಲಣ್ಣ ಸೋತ. ಅವನ ನಾಲಗೆ ಮೊದಲ ಹಾಗೆ ನುಡಿಯಿತು. “ಬುದ್ಧಿ, ಇದು ಕಡುಬಿಗೆ ತುಪ್ಪ ಅಲ್ಲ: ತುಪ್ಪಕ್ಕೆ ಕಡುಬು? ಅಂದೇ ಬಿಟ್ಟ. ನಾಯಕನು ನಗುತ್ತಾ ” ಏನೋ ಶಿವ ಕೊಟ್ಟದ್ದು!” ಅಂದ. ಮಲ್ಲಣ್ಣನಿಗೆ ಗಾಬರಿಯಾಗಿ ಕಡುಬು ಗಂಟಲಿನಲ್ಲಿ ಸಿಕ್ಕಿಕೊಳ್ಳಬೇಕಾಗಿತ್ತು. ದೇವರ ದಯ. ತುಪ್ಪ ಹೆಚ್ಚಾಗಿದ್ದು ಅದು ನುಸುಳಿ ಕೊಂಡು ಒಳಕ್ಕೆ ಇಳಿದು ಬಿಟ್ಟಿತು.
ನಾಯಕನು ಈಚೆಗೆ ಬರುವ ವೇಳಿಗೆ ಗುಡಾರದ ಬಾಗಿಲಲ್ಲಿ ಹಕೀಂ ಬಂದು ಕಾಣಿಸಿಕೊಂಡ. ನಾಯಕನು ದಿರಸು ಒಪ್ಪಿಸಿಕೊಂಡು ಬಂದ. ಮಂಚಕ್ಕೆ ಅಡ್ಡವಾಗಿ ಮರದ ಅಡ್ಡತೆರೆ, ಅದರಿಂದೀಚೆಗೆ ಒಂದೆರಡು -ಸೋಫಾಗಳು. ಒಂದು ಟೇಬಲ್. ಅಲ್ಲಿಗೆ ನಾಯಕನು ಬಂದು ಕುಳಿತುಕೊಂಡ. ಹಕೀಂ ದಾರಿ ಬಿಡುತ್ತ ದೊಡ್ಡ ಸಾಹೇಬರು ಬರುತಾ ಅವರೆ ಎಂದು ನಿಗರಿ ನಿಂತುಕೊಂಡು ಸಲಾಂ ಹೊಡೆದ.
ನಾಯಕನು ಎದ್ದುಬಂದು ದೊಡ್ಡ ಸಾಹೇಬರನ್ನು ‘ಬರಬೇಕು’ ಅಂತ ಒಳಕ್ಕೆ ಕರೆದುಕೊಂಡು ಹೋದ. ಅವರನ್ನು ಕೂರಿಸಿ ತಾನು ಕೈಮುಗಿದುಕೊಂಡು ನಿಂತುಕೊಂಡು “ಪಾದ ಇಲ್ಲೀವರೆಗೂ ಬೆಳೀತು ನಮ್ಮ ಪುಣ್ಯ” ಎಂದ.
ಸಾಹೇಬನೂ “ಕೂತುಕೊಳ್ಳಿ ನಾಯಕಕ್ಕೆ ನನಗೆ ಗೊತ್ತು ನೀವು ನಾವು ಪಟೇಲರು ಅನ್ನುತ್ತೀರಿ ಅಂತ. ಆದರೆ ಇಲ್ಲಿ ಚಕ್ರವರ್ತಿ ಗಳ ಮಕ್ಕಳು ಬಂದಿರೋವಾಗ ಮಹಾರಾಜರೇ ಪಟೇಲರಾಗಿದ್ದಾರೆ. ನಮ್ಮದೇನು? ಬನ್ನಿ. ಕುಳಿತುಕೊಳ್ಳಿ. ನಾಳೆಯದಿನ ನಿಮ್ಮ ಪ್ರತಾಪ ನೋಡಿ. ಮಹಾರಾಜರು ಹೇಳಿಕಳುಹಿಸಿದ್ದಾರೆ. ರಾಜಕುಮಾರ ಮರೆಯೋಕೆ ಆಗಬಾರದು, ಅಂತಹ ನೋಟ ತೋರಿಸಬೇಕು ಅಂತ ಅವರಾಶೆ. ಮೈಸೂರಿನ ಮಾನ ಕಾಪಾಡೋದು ತಮ್ಮ ಕೈಯಲ್ಲಿದೆ ಅಂತ ಅಪ್ಪಣೆಯಾಗಿದೆ. ಅದರಿಂದ ಎರಡು ಹಂದಿ ಬೇಡಿ. ಒಂದು ಹಂದಿ ಸಾಕು ಅಂತ ಹುಜೂರು ಅಪ್ಪಣೆ. ಅದನ್ನೇ ಈ ಕೂಡಲೇ ನೀವೇ ತಿಳಿಸಿ ಬರಬೇಕು ಅಂತ ಅಪ್ಪಣೆಯಾಯಿತು. ನಾನೇ ಕುದು ರೆಯಮೇಲೆ ಬಂದೆ. ”
ನಾಯಕನು ಅವರ ಮಾತಿಗೆ ಉತ್ತರವಾಗಿ ನಕ್ಕು ಬಿಟ್ಟು, ಹೇಳಿದ ‘ ಬುದ್ಧಿಯವರು ಕೋಪಮಾಡಿಕೋಬಾರದು. ಕೊಂಚ ಈ ಕೈ ನೋಡಿ ‘ ಅಂದು ತೋಳನ್ನು ಚಾಚಿದೆ. ಮುಟ್ಟಿನೋಡಿದರೆ, ಆ ದಪ್ಪ ತೋಳಿನ ಮಾಂಸಖಂಡಗಳೆಲ್ಲ ರೇಶಿಮೆಯಿಂದ ಆದ ಹಾಗೆ ರೇಶಿಮೆಯ ಹಗಗಳನ್ನು ಬಿಗಿದು ಕಟ್ಟಿದಂತೆ ಇವೆ. ಸಾಹೇಬನಿಗೆ ಈ ಮೃದುವಾದ ತೋಳು ಭಲ್ಲೆಯ ಎತ್ತಿ ಹೊಡೆಯಬಲ್ಲುದೆ ಎನ್ನಿಸಿತು. ಅದು ನಾಯ ಕನಿಗೆ ಅರ್ಥವಾಗಿರಬೇಕು. ಕೂಡಲೇ ಬುದ್ದಿ ಈಗ ನೋಡಿ ಎಂದು ಮುಷ್ಟಿಕಟ್ಟಿ ಕೈ ಥಟ್ಟನೆ ನೀಡಿದ. ತೋಳು ಸೆಟೆದುಕೊಂಡು, ಕಬ್ಬಿಣದ ಅಲ್ಲ ಉಕ್ಕಿನ ಕೊಂತವಾಗಿ ಚಾಚಿಕೊಂಡಿತ್ತು. ಸಾಹೇಬರು ಮುಷ್ಟಿ ಕಟ್ಟಿ ಹೊಡೆದರು. ಅವರ ಮುಷ್ಟಿಗೆ ನೋವಾಯಿತು.
“ಇನ್ನಾದರೂ ನಂಬಿಕೆಯೇ? ” ಎಂದ ನಾಯಕ.
ಸಾಹೇಬರು “ಹುಜೂರು ಅಪ್ಪಣೆ ನಾಯಕರೆ?” ಎಂದು ಕೇಳಿಕೊಳ್ಳುವ ದನಿಯಲ್ಲಿ ಹೇಳಿದರು.
ನಾಯಕನು “ಬುದ್ಧಿ, ಹೋಗಿ ಹುಜೂರರಲ್ಲಿ ಹೇಳಿ. ಎರಡು. ಹಂದಿಯಲ್ಲ ಮೂರು ಹಂದಿ ಬಿಡಿಸಬೇಕು ಅಂತ – ಮೊದಲು ಹಂದಿಯ ಬೇಟೆ ಭಲ್ಯದಿಂದ, ಕುದುರೆಯ ಮೇಲೆ ಕುಂತು. ಆಮೇಲೆ, ಕುದುರೆಯ ಮೇಲೆ ಕುಂತು, ಕತ್ತಿಯಲ್ಲಿ ಹಂದಿ ಕಡಿಯೋದು. ಆಮೇಲೆ ನೆಲದ ಮೇಲೆ ನಿಂತು ಹಂದಿ ರೇಗಿಸಿ ಯುದ್ಧ. ಯಾವುದರಲ್ಲಾದರೂ ಸೋತರೆ ತಾವಲ್ಲ ನಮ್ಮ ಹಕೀಂ ಕೈಗೆ ಬಂದೂಕು ಕೊಟ್ಟಿರೋದು, ಅವನು ನನ್ನ ಗುಂಡಲ್ಲಿ ಹೊಡೆದು ಬಿಡೋದು. ಆಂತ ಹುಜೂರಿಗೆ ಹೇಳಿ ಹೋಗಿ.”
ಈ ವೀರಾಲಾಸ ಕೇಳಿ ಹಕೀಂ ಬಾಗಿಲಿಗೆ ಬಂದಿದ್ದ. ಅವನಿಗೆ ರಕ್ತ ಬಿಸಿಯಾಯಿತು. ತಾನು ಎಲ್ಲಿದ್ದೀನಿ ಏನು ಎಂಬುದೆಲ್ಲಾ ಮರೆತು ಹೋಯಿತು. ಒಳಕ್ಕೆ ನುಗ್ಗಿಯೇ ಬಂದು ಬಿಟ್ಟ. ಸಾಹೇಬರ ಕಾಲು ಹಿಡಿದುಕೊಂಡು “ಖಾವಂದರಂಥಾ ಶೂರ ಇಲ್ಲ ಖಾವಂದ್, ಹುಜೂ ರಿಗೆ ಹೇಳಬೇಕು. ನಮ್ಮ ಜನ ಎಂಥಾ ದಿಲ್ಗಾರರು ಅನ್ನೋದು ಈ ಬೆಳೀ ಜನದ ಮನಸ್ಸಿಗೆ ಬರಬೇಕು ಖಾವಂದ್. ನಮ್ಮ ಖಾವಂದ್ ಹೇಳಿರೋದು ಬಾಳ ಬಾಳ ನಿಜ. ಇಷ್ಟೂ ಸುಳ್ಳಿಲ್ಲ… ” ಎಂದು ಏನೇನೋ ಹೇಳಿಬಿಟ್ಟ. ಸಾಹೇಬರು ಅವನ ಸ್ವಾಮಿಭಕ್ತಿಯನ್ನು ಗೌರವಿಸುತ್ತ ಸಣ್ಣ ನಗುನಕ್ಕು ” ಮಹಾರಾಜರಿಗೆ ತಮ್ಮ ಪ್ರತಾಪ ಇಷ್ಟು ಭಾರಿ ಅಂತ ತಿಳೀದು ಹೋಗಿ ಹೇಳುತ್ತೇನೆ : ಒಪ್ಪಿಸುತ್ತೇನೆ? ಎಂದು ನಾಯಕನ ಕೈ ತಟ್ಟಿದರು.
ನಾಯಕನು ಸಾಹೇಬನನ್ನು ಕುಳ್ಳಿರಿಸಿದರು : ಅದು ಯಾವಾಗ ಯಾರಿಗೆ ಹೇಳಿದರೋ? ಒಂದು ಬಟ್ಟಲು ತುಂಬಾ ಜೇನುತುಪ್ಪದಲ್ಲಿ ಹಾಕಿದ ರಸಬಾಳೆಯಹಣ್ಣು ತುಂಡು ಬಂತು. ಜೊತೆಯಲ್ಲಿಯೇ ಬಿಸಿ ನೀರು, ಒಂದು ಚೌಕ. ಸಾಹೇಬನು ಆದನ್ನು ಪ್ರೀತಿಯಿಂದ ಸವಿದು ಹಣ್ಣು ಬಹು ಸೊಗಸಾಗಿದೇರಿ ಅಂದ. ನಾಯಕನು ಕ್ಯಾಂಪಿಗೆ ಕಳಿಸಿದ್ದೆ ‘ ಅಂದ.
“ಓಹೋ ಹೌದು. ನಿನ್ನೆ ಊಟದಲ್ಲಿ ಬಡಿಸಿದ್ದರು. ಆದರೆ ಅದು ತಮ್ಮ ಕ್ಯಾಂಪಿಸಿಂದ ಬಂದದ್ದು ಅಂತ ತಿಳಿಯಲಿಲ್ಲ. ವಿಚಾರಿಸು ವುದಕ್ಕೆ ಪುರಸೊತ್ತಿರಲಿಲ್ಲ. ”
“ತಾವು ಒಂದು ದಿನ ನಮ್ಮ ಔತಣಕ್ಕೆ ಬಂದರೆ-”
“ಇನ್ನೇನು ನೀವು ಇಂಥಾವರು ಎಂದು ಈಗಲ್ಲವೆ ತಿಳಿದದ್ದು. ಇನ್ನೇನು ಬಿಡಿ. ತಿಂಗಳಿಗೆ ಒಂದುಸಲವಾದರೂ ನಿಮ್ಮ ಕಡೆ ಬರೋಣ. ಅದು ಪುಂಡು ಕೊಂಪೆಯಾಗಿದ್ದರೆ ವಾರಕ್ಕೊಂದುಸಲ ಬಂದು ಬಿಡೋವೆ. ಅಲ್ಲಿ ನೀವು ಇದ್ದು ಎಲ್ಲಾ ಶಾಂತವಾಗಿದೆ. ಅದರಿಂದ ನಿಮ್ಮನ್ನು ನೋಡೋಕೇ ಬರಬೇಕು.”
“ಪುಂಡು ಕೊಂಪೆ ಮಾಡಿಸಲಾ ಹೇಳಿ.”
” ಬೇಡಿ. ಪಾಪ. ಜನ ಬಲುನೊಂದು ಬಿಡುತಾರೆ. ನಾನು ಬರೀತೀನಿ. ಸರಿ. ಹೊತ್ತಾಯಿತು. ನಾನಿನ್ನು ಹೋಗಿ ಬರು ತ್ತೇನೆ. ಹುಜೂರು ಕಾದಿರುತ್ತಾರೆ.”
” ಸರಿ ಬುದ್ದಿ ”
“ನೀನು ಬಾರಯ್ಯ. ಅಲ್ಲಿ ಅಪ್ಪಣೆ ಆದುದು ಹೇಳುತ್ತೇನೆ. ಬಂದು ನಿಮ್ಮ ಖಾವಂದ್ ರಿಗೆ ಹೇಳುವೆಯಂತೆ ! ”
“ಅವನೇಕೆ ನಿಮ್ಮ ಪಾದ ! ಹೆಂಗೂ ಕುದುರೆ ಬಂದಿದೆ, ತಾವೂ ಕುದುರೆಯ ಮೇಲೆ ಬಂದಿದ್ದೀರಿ. ಬಾ ಆಂದರೆ ಜೊತೇಲೇ ಬರುತೀನಿ.”
” ಬನ್ನಿ. ಅದಕ್ಕೇನು?”
ನಾಯಕನು ಸುಲ್ತಾನ್ ಹತ್ತಿ ಜೊತೆಯಲ್ಲಿ ಬರುತ್ತಿದ್ದನು. ಆ ಕುದುರೆ ನೋಡಿ ಸಾಹೇಬರಿಗೆ “ಇವನೋ ಡೆಪ್ಯುಟೀಕಮೀಷನರ್ ? ನಾನೋ?” ಎಂದು ಸಂದೇಹ ಬಂತು.
ಹುಜೂರುಸವಾರಿ ಡೆಪ್ಯುಟೀಕಮೀಷನರ್ ಹೇಳಿದುದನ್ನು ಕೇಳಿ ನಕ್ಕು ಬಿಟ್ಟರು. ಆ ಅವರು ಅ ಉತ್ಸಾಹದಿಂದ ಇದ್ದರೆ, ನಾವೇಕೆ ಅಡ್ಡ ಬರಬೇಕು ? ಅವರಿಂದ ನಮಗೆ ಕೀರ್ತಿ ಆಗಬಹುದು ಎಂದು ಹೇಳಿ – ಫಾರೆಸ್ಟ್ ಆಫೀಸರ್ಗೆ ಹೇಳಿ ಮೂರು ಹಂದಿ ಸಿದ್ಧವಾಗಿರಬೇಕು ಎಂದು” ಎಂದು ಹೇಳಿ ಅತಿಥಿಗಳ ಯೋಗಕ್ಷೇಮ ನೋಡಿ ಕೊಳ್ಳಲು ಹೋದರು.
ನಾಯಕನಿಗೆ ಅದನ್ನು ಕೇಳಿ ಹಿಡಿಸಲಾರದಷ್ಟು ಸಂತೋಷ ವಾಯಿತು. “ನಮ್ಮ ಪೂರ್ವಿಕರು ಯುದ್ಧಕ್ಕೆ ಹೋಗಿ ಗೆದ್ದು ಬರು ತ್ತಿದ್ದರು: ನಾವು ಬೇಟೆಯಲ್ಲಾದರೂ ಗೆದ್ದು ಬರಬೇಡವಾ ಏನು ಮಹಾ! ಆನೇಕಾಡಿನ ಮನೆತನದ ಕೀರ್ತಿ ಲಂಡನ್ ಅರಮನೇಲೂ ಮೊಳಗಲಿ.” ಎಂದುಕೊಂಡು ಕುದುರೆಯ ಮೇಲೆ ಹಿಂತಿರುಗಿದನು.
ಅವನಿಗೆ ಅದುವರೆಗೂ ಮಲ್ಲಿಯ ಯೋಚನೆ ಇರಲಿಲ್ಲ. ಗುಡಾರದ ಹತ್ತಿರಕ್ಕೆ ಬರುತ್ತಲೂ ಚೋಳಬ್ರಹ್ಮಹತ್ಯೆಯ ಹಾಗೆ ಕಾಣಿಸಿ ಕೊಂಡಿತು. “ಇದೀಗ ಚೆನ್ನಾಯಿತು. ಭಾರಿಯ ಬೊಂಬನ್ನೂ ಸಣ್ಣ ದುಂಬಿ ಕೊರೆಯುವ ಹಾಗೆ ಆಗದಲ್ಲಾ ನನ್ನ ಬಾಳು. ಇರಲಿ ಬಿಡು. ಭಾರಿಯ ಯೋಚನೆ ಇದ್ದು ಬೇಟೆಯಲ್ಲಿ ಮುಳುಗಿದಾಗ ಇದು ಬರೋಕಿಲ್ಲ. ಹಂಗೇ ಮಾಡೋದು ? ಎಂದಿತು ಒಂದು ಮನಸ್ಸು ಇನ್ನೊಂದು ಮನಸ್ಸು “ಅವಳನ್ನೂ ಕರೆದುಕೊಂಡು ಹೋಗಬಾರೆ ದೇನು? ” ಎಂದಿತು. ಅದಕ್ಕೆ “ಬೇ! ಛೇ! ಅದು ಹೆಂಗೆ ಸಾಧ್ಯ ? ಆ ಕಂದ ಕುದುರೆಯ ಮೇಲೆ ಕೂತುಕೋಲಾರದು. ಅಲ್ಲಡಿ ಆ ರಾಕ್ಷಸ ಹಂದಿಗಳು ಘುರ್ ಘುರ್ ಎಂದು ನುಗ್ಗುವಾಗ ಭಾರಿ ಎದೆ ಗಾರರೇ ಹೆದರೋನಾಗ್ಯ ಆ ಕಂದ ಅದನ್ನು ಕಂಡು ಬದುಕೀತೇ ? ಎಂದು ಉತ್ತರವೂ ಬಂತು.
ಕುದುರೆ ಇಳಿದು ಗುಡಾರದೊಳಕ್ಕೆ ಹೋಗುತ್ತಿದ್ದ ಹಾಗೆಯೇ ನಿರಾಭರಣ ಸುಂದರಿಯಾಗಿ ಒಂದು ರೇಶಿಮೆ ಲಂಗ ಉಟ್ಟು ರವಕೆ ತೊಟ್ಟುಕೊಂಡಿದ್ದ ಮಲ್ಲಿಯೇ ಎದುರಿಗೆ ಬಂದಳು. ಗೌಡನು ವಿಶ್ವಾಸದಿಂದ ಅವಳನ್ನು ತಬ್ಬಿಕೊಂಡು, ಮುತ್ತು ಕೊಟ್ಟು “ಮಲ್ಲೀ ಕುದುರೆ ಕೊಟ್ಟರೆ ಹತ್ತೀಯಾ? ” ಎಂದನು. ಅವಳೂ ಸಹಜವಾಗಿ, ಸರಳವಾಗಿ, “ತಮ್ಮ ಹೆಂಗೆ ಆ ಭಾರೀ ಕುದುರೆ ಆಗೋಕಿಲ್ಲ. ಪುಟ್ಟ ಕುದುರೆ ಕೊಟ್ಟರೆ ಆಗಬೊಯ್ದು ” ಅಂದಳು.
ನಾಯಕನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ತಿರುಪದ ಮಲ್ಲಣ್ಣನ ಮಗಳಿಗೆ ಈ ಬುದ್ಧಿ ಹೊಗೆ ಬಂತು ಎನ್ನಿಸಿ ಯೋಚನೆ ಮಾಡಿಸಿತು. ಹಿಂದೆ ಯಾವಾಗಲೋ ಯಾರ ಬಾಯಲ್ಲೋ ಮಲ್ಲಣ್ಣನ ಹೆಂಡತಿ ಮಗು ಕೊಂಡುಕೊಂಡಿದ್ದುದು ಕೇಳಿದ್ದ ನೆನೆಪಾಯಿತು. ಇದರ ಮೂಲ ಹಿಡೀ ಬೇಕು ಅನ್ನಿಸಿತು. ಅದು ಮುಂದಲ ಮಾತು ಎಂದು ಅದನ್ನೂ ಅತ್ತ ನೂಕಿ, ಕುದುರೆಯನ್ನು ಒರಸುತ್ತಿದ್ದೆ ಹಕೀಂನನ್ನು ನೋಡಿ “ಬಾ! ಹಕೀಂ, ನಮ್ಮ ಮಲ್ಲಿಗೊಂದು ಪುಟ್ಟ ಕುದುರೆ”
ಒಳ್ಳೇ ಜಾತಿ ಮರಿ, ನೋಡಲಾ!” ಎಂದನು.
ಹಕೀಂನು ಎಂದಿನಂತೆ ‘ಅಪ್ಪಣೆ ಖಾವಂದ್’ ಎಂದು ಸಲಾಂ ಮಾಡಿದನು.
ಅವೊತ್ತೆಲ್ಲ ನಾಯಕನು ಹತ್ಯಾರುಗಳ ಜೊತೆಯಲ್ಲಿ ಇದ್ದನು. ಅವುಗಳನ್ನೆಲ್ಲಾ ಒರೆಸಿ, ಎಣ್ಣೆ ಮಜ್ಜನ ಮಾಡಿಸಿ, ಅವುಗಳನ್ನೆಲ್ಲಾ ಪರೀಕ್ಷೆಮಾಡಿ, ಇಡಿಸುವುದರಲ್ಲಿ ಸಂಜೆಯಾಯಿತು. ಮಲ್ಲಿ ಪಕ್ಕದಲ್ಲಿಯೆ ಇದ್ದರೂ, ಅವನಿಗೆ ಅವಳ ಕಡೆ ನೋಡಿದಾಗ ಆ ಯೋಚನೆ ಬಲವಾದರೂ, ಮತ್ತೆ ಕಾರ್ತಿಕದ ಮೋಡಗಳಂತೆ ಹಾರಿ ಹೋಗು ತ್ತಿತ್ತು. ನಾಯಕನ ಮನಸ್ಸು ತನ್ನ ಮನೆತನದ ಕೀರ್ತಿಯನ್ನು ಏಳು ಕಡಲುಗಳಿಗಾಚೆಯ ಲಂಡನ್ಸಿನ ಅರಮನೆಯಲ್ಲಿ ಪ್ರತಿಷ್ಠಾ ಪಿಸುವ ಯೋಚನೆ ತಾನೇ ತಾನಾಗಿತ್ತು.
*****
ಮುಂದುವರೆಯುವುದು