ಮಲ್ಲಿ – ೩

ಮಲ್ಲಿ – ೩

ಡೆಪ್ಯುಟೀಕಮೀಷನರ್ ಸ್ವಂತವಾಗಿ ಸೈನ್ಮಾಡಿರುವ ಪತ್ರ ಬಂದಿದೆ ಪಟೇಲರಿಗೆ. ಊರಿಗೆ ಊರೇ ಬೆರೆತುಕೊಂಡುಹೋಗಿದೆ. “ರಾಣಿ ಮೊಮ್ಮಗ ಬರುತಾರಂತೆ : ಈಗ ನಮ್ಮ ಬುದ್ದಿಯವರು ಹೋಗಬೇಕಂತೆ” ಎಂದು ಊರಿನವರಿಗೆಲ್ಲಾ ಸಂತೋಷ. “ಏನೇ ಅನ್ನು, ದೊಡ್ಮಬುದ್ಧಿಯವರಂಗಲ್ಲ ಇವರು. ಅವರು ಊರುಬಿಟ್ಟು ಇನ್ನೆಲ್ಲೂ ಹೋಗುತ್ತಲೇ ಇರಲಿಲ್ಲ. ಇರೋವರೆಗೂ ಎಲೇಮರೇ ಕಾಯಂಗೆ ಇದ್ದು ಶಿನನ ಪಾದ ಸೇರಿದರು. ಇವರು ಹಂಗಲ್ಲ. ನೋಡು ಸುಬೇದಾರ್ರು, ಸಬ್ಡಿನಿರ್ಜರು, ದುಪಟೀಕಮೀಷನ್ರವರೆಗೂ ಹತ್ತಿ ಬುಟ್ಟವರೆ. ಈಗ ರಾಣಿ ಮೊಮ್ಮಗನ್ನೇ ನೋಡತಾರೆ ಅಂದಮೇಲೆ ಮಹಾರಾಜರವರೆಗೂ ಹೋಗಲೇಬೇಕೋ? ಹುಟ್ಟಿದರೂ ಇಂತಾ ಮಗ ಹುಟ್ಟಬೇಕು ಮನೇಲಿ. ನೋಡು ಆನೇಕಾಡನೋರ ಮನೆತನ ಎಂಥಾದ್ದು ಅಂತ ಭೂಲೋಕಕ್ಕೆಲ್ಲ ಹಬ್ಬಿ ಬಿಡುತದೋ! ಭಲೇ ಭಲೇ” ಎಂದು ಒಬ್ಬ ಮುದುಕ ಅಂದ.

“ಈ ನಮ್ಮ ಬುದ್ಧಿ ಯೋರಿಗೆ ಇಂಗ್ಲೀಷು ಅಷ್ಟು ಬಂದಿರೋದಲ್ಲಾ ಬೇಕಾದರೆ ರೆವಿನ್ಯೂ ಕಮಿರ್ಷರು, ಕೌನ್ಸಿಲ್ಲರು, ಕೊನೆಗೆ ದಿವಾನ್ಗಿರಿ ಕೂಡ ಮಾಡೇ ಮಾಡೋ ಬುದ್ದಿ. ಏನು ಮಾಡೋದು ; ಕಲೀಲಿಲ್ಲ.”

” ಹಂಗಂತ ಅವರಿಗೇನಾ ಕಮ್ಮಿಯಾಗಿರೋದು ? ಈ ಸುತ್ತ ಮುತ್ತಲಿನಲ್ಲಿ, ಯಳಂದೂರು ಜಹಗೀರುದಾರನ್ನ ಬಿಟ್ಟರೆ, ಈ ಗತ್ತು, ಈ ಗಮ್ಮತ್ತು, ಯಾರಿಗುಂಟು ? ಅವರಿಗೆ ಇಂಗ್ಲೀಷ್ ಬಂದು ಅವರು ಅಧಿಕಾರ ಮಾಡಿದ್ದರೆ, ಅದು ನಮ್ಮ ಪುಣ್ಯಕ್ಕೆ ಆಯಿತಿತ್ತು.”

” ಈಗತಾನೇ ಏನಂತೆ ? ಇನ್ನೂ ಅವರಿಗೆ ಮುವ್ವತ್ತೋ ಮುವ್ವ ತ್ತೈದೋ ? ಈಗಲೂ ಕಲೀಬೇಕು ಅಂದರೆ ಬಹಳ ದೊಡ್ಡದಾ! ಅವರು ಮನಸ್ಸು ಮಾಡಲಿ. ಈ ಠಸ್ ಪುಸ್ ಹ್ಯಾಟ್ ಬೂಟ್ ಎಲ್ಲಾ ಒಂದೇ ವರುಷದಲ್ಲಿ ಕಲೀದಿದ್ದರೆ, ನನ್ನ ಹೆಸರು ಬೇರೆ ಇಡು.”

ಹೀಗೆ ಊರ ಅರಳಿಯ ಕಟ್ಟೆಯಮೇಲೆ ಎಲ್ಲರೂ ಎಳೆ ಬಿಸಿಲು ಕಾಯಿಸಿಕೊಳ್ಳುತ್ತ ಹರಟೆ ಹೊಡೆಯುತ್ತ ಕುಳಿತಿರುವಾಗ, ಕೆಂಪಿಯು ಅತ್ತ ಕಡೆ ನೀರಿಗೆ ಹರವಿ ತಕೊಂಡು ಹೊರಟಿದ್ದಳು. ಊರ ಗೌಡರೆಲ್ಲ ಕೂತಿರುವಾಗ ತಾನು ಬಿರುಬೀಸಾಗಿ ಹೊರಟರೆ ಆದೀತೆ ? ಮುಸುಕು ನೇರವಾಗಿ ತಲೆತುಂಬಾ ಹೊದೆದುಕೊಂಡು, ಸೆರಗು ಎಳೆದು ಕೊಂಡು ಮೈ ತುಂಬಾ ಹೊಡೆದುಕೊಂಡು, ತಲೆ ಬಗ್ಗಿಸಿಕೊಂಡು ಹೊರ ಟಳು. ಅಲ್ಲಿ ಅಡಕೆ ಹಾಕಿಕೊಂಡು ಹೊಗೆಸೊಪ್ಪು ತಿಕ್ಕುತ್ತ ಕುಳಿ ತಿದ್ದ ಗೌಡನೊಬ್ಬನು “ಏನು ಕೆಂಪಕ್ಕ, ನಿಮಗೂ ಪಯಣವಂತೆ ?” ಅಂದನು.

ಅವಳು ತನ್ನ ಸಂತೋಷವನ್ನು ಮುಚ್ಚಿಕೊಳ್ಳಲಾರದೆ, ಹೊರ ಸೂಸುವವಳಂತೆ ಮೊರದಗಲವಾಗಿರುವ ಮೊಕದ ತುಂಬಾ ನಗುವನ್ನು ಹಿಡಿತವಾಗಿ ನಗುತ್ತಾ, “ಏನೋ ಹಿರೀಕರ ಪುಣ್ಯ ನಿಮ್ಮ ಪಾದ. ನಿಮ್ಮೂರು ಬಂದು ಸೇರಿದೋ ; ನಿಮ್ಮ ಹೊಟ್ಟೆಯಲ್ಲಿ ಇಟ್ಟು ಕೊಂಡು ಕಾಪಾಡುತಿದೀರಿ.” ಅಂದು ಮುಂದೆ ಹೊರಟು ಹೋದಳು.

ಇನ್ನೊಬ್ಬನು “ಏನೇ ಅನ್ನು, ಮಾನವಂತೆ, ಹಲ್ಕಾಗಿಲ್ಕಾ ಅಲ್ಲ !” ಅಂದನು.

“ಅಂತಾ ಚೆಲ್ಲಾಟ ಆಡಿದ್ದರೆ, ನಮ್ಮೂರಲ್ಲಿ ನಿಲ್ಲಾಕೇ ಆಗುತಿರಲಿಲ್ಲ. ಒಂದೇ ದಿನ. ಓಡಿಸಿ ಬುಡುತ್ತಿದ್ದೊ! ಅದೂ ನಾಯ ಬುಟ್ಟು? ಅಂದ ಇನ್ನೊಬ್ಬ.

ಆ ಕೊನೆಯಲ್ಲಿ ಕೂತಿದ್ದವನ್ಕು “ಅವಳ ಮೊಕದ ಮೇಲೆ ಆ ರೂಪಾಯಗಲದ ಕುಂಕುಮ ಮೊಕದ ತುಂಬಾ ಅರತಿಣ, ನೋಡಿದರೆ, ಎಷ್ಟು, ಸಂತೋಷವಾಗುತ್ತದೆ ಅಂತೀಯಾ ?” ಅಂದೆ.

“ಎಲಾ! ಬಿಸಿಲಾಯಿತು. ಇನ್ನು ಹೊಲಗದ್ದೆ ಕಡೆ ನೋಡಿ ಕೊಂಡು ಬಸೋಕಿಲ್ಲವಾ? ಏಳೇಳಿ. ಹಗಲ ಮಾತು ಕೆಲಸ ಗೇಡು.”

ಎಲ್ಲರೂ ಎದ್ದು ಒದರಿಕೊಂಡು ಹೊರಟರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂಸೆ ಏಕೆ!
Next post ಕೋಲಾಟದ ತುಂಡು ಪದಗಳು (ಕೊಳೂಲಾಟ ಕೊಳೂಲಾಟ)

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…