ಪಡಸಾಲೆಯಲ್ಲಿ ನೇತು ಹಾಕಿದ್ದ ತಾತನ ಚಿತ್ರ ನೋಡುತ್ತ ನಿಂತಿತ್ತು ಮಗು.
“ಅಮ್ಮ! ತಾತಂಗೆ, ಕಣ್ಣು, ಮೂಗು, ಬಾಯಿ, ಎಲ್ಲಾ ಇದೆ ಗಡ್ಡ ಏಕೆ ಇಲ್ಲ?” ಎಂದು ಕೇಳಿತು.
“ತಾತಂಗೆ ಗಡ್ಡ ಇದೆ ಅಲ್ಲ, ಕಾಣಿಸಲಿಲ್ಲವೆ?” ಎಂದಳು ತಾಯಿ.
“ಅಲ್ಲಿ ಬರೀ ಕೂದಲಿದೆ ಗಡ್ಡವಿಲ್ಲ” ಎಂದಿತು ಮಗು.
ಅಷ್ಟರಲ್ಲಿ ತಂದೆ ಅಲ್ಲಿಗೆ ಬಂದು “ಮಗು, ನಿನಗೆ ಹಣೆಯ ಮೇಲೆ ಬರಿ ಕೂದಲಿದೆ ತಲೆ ಇಲ್ಲ ಅಲ್ಲವೇ?”, ಅಂದರು.
“ಅಮ್ಮ! ಹಾಗಾದರೆ ನಿನಗೆ, ನನಗೆ, ತಾತಂಗೂ ತಲೆ ಇಲ್ಲ” ಎಂದಿತು ಮಗು. ಮಗುವಿನ ಮುಗಿಯದ ವಾದಕ್ಕೆ ಮುಕ್ತಾಯ ಹಾಡಿದರು ಅಪ್ಪ, ಅಮ್ಮ.
*****