ಮುಗ್ಧ ಮಾನವನು ಭಕ್ತಿ ಗೈಯುವಾಗ
ಮಾರಣ ಹೋಮ ಮಾಡುವುದು ಶೋಭೆಯೆ!
ಇಂಚು ಇಂಚು ಭಾವಗಳಿಂದ ಜೀವಿಸುವಾಗ
ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!!

ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ
ಕುಣಿಯುವ ನೀವು ಬಾಳು ಮೋಜೆಂದಿರಾ!
ದುರಾಶೆ, ದುಸ್ಸಹಾಸಗಳಲಿ ಮರೆಯುವ ನೀವು
ಕ್ರೂರ, ದುಷ್ಟತೆಗಳೇ ಪೂಜೆಯೆಂದಿರಾ!!

ದುರಾಲೋಚನೆಯೊಂದೆ ಕಷ್ಟಕಿಡುವುದು
ಮೊಸವೊಂದೆ ನಮಗೆ ಪತನ ಕೆಳೆವುದು
ಆದರೆ ಗುಂಡಿಟ್ಟು ನೀವು ಹತ್ಯೆ ಮಾಡಿದವರು
ತಪ್ಪಿದಲ್ಲ ಕರ್‍ಮ ನಿಮಗೆ ನರಕಕ್ಕಳೆವುದು

ಮನಕ್ಕೆ ನೋವುಂಟು ಮಾಡುವುದೆ ಪಾಪ
ಆದರೇನು! ನಿಮ್ಮ ಚಿತ್ರ ಹಿಂಸೆಗೆ ಲೆಕ್ಕವೆ
ಜನ್ಮ ಜನ್ಮಗಳಿಗೂ ಹತ್ಯೆಗೊಳಗಾಗುವಿರಿ
ನಿಮ್ಮ ಪಾಲಿಗೆ ನಿತ್ಯವು ದುಕ್ಕದುಕ್ಕವೆ

ದೇವನು ಸೃಷ್ಟಿಸಿದ ಈ ಧರಿತ್ರಿಯು
ಎಲ್ಲರ ಪಾಲಿನ ಇದು ಹೂದೋಟ
ಈ ಹೂದೋಟಕ್ಕೆ ಹಾಳಾಗಿಸುವ ನಿಮಗೆ
ಮಾಣಿಕ್ಯ ವಿಠಲನ ರುದ್ರನೋಟ
*****