ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಕನಸುಗಳ ಬಗೆಗೆ ವಿಜ್ಞಾನಿಗಳ ಶೋಧನೆ

ಮನುಷ್ಯನಿಗೆ ಕನಸುಗಳದ್ದೇ ಒಂದು ಸಾಮ್ರಾಜ್ಯ. ಪ್ರತಿಯೊಬ್ಬ ವ್ಯಕ್ತಿಗೂ ಹುಚ್ಚರಿಗೂ ಕೂಡ ಕನಸುಗಳು ಬಿದ್ದು ರೋಚಕ ಅನುಭವ ನೀಡಿದ ಸತ್ಯವನ್ನು ಅನೇಕ ವಿಜ್ಞಾನಿಗಳು ಕಂಡು ಹಿಡದು ವಿಧ ವಿಧವಾಗಿ ವಿಶ್ಲೇಶಿಸಿದ್ದಾರೆ.

“ಸ್ವಪ್ನಗಳು ದೇಹಕ್ಕೆ ಒಳ್ಳೆಯ ಆರಾಮ ದೊರಕಿಸಿಕೊಟ್ಟು ಮನಶ್ಯಾಸ್ತ್ರವನ್ನು ಕಾಪಾಡುತ್ತವೆ ಎಂಬ ಅಂಶವನ್ನು ಸಂಶೋಧನೆ ಮಾಡಿದ ಚಿಕಾಗೋ ವಿ.ವಿ.ಯ ಡಾ|| ಕ್ಲೈಟನ್ ಹಾಗೂ ಅವರ ಶಿಷ್ಯರಾದ ಡಾ || ಡಿಮೆಂಟ್ ಅವರು ತೀರ್‍ಮಾನಕ್ಕೆ ಬಂದಿದ್ದಾರೆ. ಜಗದ್ವಿಖ್ಯಾತ ವಿಜ್ಞಾನಿ ಪ್ರಾಯ್ಡ್ ಅವರು ಕನಸುಗಳು ನಮ್ಮ ಅತೃಪ್ತಕಾಮನೆಗಳನ್ನು ಪೂರೈಸಿಕೊಳ್ಳುವ ಏಕೈಕ ಸಾಧನೆ” ವೆಂದು ಹೇಳಿದ್ದಾರೆ. ಮನುಷ್ಯನಿಗೆ ಹುಟ್ಟಿಂದಿನಿಂದಲೇ ಸ್ವಪ್ನಗಳು ಬೀಳಲಾರಂಭಿಸುತ್ತವೆ. ನಾವು ಸ್ವಪ್ನಾವಸ್ಥೆಯಲ್ಲಿದ್ದಾಗ ನಮ್ಮಮಿದುಳಿನಿಂದಲೂ ನಿದ್ರಾವಸ್ಥೆಯಲ್ಲಿ ಈ ಬಗೆಯ ತರಂಗಗಳು ಏಳುವುದನ್ನು ಗಮನಿಸಿ ಅವುಗಳೂ ಕನಸು ಕಾಣುತ್ತವೆ, ಎಂಬ ಅಂಶವನ್ನು ಬೆಳಕಿಗೆ ತಂದರು.

ಡಾ || ಕ್ಲೈಟನ್ ಅವರು ನೂರುಮಂದಿ ನಿದ್ರಿತರನ್ನು ಸಾವಿರ ರಾತ್ರಿಗಳ ವರೆಗೆ ಪರೀಕ್ಷಿಸಿ ಕೆಲ ಉಪಯುಕ್ತ ಅಂಶಗಳನ್ನು ಹೂರಗೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ನಾವು ಕಾಣುವ ಕನಸುಗಳು ದೃಷ್ಟಿರೂಪಕದಲ್ಲಿರುವದರಿಂದ ಸ್ವಪ್ನಾವ್ಯವಸ್ಥೆಯಲ್ಲಿ ನಮ್ಮಕಣ್ಣಾಲಿಗಳು ಚಲಿಸುತ್ತವೆ. ವ್ಯಕ್ತಿಯೊಬ್ಬ ಒಂದು ರಾತ್ರಿಯಲ್ಲಿ ಸರಾಸರಿ ೪ ಕನಸುಗಳನ್ನು ಕಾಣುತ್ತಾನೆ, ಎಂಬುದಕ್ಕೆ ಡಾ|| ಕ್ಲೈಟನ್‌ರ ಅಭಿಪ್ರಾಯವಾಗಿದೆ. ಕನಸು ಕಾಣುವಾಗ ನಮ್ಮ ಬಳಿ ನಡೆಯುವ ಘಟನೆಗಳು ಒಂದು ಭಾಗವಾಗಿ ಮಾರ್‍ಪಾಡಾಗುವ ಸಂಭವವಿದೆ ಎಂದು ಅವರು ಹೇಳುತ್ತಾರೆ. ಯಂತ್ರಜ್ಞನೊಬ್ಬ ಗಹನವಾದ ತಾಂತ್ರಿಕ ಸಮಸ್ಯೆಯೊಂದನ್ನು ಕುರಿತು ಪರಿಹಾರಕ್ಕಾಗಿ ಹಾತೊರೆಯುತ್ತ ನಿದ್ರೆಹೋದಾಗ ನಡುರಾತ್ರಿಯಲ್ಲಿ ಆತ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾನೆ. ಆ ಕ್ಷಣದಲ್ಲಿಯೇ ಅದಾವುದೋ ಅವ್ಯಕ್ತ ಚೇತನವೊಂದು ಅವನ ಸಮಸ್ಯೆಗೆ ಉತ್ತರ ದೊರಕಿಸಿಕೊಟ್ಟಿರುತ್ತದೆ. ಧಡಬಡಿಸುತ್ತಾನೆ. ಅವ್ಯಕ್ತವಾಗಿ ಸಮಸ್ಯೆಗೆ ಉತ್ತರ ಸಿಕ್ಕಂತಾಗಿರುತ್ತದೆ.

ಇಂಥಹ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ನಮ್ಮ ದೈನಂದಿನ ಕಾರ್‍ಯದಲ್ಲಿ ಬಗೆಹರಿಯದ ಎಷ್ಟೋ ಸಮಸ್ಯೆಗಳು ಸ್ವಪ್ನದಲ್ಲಿ ಸರಳರೂಪ ತಾಳಿ ಪರಿಹಾರದೊರಕುತ್ತವೆ. ಅದರಲ್ಲೂ ವಿಜ್ಞಾನಿಗಳು, ತಾಂತ್ರಿಕ ತಜ್ಞರು, ವೈದ್ಯರು, ಸಾಹಿತಿಗಳು ಈಚೋದ್ಯದ ಪ್ರಚೋದನೆ ಪಡೆದು ತಮ್ಮ ಪ್ರತಿಭೆಯನ್ನು ವೃದ್ಧಿಸಿಕೊಂಡಿದ್ದಾರೆ. ಟಾರ್‍ಟಿಸಿ ಎಂಬಾತನಿಗೆ “Devils Thrill” ಎಂಬ ಸ್ವರಪ್ರಸಾರ ಸ್ವಪ್ನಾವಸ್ಥೆಯಲ್ಲಿಯೇ ಹೊಳೆಯಿತು. ಕೊಲ್‌ರಿಚ್ ಎಂಬ ಕವಿ ಕನಸಿನಲ್ಲಿಯೇ ಬರೆದ ಕವನವೊಂದು ಜನಪ್ರಿಯವಾಗಿ ಎಲ್ಲರ ಮನಸ್ಸನ್ನು ಆಕರ್‍ಷಿಸಿತು. ಭಾರತದ ಪ್ರಸಿದ್ಧ ಗಣೀತತಜ್ಞರಾದ ಶ್ರೀನಿವಾಸ ರಾಮಾನುಜಮ್ ಕೆಲವು ಕಠಿಣ ಸಮಸ್ಯೆಗಳಿಗೆ ಉತ್ತರದೊರಕದಿದ್ದಾಗ ಅವುಗಳನ್ನೇ ಕುರಿತು ಯೋಚಿಸುತ್ತ ನಿದ್ರೆ ಹೋಗುತ್ತಿದ್ದರು. ಸ್ವಪ್ನದಲ್ಲಿ ಅವರಿಗೆ ಪರಿಹಾರ ದೊರೆತಾಗ ತಕ್ಷಣವೇ ಹುಚ್ಚನಂತೆ ಎದ್ದು ಅದನ್ನು ಒಂದು ಕಾಗದದಲ್ಲಿ ಬರೆದಿಡುತ್ತಿದ್ದರು. ವಿಶ್ವಮಾನ್ಯ ತತ್ವಜ್ಞಾನಿ ಹಾಗೂ ದಾರ್‍ಶನಿಕ ಬರ್‌ಟ್ರಾಂಡ್‌ರಸಲ್ಲರು ತಮ್ಮ ಆತ್ಮ ಚರಿತ್ರೆಯಲ್ಲಿ ಇಂಥಹ ಕನಸಿನ ಲೋಕದ ಬಗೆಗೆ ವಿವರಿಸಿದ್ದಾರೆ.

ಜೀವೋತ್ಪತ್ತಿಯ ಬಗೆಗೆ ವಿಕಾಸವಾದವನ್ನು (Theory of Evolution) ನಿರೂಪಿಸಿದ ವಿಶ್ವವಿಖ್ಯಾತ ವಿಜ್ಞಾನಿ ಜಾರ್‍ಲ್ಸ್‌ ಡಾರ್‍ವಿನ್ ಕೂಡ ಮನಸ್ಸಿನ ಈ ನಿಘೂಡ ಚೇತನದ ಪ್ರಯೋಜನ ಹೊಂದಿದ್ದರು. ಕೆಲವು ವಿಜ್ಞಾನಿಗಳು ಅರೆ ನಿದ್ರೆಯಲ್ಲಿದ್ದಾಗ ಸುತ್ತಮುತ್ತಲಿನ ವಾತಾವರಣವು ಪ್ರಶಾಂತವಾಗಿದ್ದಲ್ಲಿ ಮೆದುಳಿಗೆ ಆರಾಮದೊರೆತು ಅದು ಹೆಚ್ಚು ತ್ವರಿತವಾಗಿ ಕಾರ್‍ಯೋನ್ಮುಖವಾಗುತ್ತದಷ್ಟೇ ಎಂದು ಹೇಳಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡವಿನಲ್ಲಿ
Next post ಅತ್ತೆಸೊಸೆಯರ ಜಗಳ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…