ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ
ಕೆಂಪೇ ಜೋತರದಾ ರಸಬಾಳೀ
ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ
ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ
ಕಾದೇ ಹಿಂದೆ ಹೋ ಗವಾಗೇ ಬಳಿಯಾ ಜರಿದಾನಯ್ಯಾ
ಕೋಲಣ್ಣಾ ಸಂಪೂಗಿಯೂ ಕೋಲಣ್ಣಾ ಮಲ್ಲೂಗಿಯೂ
ಕೆಂಪೀ ಜೋತರದಾ ರಸಬಾಳೀ
ಪೊನ್ನಾಗನ ಹಬ್ಬಕೆ ಹೋಗೀ ನೆಡದಾ ತುಂಬೀಸಾಲೆನುಟ್ಟಿ
ಯಾವಾಗಿಂದ ಹರ್ಕಂಡಿಯೇ ನೆಡವಾ ಮೇಲಿನ ಸಾಲೇ
ಕಂಟಿಗಿಂದೂ ಕೆಳಗೇ ಕಂಟೆಮ್ಮೆ ಕಾಯುವನೇ
ಕಾದೀ ಹಿಂದೆ ಹೋ ಗುವಾಗೇ ಹರದಾನಯ್ಯಾ
ಕೋಲಣ್ಣಾ ಸಂಪುಗಿಯೂ ಕೋಲಣ್ಣಾ ಮಲ್ಲುಗಿಯೂ
ಕೆಂಪೀ ಜೋತಿರದಾ ರಸಬಾಳೇ
ಪೊನ್ನಾಗನ ಹಬ್ಬಕೆ ಹೋಗೀ ಹಣಿಯಾ ತುಂಬಾ ಗಂದಾನಿಟ್ಟು
ಯಾತಾರಿಂದಾ ಉದ್ರಕಂಡಿಯೇ ಹಣ್ಯಾಮೇನಿನ ಗಂದಾ?
ಕಂಟೇಗಿಯಾ ಕೆಳಗೇ ಕುಂಟೆಮ್ಮೀ ಕಾಯುವಾನೇ
ಕಾದೇ ಹಿಂದೆ ಹೋ ಗುವಾಗೇ ವಿದ್ಯಾನಯ್ಯಾ
*****
ಹೇಳಿದವರು: ಜಟ್ಟಪ್ಪ ಗೋಯ್ದಪ್ಪ ನಾಯ್ಕ, ೫೧, ತೇಗಿನಮಕ್ಕಿ,
ಉಮೇಶ ಹೊನ್ನುಪಟಗಾರ. ದಿನಾಂಕ ೨೬/೩/೦೮
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.