ಶಿವನೇ ನೆನೆಯೋ ಶಿವನೇ ನೆನೆಯೋ
ಈ ಊರಾ ರಾಮದೇವರ ನೆನೆಯೋ
ಈ ಊರ ಹಿತ ಕಾಯೋರ ನೆನೆಯೋ
ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ
ತೇರೋ ತೇರೋ ಹೂವಿನ ತೇರೋ || ೧ ||
ಬಾಗಿಲಲೆ ಬಲಿಯಾರಿ ದಂಡು
ಮೇನೆ ಗುರಗುಂಜೀ ಶೆಂಡೂ
ನಾರೀ ಬಂದಾನೇ ನಲ್ಲಾ ಬಾಗಿಲ ಮುಂದೇ
ತಾನ ನಾನಾ ತಂದಾನೋ ತಾನೀನೋ ತಾನಾ || ೨ ||
ಕಾಲಿಗೆ ಕಿರುಗೆಜ್ಜೆ ಕಟ್ಟೀ ಹೂವಿನಂತಾ ತೇರಕಟ್ಟಿ
ಜನಾಮ್ನೆ ಶ್ವಾಮಿ ಭೂಮಿಗ್ವೊಂದ ನೆನೆಯೋ
ಶಿವನೇ ನಿನಗ್ಯಾತರ ಗಂದನೋ || ೩ ||
ಊರ ಶುತ್ತೇಲಿ ಮುತ್ತೇಯೋ
ಪರುವತ ದೊಡ್ಡಾ ಗುಡ್ಡೆ ಹೋ
ಗುಡ್ಡೆ ವಂದು ತಲಿಯಾ ಮ್ಯಾಲಿನ್ನೇ
ನಾಕ ಮೂಲೆ ಕಾಕಾದಾ ಕೆರೆಯೋಲೇ || ೪ ||
ಕೆರವಲಗೆ ನೀರಿನಾ ಮಘನಾನೋ
ಆವಾ ನೀರಿನೋ ಳಗೆ ಯಾತರ ಮುಗುಲಂದೋ
ನೆಲ್ಲೀದೊಂದು ತಾಂಬಾರ ಹುಟ್ಟೀಲೇ || ೫ ||
ಅವಾ ಹೂಗಿಗೊಂದ್ ಯಾತರ ಕದುರಾದೋ
ತಾಂಬಕೊಲ್ಲಿದು ನೆಲ್ಲಿಯು ಹುಟ್ಟೇಗೆ
ಯಾವದೊಂದು ತಾಂಬಾರ ಹುಟ್ಟೀಲೇ
ಅವಾ ಹುಟ್ಟಿಗೆ ಯಂತಾ ಯೆಶುಲಾದೋ || ೬ ||
ಯಂಟೂ ದಿಕ್ಕೇ ಯಂಟೇಲೆಯೇ
ನೆಡುಗೊಂದು ಶಿನ್ನಾದಾ ಕದುರಾಗೋ
ಅವಾ ಕದ್ರು ಯರೀಸಿ ವಲುಪ್ಯಾದೋ
ಪರಮತ ಪರಮೇಸ್ರಗೆ ವಲುವಾದೋ || ೭ ||
*****
ಹೇಳಿದವರು : ಕುಪ್ಪು ಮಾರು ಗೌಡ, ಕೂಜಳ್ಳಿ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.